ಪೊಲೀಸರಿಗೆ ಸಿಹಿ ಸುದ್ದಿ; ಆಗಸ್ಟ್​ 1ರಿಂದ ಅನ್ವಯವಾಗುವಂತೆ 6ನೇ ವೇತನ ಆಯೋಗ ಜಾರಿಗೆ ಸರ್ಕಾರ ಆದೇಶ

ವಿವಿಧ ಹುದ್ದೆಗಳ ಅನುಸಾರ ಪೊಲೀಸರ ಸಂಬಳ ಆಗಸ್ಟ್​ದಿಂದ ​ 1ರಿಂದ ಅನ್ವಯವಾಗುವಂತೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಪರಿಷ್ಕೃತ ವೇತನವನ್ನು ಈ ತಿಂಗಳಿನ ಸಂಬಳದಲ್ಲಿ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಇದರೊಂದಿಗೆ ರಾಜ್ಯ ಪೊಲೀಸ್​ ಇಲಾಖೆಗೆ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. 

HR Ramesh | news18-kannada
Updated:September 13, 2019, 9:08 PM IST
ಪೊಲೀಸರಿಗೆ ಸಿಹಿ ಸುದ್ದಿ; ಆಗಸ್ಟ್​ 1ರಿಂದ ಅನ್ವಯವಾಗುವಂತೆ 6ನೇ ವೇತನ ಆಯೋಗ ಜಾರಿಗೆ ಸರ್ಕಾರ ಆದೇಶ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು: ರಾಜ್ಯ ಪೊಲೀಸರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಪೊಲೀಸ್​ ಇಲಾಖೆಯ ಕೆಲವೊಂದು ವರ್ಗದ ಹುದ್ದೆಗಳ ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸಲಾಗಿದೆ. ಈ ಪರಿಷ್ಕೃತ ವೇತನ ಆಗಸ್ಟ್​ ಒಂದರಿಂದಲೇ ಅನ್ವಯವಾಗುವಂತೆ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ.

ವಿವಿಧ ಹುದ್ದೆಗಳ ಅನುಸಾರ ಪೊಲೀಸರ ಸಂಬಳ ಆಗಸ್ಟ್​ದಿಂದ ​ 1ರಿಂದ ಅನ್ವಯವಾಗುವಂತೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಪರಿಷ್ಕೃತ ವೇತನವನ್ನು ಈ ತಿಂಗಳಿನ ಸಂಬಳದಲ್ಲಿ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಇದರೊಂದಿಗೆ ರಾಜ್ಯ ಪೊಲೀಸ್​ ಇಲಾಖೆಗೆ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

Government Order Copy
ಸರ್ಕಾರ ಹೊರಡಿಸಿರುವ ಆದೇಶ ಪ್ರತಿ.

ಇದನ್ನು ಓದಿ: ಔರಾದ್ಕರ್ ವರದಿ ಜಾರಿಗೊಳಿಸಿ ಸರ್ಕಾರದಿಂದ ಅಧಿಕೃತ ಆದೇಶ; ಆಗಸ್ಟ್​ 1ರಿಂದ ಪೊಲೀಸರಿಗೆ ಪರಿಷ್ಕೃತ ವೇತನ

ಯಾರಿಗೆ ಎಷ್ಟು ಸಂಬಳ ಹೆಚ್ಚಳ?

ಕಾನ್​ಸ್ಟೇಬಲ್​/ ರಿಸರ್ವ್​ ಕಾನ್​ಸ್ಟೇಬಲ್​ - 23,500 ದಿಂದ 47,650 ರೂ.

ಹೆಡ್​ಕಾನ್​ಸ್ಟೇಬಲ್​-  27650 ದಿಂದ 52,650 ರೂ.ಸಹಾಯಕ ಸಬ್ ಇನ್ಸ್‌ಪೆಕ್ಟರ್ - 30,350 ದಿಂದ 58,250 ರೂ.

ಪೊಲೀಸ್ ಇನ್ಸ್ ಪೆಕ್ಟರ್ - 43,100 ದಿಂದ 83,900 ರೂ.

ಎಸ್.ಪಿ (ಐಪಿಎಸ್ ಅಲ್ಲದವರು )-  70,850 ದಿಂದ 1,07,100 ರೂ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading