Guidelines: ಆನ್​​ಲೈನ್ ಶಿಕ್ಷಣಕ್ಕೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

Guidelines : ಕೊರೋನಾ ಹಿನ್ನೆಲೆಯಲ್ಲಿ ಆನ್​​ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು, ಇದೀಗ ಆನ್​ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಅಕ್ಟೋಬರ್​. 28): ಕೊರೋನಾ ಹಿನ್ನೆಲೆಯಲ್ಲಿ ಆನ್​​ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು, ಇದೀಗ ಆನ್​ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆನ್ ಲೈನ್ ಶಿಕ್ಷಣಕ್ಕೆ ಪ್ರತಿ ತರಗಿತಿಗೆ ಗರಿಷ್ಠ 30 ನಿಮಿಷಗಳ ಅವಕಾಶ ನೀಡಲಾಗಿದ್ದು, 3-6 ವರ್ಷಗಳ ವಿದ್ಯಾರ್ಥಿಗಳಿಗೆ ವಾರದಲ್ಲಿ ಪರ್ಯಾಯ ದಿನದಂತೆ 30 ನಿಮಿಷ ತರಗತಿ ತೆಗೆದುಕೊಳ್ಳಬಹುದು.

    2ನೇ ತರಗತಿವರೆಗೆ ಆನ್ ಲೈನ್ ತರಗತಿಯಲ್ಲಿ ಪೋಷಕರ ಹಾಜರಿ ಕಡ್ಡಾಯ ಅಥವಾ ಪೋಷಕರು ಒಪ್ಪಿದ್ದಲ್ಲಿ ವಯಸ್ಕರರ ಉಪಸ್ಥಿತಿಗೆ ಅವಕಾಶ ನೀಡಲಾಗಿದೆ.

    3ನೇ ತರಗತಿಂದ 5ನೇ ತರಗತಿವರೆಗೆ ದಿನಕ್ಕೆ 30 ನಿಮಿಷಗಳ 2 ಕ್ಲಾಸ್ ತೆಗೆದುಕೊಳ್ಳಬಹುದು. 6ರಿಂದ 8ನೇ ತರಗತಿವರೆಗೆ ದಿನಕ್ಕೆ 30-45 ನಿಮಿಷಗಳವರೆಗೆ ಗರಿಷ್ಠ 3 ಕ್ಲಾಸ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. 9 ಮತ್ತು 10ನೆ ತರಗತಿ 30 ರಿಂದ 45 ನಿಮಿಷಗಳ ಸೆಶನ್- ವಾರಕ್ಕೆ 5 ದಿನ - ದಿನಕ್ಕೆ 4 ಕ್ಲಾಸ್​​ಗಳನ್ನು ತೆಗೆದುಕೊಳ್ಳಬಹುದು.
    Published by:G Hareeshkumar
    First published: