ಬೀದರ್(ಜೂ.14): ಮಾರಕ ಕೊರೋನಾ ಲಾಕ್ಡೌನ್ನಿಂದ ಜಿಲ್ಲೆಯ ತೋಟಗಾರಿಕಾ ರೈತ ಫಲಾನುಭವಿಗಳು ಬೆಳೆದ ವಿವಿಧ ಹೂವುಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿಲ್ಲ. ಹೀಗಾಗಿ ಇಂತಹ ರೈತ ಫಲಾನುಭವಿಗಳಿಗೆ ಪರಿಹಾರ ನೀಡಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಇದಕ್ಕಾಗಿಯೇ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ.
ತೋಟಗಾರಿಕಾ ಇಲಾಖೆ ಬಿಡುಗಡೆ ಮಾಡಿದ ಸದರಿ ಅನುದಾನದಲ್ಲಿ ಬೆಳೆ ಸಮೀಕ್ಷೆ ಆಧಾರದ ಮೇರೆಗೆ ಫಲಾನುಭವಿಗಳಿಗೆ ಪರಿಹಾರ ನೀಡಲಾಗುತ್ತಿದೆ. ಪ್ರತೀ ಹೆಕ್ಟೇರ್ಗೆ ಒಂದು 25 ಸಾವಿರ ರೂ. ನೀಡಲು ಇಲಾಖೆ ಮುಂದಾಗಿದೆ. ಈಗ ತಾಲೂಕುಮಟ್ಟದ ತೋಟಗಾರಿಕ ಸಮಿತಿಯಿಂದ ಅನುಮೋದನೆ ಪಡೆದ 149 ಫಲಾನುಭವಿಗಳಿಗೆ ಈ ಹಣ ಲಭ್ಯವಾಗಲಿದೆ.
ಇನ್ನು, ವಿಸ್ತೀರ್ಣ 80.26 ಹೆಕ್ಟೇರ್ಗೆ ಒಟ್ಟು 20 ಲಕ್ಷ ರೂ. ಮೊದಲನೇ ಹಂತದಲ್ಲಿ ಬಿಡುಗಡೆ ಮಾಡಲಾಗಿದೆ. ಜೂನ್ 12ನೇ ತಾರೀಕಿನಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅನುಮೋದನೆ ಪಡೆದು ಫಲಾನುಭವಿಗಳ ಖಾತೆಗೆ ಡಿಬಿಟಿ ಮುಖಾಂತರ ಪರಿಹಾರ ಧನ ನೀಡಲು ನಿರ್ಣಯ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ‘ಕಣ್ಣೀರಿನಿಂದಲೂ ಹರಡಲಿದೆ ಕೊರೋನಾ ಸೋಂಕು‘ - ಬಿಎಂಸಿಆರ್ಐ ಸಂಶೋಧನೆಯಲ್ಲಿ ಬಯಲಾಯ್ತು ಅಚ್ಚರಿ ಸತ್ಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ