ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ನೀರು ಹರಿಸಲು ಸರ್ಕಾರದ ಸಿದ್ದತೆ

ಕೆರೆಗಳಿಗೆ ಅವೈಜ್ಞಾನಿಕವಾಗಿ ನೀರನ್ನು ಹರಿಸಲಾಗುತ್ತಿದೆ ಅಂತಾ ಜಿಲ್ಲೆಯ ಕೆಲ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. 

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

  • Share this:
ತುಮಕೂರು(ನ.30): ಉಪ ಚುನಾವಣೆಯಲ್ಲಿ ಶಿರಾ ಜನರಿಗೆ ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ನೀರು ಹರಿಸಲು ಸರ್ಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ. ನೂತನ ಶಿರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ರಾಜೇಶ್ ಗೌಡ ಈಗಾಗಲೇ ಮದಲೂರು ಕೆರೆಗೆ ನೀರು ಹರಿಸುವ ಕುರಿತಂತೆ ನಡೆದಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಕುಣಿಗಲ್ ಶಾಸಕರು ಶಿರಾಕ್ಕೆ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಂ ಯಡಿಯೂರಪ್ಪ ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ಮದಲೂರು ಕೆರೆಗೆ ನೀರು ಹರಿಸುವುದಾಗಿ ವಾಗ್ದಾನ ನೀಡಿದ್ದರು. ಅದರಂತೆ ಇದೀಗ ಕೆರೆ ವ್ಯಾಪ್ತಿಯ ನಾಲೆಗಳಲ್ಲಿ ಕೆಲಸಗಳು ಭರದಿಂದ ನಡೆಯುತ್ತಿವೆ. ಮದಲೂರು ಕೆರೆಗೆ ಹೇಮಾವತಿ ನೀರು ಹರಿಸೋ ವಿಚಾರ ನೂತನ ಶಿರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ರಾಜೇಶ್ ಗೌಡ ಈಗಾಗಲೇ ಮದಲೂರು ಕೆರೆಯ ನೀರು ಹರಿಸುವ ಕುರಿತಂತೆ ನಡೆದಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ವಾಟ್ಸ್​ಆ್ಯಪ್​ನಲ್ಲಿ ಸ್ವಂತ ಸ್ಟಿಕ್ಕರ್​​ ತಯಾರಿಸುವುದು ಹೇಗೆ ಗೊತ್ತಾ?; ಇಲ್ಲಿದೆ ಟ್ರಿಕ್ಸ್​

ಪೂರ್ವನಿಗದಿಯಂತೆ ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಳ್ಳಂಬೆಳ್ಳ ಕೆರೆಗೆ 150 ಎಂಸಿಎಫ್​ಟಿ ನೀರನ್ನು ಹರಿಸಲಾಗಿದೆ. ಇನ್ನೂ ಹೆಚ್ಚುವರಿ ನೀರು ಹರಿದ ನಂತರ ಅಲ್ಲಿಂದ ನಾಲೆಗಳ ಮೂಲಕ ಮದಲೂರು ಕೆರೆಗೆ ತುಂಬಿಸಲಾಗುತ್ತದೆ. ಇನ್ನೊಂದು ತಿಂಗಳಲ್ಲಿ ಹೇಮಾವತಿ ನೀರು ಮದಲೂರು ಕೆರೆಗೆ ಹರಿದು ಬರಲಿದೆ ಎಂದು ಶಾಸಕ ಡಾ. ರಾಜೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೆ, ಕೆರೆಗಳಿಗೆ ಅವೈಜ್ಞಾನಿಕವಾಗಿ ನೀರನ್ನು ಹರಿಸಲಾಗುತ್ತಿದೆ ಅಂತಾ ಜಿಲ್ಲೆಯ ಕೆಲ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.  ಶಿರಾ ವಿಧಾನಸಭಾ ಕ್ಷೇತ್ರವು ಕೃಷ್ಣಾ ಜಲಾನಯನ ವ್ಯಾಪ್ತಿಗೆ ಒಳಪಡಲಿದ್ದು, ಕಾವೇರಿ ಜಲಾನಯನ ವ್ಯಾಪ್ತಿಯಿಂದ ಹೇಮಾವತಿ ನದಿ ನೀರನ್ನು ಹರಿಸುವುದು ಸರಿಯಲ್ಲ. ಇದಕ್ಕೆ ಸಂಪೂರ್ಣ ವಿರೋಧವಿದೆ ಎಂದು ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಪ್ರತಿಪಾದಿಸುತ್ತಿದ್ದಾರೆ.

ಈಗಾಗಲೇ 900 ಎಂಸಿಎಫ್​ಟಿ ನೀರನ್ನು ತೆಗೆದುಕೊಂಡು ಹೋಗಿರುವುದೇ ತಪ್ಪು. ಯಾವುದೇ ಕಾರಣಕ್ಕೂ ಹೇಮಾವತಿ ನದಿ ನೀರನ್ನು ಮದಲೂರು ಕೆರೆಗೆ ಹರಿಸಲು ಬಿಡುವುದಿಲ್ಲ. ಇದರ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಒಂದೆಡೆ ಬಿಜೆಪಿ ಆಶ್ವಾಸನೆ ನೀಡಿದಂತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಸಿದ್ಧತೆ ನಡೆಸಿದ್ರೆ, ಇನ್ನೊಂದೆಡೆ ಕಾಂಗ್ರೆಸ್ ಶಾಸಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನೀರು ಹರಿಸುವ ಸಂದರ್ಭದಲ್ಲಿ ವಿಚಾರ ಸಾಕಷ್ಟು ವಿವಾದ ಸೃಷ್ಟಿಸಲಿದೆ.
Published by:Latha CG
First published: