School Reopen: 6-8ನೇ ತರಗತಿ ತೆರೆಯಲು ಸರ್ಕಾರ ಸಜ್ಜು: ಶಾಲೆಗೆ ಬರಲು ಮಕ್ಕಳೂ ರೆಡಿ!

Middle School Reopen: ಹೈಸ್ಕೂಲ್, ಪಿಯು ಕಾಲೇಜು ಓಪನ್‌ ಆಗಿರುವುದರಿಂದ ಇದೀಗ ಪ್ರೈಮರಿ ಸ್ಕೂಲ್ ಸರತಿ ಬಂದಿದೆ. ಈ ಸಂಬಂಧವಾಗಿ ನಾಳೆ ಎರಡನೇ ಹಂತದ ಶಾಲಾರಂಭದ ಮಹತ್ವದ ಸಭೆ ನಡೆಯಲಿದೆ. ರಾಜ್ಯ ಸರ್ಕಾರದ ಈ ಸಭೆಯ ನಿರ್ಧಾರದ ಮೇಲೆ ಮಕ್ಕಳ ಶಾಲಾ ಭವಿಷ್ಯ ನಿರ್ಧಾರವಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಕೊರೊನಾ ಪರಿಸ್ಥಿತಿ ನೋಡಿಕೊಂಡು ಹಂತಹಂತವಾಗಿ ಶಾಲಾ ಕಾಲೇಜುಗಳನ್ನು ತೆರೆಯುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಅದರಂತೆ ಮೊದಲ ಹಂತವಾಗಿ ಹೈಸ್ಕೂಲ್ ಮತ್ತು ಪಿಯು ವಿದ್ಯಾರ್ಥಿಗಳಿಗೆ (High School and PUC) ಶಾಲೆ ಕಾಲೇಜುಗಳು ತೆರೆದಿವೆ. ಈಗಾಗಲೇ ಸುಮಾರು ಒಂದು ತಿಂಗಳಿಂದ ಈ ಮಕ್ಕಳೆಲ್ಲಾ ಶಾಲೆಗೆ ಹೋಗಿ ಬರುತ್ತಿದ್ದಾರೆ. ಹಾಗಾದ್ರೆ ಸಣ್ಣ ತರಗತಿಗಳಿಗೆ ಯಾವ ಶಾಲೆ ಆರಂಭ ಎನ್ನುವ ಪ್ರಶ್ನೆ ಮೂಡುತ್ತಿದೆ. ರಾಜ್ಯ ಸರ್ಕಾರ ಕೂಡಾ ಎಲ್ಲಾ ತರಗತಿಗಳನ್ನು ತೆಗೆಯುವ ಉತ್ಸಾಹವಿದ್ದರೂ ಎಚ್ಚರಿಕೆಯಿಂದ ಮುನ್ನಡೆಯುತ್ತಿದೆ. ಹೈಸ್ಕೂಲ್, ಪಿಯು ಕಾಲೇಜು ಓಪನ್‌ ಆಗಿರುವುದರಿಂದ ಇದೀಗ ಪ್ರೈಮರಿ ಸ್ಕೂಲ್ (Primary School Reopen) ಸರತಿ ಬಂದಿದೆ. ಈ ಸಂಬಂಧವಾಗಿ ನಾಳೆ ಎರಡನೇ ಹಂತದ ಶಾಲಾರಂಭದ ಮಹತ್ವದ ಸಭೆ ನಡೆಯಲಿದೆ. ರಾಜ್ಯ ಸರ್ಕಾರದ ಈ ಸಭೆಯ ನಿರ್ಧಾರದ ಮೇಲೆ ಮಕ್ಕಳ ಶಾಲಾ ಭವಿಷ್ಯ ನಿರ್ಧಾರವಾಗಲಿದೆ. ಈ ಸಭೆಯಲ್ಲಿ ಶಾಲೆ ಪ್ರಾರಂಭಿಸುವ ಕುರಿತು ಚರ್ಚೆ ಮಾಡಲಾಗುವುದು. ಹಂತ ಹಂತವಾಗಿ ಶಾಲೆ ಆರಂಭಿಸಲು ಸರ್ಕಾರ ರೆಡಿಯಾಗಿದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ನ್ಯೂಸ್ 18 ಕನ್ನಡಕ್ಕೆ ಹೇಳಿವೆ.

ಮೊದಲು ಪದವಿ ಕಾಲೇಜು ಆರಂಭಿಸಲಾಯಿತು. ಆಗಸ್ಟ್ 23ರಿಂದ‌ 9 ರಿಂದ 12 ರ ವರೆಗೆ ಶಾಲಾ, ಪಿಯು ಕಾಲೇಜು ಆರಂಭವಾಗಿತ್ತು. 6ರಿಂದ 8 ನೇ ತರಗತಿ ತೆರೆಯಲು ಸದ್ಯ ಶಿಕ್ಷಣ ಇಲಾಖೆ ರೆಡಿಯಾಗಿದೆ. ಆದರೆ ಇದಕ್ಕೆಲ್ಲಾ ಕೋವಿಡ್ ಟಾಸ್ಕ್ ಫೋರ್ಸ್ ಗ್ರೀನ್ ಸಿಗ್ನಲ್ ಕೊಡಬೇಕಿದೆ. ಟಾಸ್ಕ್ ಪೋರ್ಸ್ ಸಮಿತಿಯ ಸಲಹೆ ಮೇರೆಗೆ ಶಾಲೆ ಓಪನ್ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು.

ಸೆಪ್ಟೆಂಬರ್ ಮೊದಲ ವಾರದಲ್ಲಿ ಎರಡನೇ ಹಂತವಾಗಿ ಮಿಡಲ್‌ ಕ್ಲಾಸ್ ಓಪನ್ ಮಾಡುವ ಕುರಿತು ಆಲೋಚನೆ ಮಾಡಲಾಗಿದೆ. 6, 7 ಹಾಗೂ 8ನೇ ತರಗತಿ ಓಪನ್ ಮಾಡಲು ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಸಜ್ಜಾಗಿದೆ. ಶಿಕ್ಷಣ ಇಲಾಖೆಯ ಮೂಲಗಳು ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಅಧಿಕೃತ ಮಾಹಿತಿ ನೀಡಿದ್ದು ಸೆ.1ರಿಂದ 6-8ನೇ ತರಗತಿ ಶಾಲಾರಂಭ ಬಹುತೇಕ ಖಚಿತ ಎನ್ನಲಾಗಿದೆ.

ಇದನ್ನೂ ಓದಿ: Mysore Road to Kengeri Metro : ಬಹು ದಿನಗಳ ಕನಸು ನನಸು- ಮೈಸೂರು ರಸ್ತೆಯಿಂದ ಕೆಂಗೇರಿಗೆ ಇಂದಿನಿಂದ ಮೆಟ್ರೊ ಸಂಚಾರ ಶುರು

ನಾಳಿನ‌ ಸಭೆಯಲ್ಲಿ ಎರಡನೇ ಹಂತದ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಶಾಲಾರಂಭ ಕುರಿತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಶಾಲಾರಂಭ ಪ್ರಗತಿ ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ ಮೊದಲ‌ ಹಂತದಲ್ಲಿ 9-12 ಶಾಲಾಕಾಲೇಜು ಆರಂಭ ಮಾಡಲಾಗಿದೆ. ಎರಡನೆ ಹಂತದಲ್ಲಿ 6-8ನೇ ತರಗತಿ ಆರಂಭಿಸುವಂತೆ ಸಲಹೆ ನೀಡಲಾಗುವುದು. ಆದ್ರೆ ತಜ್ಞರು ನೀಡುವ ನಾನಾ ಸಲಹೆಗಳನ್ನು ಪರಿಗಣಿಸಿ ನಂತರ ಸಿಎಂ ನಿರ್ಧಾರ ಪ್ರಕಟಿಸಲಿದ್ದಾರೆ. ಮಕ್ಕಳಂತೂ ಶಾಲೆಗೆ ಹೋಗಲು ಕಾತರತೆಯಿಂದ ಕಾಯುತ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: