ಕಡೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಭಾವ್ಯ ಪಟ್ಟಿ

ಬಿಜೆಪಿ ರಾಜ್ಯ ನಾಯಕರು ಹಾಗೂ ಹೈಕಮಾಂಡ್ ಕೊನೆಗೂ ಸಚಿವರಿಗೆ ಖಾತೆ ಹಂಚಿಕೆಯನ್ನು ಫೈನಲ್ ಮಾಡಿದೆ. ಎಲ್ಲಾ ನಾಯಕರ ಹಾಗೂ ಸಮುದಾಯದವರನ್ನು ಸಮಾಧಾನ ಪಡಿಸಲು ಎಲ್ಲಾ ಸಮುದಾಯಗಳಿಗೂ ಸಚಿವ ಸಂಪುಟದಲ್ಲಿ ಮಣೆ ಹಾಕಲು ಮುಂದಾಗಿದೆ. ಈಗಾಗಲೇ 17 ಸಚಿವರಿಗೆ ಖಾತೆ ಅಂತಿಮವಾಗಿದ್ದು, ಆ ಕುರಿತ ಸಂಭಾವ್ಯ ಪಟ್ಟಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.

MAshok Kumar | news18
Updated:August 26, 2019, 2:55 PM IST
ಕಡೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಭಾವ್ಯ ಪಟ್ಟಿ
ನೂತನ ಸಂಪುಟದ ಸಚಿವರು
  • News18
  • Last Updated: August 26, 2019, 2:55 PM IST
  • Share this:
ಬೆಂಗಳೂರು ಆಗಸ್ಟ್​.26: ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದು ಇಂದಿಗೆ ಸರಿಯಾಗಿ ಒಂದು ತಿಂಗಳೇ ಕಳೆದಿವೆ. ಆದರೆ, ಈವರೆಗೆ ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಆಗಿಲ್ಲ. ಸಚಿವರ ಆಯ್ಕೆಯೇ ದೊಡ್ಡ ಕಗ್ಗಂಟಾಗಿದ್ದ ಬಿಜೆಪಿ ಪಾಲಿಗೆ ಖಾತೆ ಹಂಚಿಕೆಯಂತೂ ಕಬ್ಬಿಣದ ಕಡಲೆಯಾಗಿತ್ತು. ಇದೇ ಕಾರಣಕ್ಕೆ ಪಕ್ಷದಲ್ಲಿ ಅಸಮಾಧಾನವೂ ಸಿಡಿಲೊಡೆದಿತ್ತು.

ಆದರೆ, ಬಿಜೆಪಿ ರಾಜ್ಯ ನಾಯಕರು ಹಾಗೂ ಹೈಕಮಾಂಡ್ ಕೊನೆಗೂ ಸಚಿವರಿಗೆ ಖಾತೆ ಹಂಚಿಕೆಯನ್ನು ಫೈನಲ್ ಮಾಡಿದೆ. ಎಲ್ಲಾ ನಾಯಕರ ಹಾಗೂ ಸಮುದಾಯದವರನ್ನು ಸಮಾಧಾನ ಪಡಿಸಲು ಎಲ್ಲಾ ಸಮುದಾಯಗಳಿಗೂ ಸಚಿವ ಸಂಪುಟದಲ್ಲಿ ಮಣೆ ಹಾಕಲು ಮುಂದಾಗಿದೆ. ಈಗಾಗಲೇ 17 ಸಚಿವರಿಗೆ ಖಾತೆ ಅಂತಿಮವಾಗಿದ್ದು, ಆ ಕುರಿತ ಸಂಭಾವ್ಯ ಪಟ್ಟಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.

ಸಂಭಾವ್ಯ ಖಾತೆಗಳು ಹಾಗೂ ಸಚಿವರ ಪಟ್ಟಿ

ಆರ್. ಅಶೋಕ್ - ಕಂದಾಯ 

ಜಗದೀಶ್ ಶೆಟ್ಟರ್ - ಬೃಹತ್, ಮಧ್ಯಮ ಕೈಗಾರಿಕೆ

ಲಕ್ಷ್ಮಣ ಸವದಿ- ಸಹಕಾರ

ಬಸವರಾಜ  ಬೊಮ್ಮಾಯಿ - ಇಂಧನಕೆ.ಎಸ್​. ಈಶ್ವರಪ್ಪ - ಸಮಾಜ ಕಲ್ಯಾಣ

ಅಶ್ವತ್ಥ ನಾರಾಯಣ- ವೈದ್ಯಕೀಯ

ಸುರೇಶ್ ಕುಮಾರ್ - ಉನ್ನತ ಶಿಕ್ಷಣ

ಗೋವಿಂದ ಕಾರಜೋಳ- ಲೋಕೋಪಯೋಗಿ

ಶ್ರೀರಾಮುಲು- ಆರೋಗ್ಯ

ಜೆ.ಸಿ. ಮಾಧುಸ್ವಾಮಿ - ಕಾನೂನು ಮತ್ತು ಸಂಸದೀಯ ವ್ಯವಹಾರ

ಶಶಿಕಲಾ ಜೊಲ್ಲೆ - ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಸಿಸಿ ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ

ವಿ. ಸೋಮಣ್ಣ - ವಸತಿ

ಪ್ರಭು ಚೌಹಾಣ್ - ಯುವಜನ ಸಬಲೀಕರಣ ಮತ್ತು ಕ್ರೀಡೆ

ಸಿ.ಟಿ ರವಿ- ಗ್ರಾಮೀಣವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
First published: August 26, 2019, 2:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading