HOME » NEWS » State » STATE GOVERNMENT NEVER CLEAR CONFUSE OF PRIVATE SCHOOLS FEES ISSUE LG

ಖಾಸಗಿ ಶಾಲೆಗಳ ಶುಲ್ಕ ಪಾವತಿ ವಿಚಾರ; ನಿರ್ಧಾರ ಪ್ರಕಟಿಸದೆ ಮೀನಾಮೇಷ ಎಣಿಸುತ್ತಿರುವ ಸರ್ಕಾರ

ವರದಿ ಸಲ್ಲಿಕೆಯಾಗಿ ಇಷ್ಟೂ ದಿನಗಳಾದರೂ ಈ ಕುರಿತು ಸರ್ಕಾರ ನಿರ್ಧಾರ ಕೈಗೊಂಡಿಲ್ಲ.‌ ಖಡಾಖಂಡಿತವಾಗಿ ಪೂರ್ತಿ ಶುಲ್ಕ ಕಟ್ಟೋಕೆ ಆಗಲ್ಲ ಅಂತ ಕೂತಿರುವ ಪೋಷಕರ ಮನವೊಲಿಸಲು ಶಿಕ್ಷಣ ಸಚಿವರು ಮತ್ತೊಂದು ಸುತ್ತಿನ ಸಭೆ ಕರೆದರೂ ಕರೆಯಬಹುದು. ಆದರೆ ಅದಕ್ಕೂ ಮೊದಲು ಆಯುಕ್ತರು ಕೊಟ್ಟಿರುವಂಥ ವರದಿಯ ಬಗ್ಗೆ ಚರ್ಚಿಸಲು ಸಚಿವರು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

news18-kannada
Updated:January 19, 2021, 7:21 PM IST
ಖಾಸಗಿ ಶಾಲೆಗಳ ಶುಲ್ಕ ಪಾವತಿ ವಿಚಾರ; ನಿರ್ಧಾರ ಪ್ರಕಟಿಸದೆ ಮೀನಾಮೇಷ ಎಣಿಸುತ್ತಿರುವ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜ.19): ಹತ್ತು ತಿಂಗಳ ಬಳಿಕ ಶಾಲಾ-ಕಾಲೇಜುಗಳೇನೋ ಆರಂಭವಾಗಿವೆ. ಆದರೆ ಖಾಸಗಿ ಶಾಲೆಗಳ ಶುಲ್ಕದ ಗೊಂದಲ ಮಾತ್ರ ಮುಂದುವರೆದಿದೆ. ಈ‌ ಕುರಿತು ಅನೇಕ ಇನ್ನೂ ಕೂಡ ಸರ್ಕಾರ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇದು ಈಗ ಮತ್ತೊಂದು ಸುತ್ತಿನ‌ ಗೊಂದಲಕ್ಕೆ ದಾರಿ ಮಾಡಿದೆ. ಹೌದು, ಹತ್ತು ತಿಂಗಳ ಬಳಿಕ ಮೊನ್ನೆ ಮೊನ್ನೆಯಷ್ಟೇ ಶಾಲೆಗಳು ಆರಂಭಗೊಂಡಿವೆ. ಯಾವುದೇ ಒತ್ತಡವಿಲ್ಲದೆ ಆಫ್ ಲೈನ್ ಹಾಗೂ ಅನ್ ಲೈನ್ ಕ್ಲಾಸ್ ಗಳಿಗೆ ಅನುಮತಿ ಕೊಟ್ಟಿದೆ ಶಿಕ್ಷಣ ಇಲಾಖೆ. ಈ ನುಡವೆ ಲಾಕ್ ಡೌನ್ ಹಾಗೂ ಕೊರೋನಾದಿಂದ ಆರ್ಥಿಕ ಹೊಡೆತ ತಿಂದಿರುವ ವಿದ್ಯಾರ್ಥಿಗಳ ಪೋಷಕರು ನಮ್ಮಿಂದ ಫೀಸ್ ಕಟ್ಟೋಕೆ ಸಾಧ್ಯವಿಲ್ಲ ಅಂತ ಪಟ್ಟು ಹಿಡಿದಿದ್ದರು. ಇದು ಶಿಕ್ಷಣ ಇಲಾಖೆಗೂ ಕಗ್ಗಂಟಾಗಿ ಹೋಗಿತ್ತು.‌ ಈ ಹಿನ್ನೆಲೆ ಹಲವು ಸುತ್ತಿನ ಸಭೆಗಳೂ ನಡೆದವು.

ಇದೇ ವಿಚಾರವಾಗಿ ಇಲಾಖೆಯ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ಕೊನೆಯದಾಗಿ ಒಂದು ಸಭೆಯೂ ನಡೆದಿತ್ತು. ಈ ಸಭೆಯಲ್ಲಿ ಪೋಷಕರು ಕಣ್ಣೀರು ಹಾಕಿ ಶುಲ್ಕ ಕಡಿತ ಮಾಡಿ ಅಂತ ಕೈಮುಗಿದು ಬೇಡಿಕೊಂಡಿದ್ದರು. ಈ ವೇಳೆ ಆಯುಕ್ತ ಅನ್ಬುಕುಮಾರ್ ನಿಮ್ಮ ಅಹವಾಲನ್ನು ವರದಿ ಮಾಡಿ ಸರ್ಕಾರದ ಕಾರ್ಯದರ್ಶಿಗಳಿಗೆ ಕೊಡುತ್ತೇನೆ ಎಂದಿದ್ದರು. ಏತನ್ಮಧ್ಯೆ, ಇದೇ ಪ್ರಕಾರ ಕಳೆದ ಎರಡ್ಮೂರು ದಿನಗಳ ಹಿಂದೆ ಅನ್ಬು ಕುಮಾರ್ ಈ ಸಂಬಂಧ ವರದಿ ಸರ್ಕಾರಕ್ಕೆ ಕೊಟ್ಟಿದ್ದಾರೆ. ಆದರೆ ಇನ್ನೂ ಸರ್ಕಾರ ನಿರ್ಧಾರ ತೆಗೆದುಕೊಂಡಿಲ್ಲ.

Union Budget 2021: ಜನವರಿ 29ರಿಂದ ಕೇಂದ್ರದ ಬಜೆಟ್ ಅಧಿವೇಶನ: ಸಂಸದರಿಗೆ RT-PCR ಟೆಸ್ಟ್ ಕಡ್ಢಾಯ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಯುಕ್ತ ಅನ್ಬು ಕುಮಾರ್, ಶುಲ್ಕ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇನೆ. ನಾಳೆ ಅಥವಾ ನಾಡಿದ್ದು ಖಾಸಗಿ ಶುಲ್ಕ ಫಿಕ್ಸ್ ಆದೇಶ ಹೊರ ಬೀಳಲಿದೆ. ಜನವರಿ 13 ರಂದು, ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ಪೋಷಕ ಸಂಘಟನೆ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದೆ. ನಿನ್ನೆ ಸಚಿವ ಸುರೇಶ್ ಕುಮಾರ್ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಜೊತೆ ಸಭೆ ನಡೆಸಿ ಚರ್ಚೆ ನಡೆಸಿದ್ದೇನೆ.

ಈಗಾಗಲೇ ಸರ್ಕಾರದ ಮಟ್ಟದಲ್ಲಿ ಶುಲ್ಕ ನಿಗದಿ ಕುರಿತು ಚರ್ಚೆ ನಡೆದಿದೆ. ಖಾಸಗಿ ಶಾಲೆಗಳು ಶೇ.50ರಷ್ಟು ಈ ಬಾರಿ ರಿಯಾಯಿತಿ ಕೊಡಬೇಕು ಅಂತ ತಿಳಿಸಿದ್ದಾರೆ. ಜೊತೆಗೆ ರುಪ್ಸಾ ಹಾಗೂ ಬೇರೆ ಖಾಸಗಿ ಸಂಘಟನೆಗಳ ಅಭಿಪ್ರಾಯ ಕೂಡ ಇವೇ ಆಗಿವೆ. ಇವೆಲ್ಲವನ್ನೂ ಸೇರಿದಂತೆ  ಸರ್ಕಾರಕ್ಕೆ ವರದಿ ಕಳಿಸಿದ್ದೇನೆ ಅಂತ ಹೇಳಿದರು.

ವರದಿ ಸಲ್ಲಿಕೆಯಾಗಿ ಇಷ್ಟೂ ದಿನಗಳಾದರೂ ಈ ಕುರಿತು ಸರ್ಕಾರ ನಿರ್ಧಾರ ಕೈಗೊಂಡಿಲ್ಲ.‌ ಖಡಾಖಂಡಿತವಾಗಿ ಪೂರ್ತಿ ಶುಲ್ಕ ಕಟ್ಟೋಕೆ ಆಗಲ್ಲ ಅಂತ ಕೂತಿರುವ ಪೋಷಕರ ಮನವೊಲಿಸಲು ಶಿಕ್ಷಣ ಸಚಿವರು ಮತ್ತೊಂದು ಸುತ್ತಿನ ಸಭೆ ಕರೆದರೂ ಕರೆಯಬಹುದು. ಆದರೆ ಅದಕ್ಕೂ ಮೊದಲು ಆಯುಕ್ತರು ಕೊಟ್ಟಿರುವಂಥ ವರದಿಯ ಬಗ್ಗೆ ಚರ್ಚಿಸಲು ಸಚಿವರು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಇಂದು ಈ ಬಗ್ಗೆ ಸಭೆ ನಡೆಯಬೇಕಿತ್ತು. ಆದರೆ ಇಂದೂ ಸಭೆ ನಡೆದಿಲ್ಲ. ಹೀಗಾಗಿ ಖಾಸಗಿ ಶುಲ್ಕ ಪಾವತಿ ಗೊಂದಲ ಇನ್ನೂ ಮುಂದುವರೆದಿದೆ.(ವರದಿ: ಆಶಿಕ್ ಮುಲ್ಕಿ)
Published by: Latha CG
First published: January 19, 2021, 7:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories