Decibel fixed: ರಾಜ್ಯ ಸರ್ಕಾರದಿಂದ ಲೌಡ್​ ಸ್ಪೀಕರ್​ಗೆ ಮಾರ್ಗಸೂಚಿ ಪ್ರಕಟ; ರಾತ್ರಿ 10 ರಿಂದ ತಮಟೆ, ಡಿಜೆಗಳಿಗೂ ಬ್ರೇಕ್​

ರಾತ್ರಿ 10 ರಿಂದ ಬೆಳಗ್ಗೆ 6ರ ರವರೆಗೆ ಎಲ್ಲಾ ರೀತಿಯ ಧ್ವನಿ ವರ್ಧಕ, ತಮಟೆ, ಬ್ಯಾಂಡ್, ಡಿಜೆ ಎಲ್ಲದಕ್ಕೂ ಬ್ರೇಕ್ ಹಾಕಲಾಗಿದೆ. ಆದರೆ ಅಗತ್ಯ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಮೇರೆಗೆ ಅನುಮತಿ ನೀಡಲಾಗುತ್ತೆ.

ಧ್ವನಿವರ್ಧಕ

ಧ್ವನಿವರ್ಧಕ

  • Share this:
ಬೆಂಗಳೂರು (ಮೇ 10): ರಾಜ್ಯದಲ್ಲಿ ಆಜಾನ್ ವರ್ಸಸ್ ಸುಪ್ರಭಾತ (Azan v/s Superb) ವಿವಾದ ಜೋರಾಗಿದ್ದು, ರಾಜ್ಯ ಸರ್ಕಾರ ಲೌಡ್ ಸ್ಪೀಕರ್​​ಗೆ (Loud Speaker) ಮಾರ್ಗಸೂಚಿ ಪ್ರಕಟಸಿದ್ದು, ಸುತ್ತೋಲೆ ಹೊರಡಿಸಿದೆ. ಸರ್ಕಾರದಿಂದ ಅಧಿಕೃತ ಸುತ್ತೋಲೆ ಬಿಡುಗಡೆ ಮಾಡಲಾಯಿತು. 15 ದಿನದೊಳಗೆ ಧ್ವನಿ ವರ್ಧಕಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ಹಿಂದೂ, ಮುಸ್ಲಿಂ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ರಾಜ್ಯ ಸರ್ಕಾರದ (State Government) ಮಾರ್ಗಸೂಚಿ ಅನ್ವಯವಾಗಲಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಹಾಗೂ ರಾತ್ರಿ 10 ಯಿಂದ ಬೆಳಗಿನ ಜಾವ 6 ಗಂಟೆವರೆಗೆ ನಿರ್ದಿಷ್ಟ ಸಮಯ (Time) ಹಾಗೂ ಶಬ್ದದ ಬಗ್ಗೆ ಡೆಸಿಬಲ್​ ನಿಗದಿ ಮಾಡಲಾಗಿದೆ.

ಕಾನೂನು ಉಲ್ಲಂಘಿಸಿದ್ರೆ ಕ್ರಮ ಗ್ಯಾರೆಂಟಿ

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಡಿಸೆಬಲ್ ಮಿತಿ ಇರಬೇಕು. ಕಾನೂನು ಉಲ್ಲಂಘಿಸಿದ್ರೆ, ಡಿಎಸ್ಪಿ ದರ್ಜೆಯಿಂದ ಮೇಲ್ಪಟ್ಟ ರಾಜ್ಯ ಪೊಲೀಸ್ ಮಹಾನಿರ್ದೇಶಕರ ದರ್ಜೆವರೆಗೂ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ. ಧ್ವನಿ ವರ್ಧಕ ಬಳಕೆಯಲ್ಲಿ ನಿಯಮ ಉಲ್ಲಂಘನೆ ಆದರೆ ಕ್ರಮಕೈಗೊಳ್ಳಲಾಗುತ್ತೆ. ಸಾರ್ವಜನಿಕ ಸಮಾರಂಭ ಕಾರ್ಯಕ್ರಮ ನಡೆಸುವವರಿಗೂ ಅನುಮತಿ ಕಡ್ಡಾಯ ಮಾಡಲಾಗಿದೆ.

ಸರ್ಕಾರ ನಿಗದಿ ಮಾಡಿರುವ ಡೆಸಿಬಲ್ ಎಷ್ಟು?

ಕೈಗಾರಿಕಾ ಝೋನ್ -  ಹಗಲಿನಲ್ಲಿ 75 dB  - ರಾತ್ರಿ 70 dB

ಕಮರ್ಷಿಯಲ್ ಝೋನ್ - ಹಗಲಿನಲ್ಲಿ 65 dB - ರಾತ್ರಿ  55 dB

ರೆಸಿಡೆನ್ಸಿಯಲ್ ಝೋನ್ - ಹಗಲಿನಲ್ಲಿ 55 dB - ರಾತ್ರಿ  45 dB

ಸೈಲೆಂಟ್ ಝೋನ್ - ಹಗಲಿನಲ್ಲಿ  50 dB - ರಾತ್ರಿ  40 dB

ರಾತ್ರಿ 10 ರಿಂದ ಧ್ವನಿವರ್ಧಕ, ತಮಟೆ, ಡಿಜೆಗಳಿಗೆ ಬ್ರೇಕ್​

ರಾತ್ರಿ 10 ರಿಂದ ಬೆಳಗ್ಗೆ 6ರ ರವರೆಗೆ ಎಲ್ಲಾ ರೀತಿಯ ಧ್ವನಿ ವರ್ಧಕ, ತಮಟೆ, ಬ್ಯಾಂಡ್, ಡಿಜೆ ಎಲ್ಲದಕ್ಕೂ ಬ್ರೇಕ್ ಹಾಕಲಾಗಿದೆ. ಆದರೆ ಅಗತ್ಯ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಮೇರೆಗೆ ಅನುಮತಿ ನೀಡಲಾಗುತ್ತೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ವಾಹನಗಳು ಹಾರ್ನ್ ಮೂಲಕ ಕಿರಿಕಿರಿ ಮಾಡುವಂತಿಲ್ಲ, ಸಾರ್ವಜನಿಕರಿಂದ ದೂರು ಬಂದರೆ ಕ್ರಮ ಕೈಗೊಳ್ಳಲಾಗುತ್ತೆ. ಮನೆಯಲ್ಲಿ ನಡೆಸುವ ಕಾರ್ಯಕ್ರಮ ಹಾಗೂ ಇತರೆ ಖಾಸಗಿ ಕಾರ್ಯಕ್ರಮ ಶಬ್ಧ 5dB ಮೀರದಂತೆ ಇರಬೇಕು ಎಂದು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

ಇದನ್ನೂ ಓದಿ: Ashwath Narayan: ವಿವಾದದ ಸುಳಿಯಿಂದ ರಕ್ಷಿಸಿಕೊಳ್ಳಲು ‘ಕೈ’ ನಾಯಕರ ಮೊರೆ ಹೋದ್ರಾ ಸಚಿವ ಅಶ್ವತ್ಥ್ ನಾರಾಯಣ?

ಇಂದೂ ಕೂಡ ರಾಜ್ಯದ ಹಲವೆಡೆ ಮೊಳಗಿದ ಸುಪ್ರಭಾತ 

ರಾಜ್ಯದಲ್ಲಿ ಭುಗಿಲೆದ್ದಿರುವ ಆಝಾನ್‌  ಹಾಗೂ ಭಜನೆ ಧರ್ಮ ಸಂಘರ್ಷ ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದ ವಿವಿದೆಡೆ ಎರಡನೇ ದಿನವೂ ದೇಗುಲಗಳಲ್ಲಿ ಭಜನೆ ಮೊಳಗಿದ್ದು, ಈ ಅಭಿಯಾನ ಮತ್ತಷ್ಟು ತೀವ್ರವಾಗುವ ಸೂಚನೆ ಸಿಕ್ಕಿದೆ. ಮಂಗಳವಾರ ಗದಗ ಜಿಲ್ಲೆಯಲ್ಲಿ ವಿವಿಧೆಡೆ ಬ್ರಾಹ್ಮೀ ಮುಹೂರ್ತದಲ್ಲಿ ಸುಪ್ರಭಾತ ಆರಂಭವಾಗಿದೆ. ಆಝಾನ್‌ ಮೊಳಗುವ ವೇಳೆಯಲ್ಲೇ ದೇಗುಲದಲ್ಲ ಭಜನೆ, ಸುಪ್ರಭಾತವೂ ಮೊಳಗಿದೆ.

ಶ್ರೀರಾಮ.. ಜೈ ರಾಮ.. ಘೋಷಣೆ

ಮುಳಗುಂದ ನಾಕಾ ಬಳಿರುವ ಈದ್ಗಾ ಮೈದಾನದ ಭವಾನಿ ದೇವಸ್ಥಾನದಲ್ಲಿ ಬೆಳ್ಳಂ ಬೆಳಗ್ಗೆ ಶ್ರೀರಾಮ ಸೇನೆ ಕಾರ್ಯಕರ್ತರು ಭಜನೆ ಪ್ರಾರಂಭ ಮಾಡಿದ್ದಾರೆ. ಶ್ರೀರಾಮ ಸೇನೆ ಸಂಘಟನೆಯ ಧಾರವಾಡ ಸಂಚಾಲಕ ರಾಜು ಖಾನಪ್ಪನವರ ನೇತೃತ್ವದಲ್ಲಿ ಕಾರ್ಯಕರ್ತರು ನಗರದ 16 ದೇವಸ್ಥಾನದಲ್ಲಿ ಲೌಡ್‌ ಸ್ಪೀಕರ್‌ ಮೂಲಕ ಭಜನೆ, ಸುಪ್ರಭಾತ, ಭಕ್ತಿಗೀತೆ ಹಾಡಿದ್ದಾರೆ. ಇನ್ನು ಭವಾನಿ ದೇವಸ್ಥಾನದಲ್ಲಿ ಭಜನೆ ಮಾಡ್ತಾ ಶ್ರೀರಾಮ.. ಜೈ ರಾಮ.. ಜಯ.. ಜಯ.. ರಾಮ ಮುಂತಾದ ಉದ್ಘೋಷಗಳು ಕೇಳಿ ಬಂತು.

ಇದನ್ನೂ ಓದಿ:  BBMP ಎಲೆಕ್ಷನ್ ನಡೆಸುವಂತೆ ಸುಪ್ರೀಂಕೋರ್ಟ್​ ಮಹತ್ವದ ಆದೇಶ; ಶೀಘ್ರವೇ ನೋಟಿಫಿಕೇಷನ್ ಹೊರಡಿಸಲು ಸೂಚನೆ

ಶ್ರೀರಾಮಸೇನೆ ಕಾರ್ಯಕರ್ತರ ಆಕ್ರೋಶ

ಇದೇ ವೇಳೆ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಕಾರ್ಯಕರ್ತರ ಆಕ್ರೋಶ ಮುಂದುವರಿದಿದ್ದು, ಗದಗ ಜಿಲ್ಲಾ ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷ ಮಹೇಶ್ ರೋಖಡೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Published by:Pavana HS
First published: