2018ರ ಹಿಂಗಾರು ಹಂಗಾಮಿನ ಬರ ಪರಿಹಾರ ಬಿಡುಗಡೆ; ನಾಳೆ ನೇರವಾಗಿ ರೈತರ ಖಾತೆಗಳಿಗೆ ಹಣ ವರ್ಗಾವಣೆ

ಮೊದಲ ಹಂತವಾಗಿ ರೈತರ ಖಾತೆಗಳಿಗೆ 246 ಕೋಟಿ ಹಣ ಜಮೆ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಉಳಿದ ರೈತರಿಗೆ ಬರ ಪರಿಹಾರ ಬಿಡುಗಡೆ ಆಗಲಿದೆ.


Updated:October 10, 2019, 7:24 PM IST
2018ರ ಹಿಂಗಾರು ಹಂಗಾಮಿನ ಬರ ಪರಿಹಾರ ಬಿಡುಗಡೆ; ನಾಳೆ ನೇರವಾಗಿ ರೈತರ ಖಾತೆಗಳಿಗೆ ಹಣ ವರ್ಗಾವಣೆ
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು: 2018ರ ಹಿಂಗಾರು ಹಂಗಾಮಿನ ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ತಂತ್ರಾಂಶದ ಮೂಲಕ 2018ರ ಹಿಂಗಾರು ಹಂಗಾಮಿನ ಬರ ಪರಿಹಾರ ಬಿಡುಗಡೆ ಮಾಡಿದರು. ನಾಳೆ ಮಧ್ಯಾಹ್ನದ ವೇಳೆಗೆ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಆಗಲಿದೆ. ಮೊದಲ ಹಂತದಲ್ಲಿ 4,51,362 ರೈತರಿಗೆ ಇನ್​ಪುಟ್ ಸಬ್ಸಿಡಿಯಾಗಿ 246 ಕೋಟಿ ರೂ. ಹಣ ಜಮೆ ಮಾಡಲಾಗುತ್ತದೆ. ಉಳಿದ ಹಣ ಒಂದು ವಾರದಲ್ಲಿ ಬಿಡುಗಡೆ ಮಾಡುವುದಾಗಿ ಸರ್ಕಾರ ಮಾಹಿತಿ ನೀಡಿದೆ.

2018ರ ಹಿಂಗಾರು ಹಂಗಾಮಿನಲ್ಲಿ 1397 ಕೋಟಿ ರೂಪಾಯಿ ಇನ್​ಪುಟ್ ಸಬ್ಸಿಡಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ‌ ಮಾಡಲಾಗಿತ್ತು. ಎನ್​ಡಿಆರ್​ಎಫ್ ಪ್ರಕಾರ ಕೇಂದ್ರ ಸರ್ಕಾರ 1029.39 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅದರಲ್ಲಿ ಮೊದಲ ಹಂತವಾಗಿ ರೈತರ ಖಾತೆಗಳಿಗೆ 246 ಕೋಟಿ ಹಣ ಜಮೆ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಉಳಿದ ರೈತರಿಗೆ ಬರ ಪರಿಹಾರ ಬಿಡುಗಡೆ ಆಗಲಿದೆ.

ಇದನ್ನು ಓದಿ: ಸದನದಲ್ಲಿ ಸಿ.ಟಿ ರವಿ ಟೂರಿಸ್ಟ್​​​ ಮಿನಿಸ್ಟರ್​​​ ಎಂದು ಕಾಲೆಳೆದ ಮಾಜಿ ಸಿಎಂ ಸಿದ್ದರಾಮಯ್ಯ

First published: October 10, 2019, 7:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading