IMA Jewels Fraud: 8 ತಿಂಗಳ ಹಿಂದೆಯೇ ಅಕ್ರಮದ ಬಗ್ಗೆ ಹೂಡಿಕೆದಾರರಿಗೆ ಸಾರ್ವಜನಿಕ ಎಚ್ಚರಿಕೆ ನೀಡಿತ್ತು ರಾಜ್ಯ ಸರ್ಕಾರ

ಹೂಡಿಕೆದಾರರಿಂದ ನಿಯಮಬಾಹಿರವಾಗಿ ಹಣ ಸಂಗ್ರಹ ಮಾಡುತ್ತಿದೆ ಎಂಬ ಮಾಹಿತಿಯೂ ಲಭಿಸಿತ್ತು. ಈ ಹಿನ್ನೆಲೆ ಬೆಂಗಳೂರು ಉತ್ತರ ತಹಶೀಲ್ದಾರ್​  ಐಎಂಎ ವಿರುದ್ಧ ನೋಟಿಸ್​ ಜಾರಿ ಮಾಡಿದ್ದರು.

Latha CG | news18
Updated:June 12, 2019, 6:56 PM IST
IMA Jewels Fraud: 8 ತಿಂಗಳ ಹಿಂದೆಯೇ ಅಕ್ರಮದ ಬಗ್ಗೆ ಹೂಡಿಕೆದಾರರಿಗೆ ಸಾರ್ವಜನಿಕ ಎಚ್ಚರಿಕೆ ನೀಡಿತ್ತು ರಾಜ್ಯ ಸರ್ಕಾರ
ಪ್ರಾತಿನಿಧಿಕ ಚಿತ್ರ
  • News18
  • Last Updated: June 12, 2019, 6:56 PM IST
  • Share this:
ಬೆಂಗಳೂರು,(ಜೂ.12): ಐಎಂಎ ಜ್ಯುವೆಲ್ಲರಿ ಕಂಪನಿ ಸಾವಿರಾರು ಜನರಿಗೆ ವಂಚನೆ ಮಾಡಿ ಕೋಟಿ-ಕೋಟಿ ಹಣವನ್ನು ನುಂಗಿದೆ. ಮಾಲೀಕ ಮಹಮ್ಮದ್​ ಮನ್ಸೂರ್​ ಖಾನ್​ ತಲೆಮರೆಸಿಕೊಂಡಿದ್ದಾನೆ. ಈ ವಂಚನೆ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್​ಐಟಿ ರಚನೆ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಐಎಂಎ ಜ್ಯುವೆಲರ್ಸ್​​ ಅಕ್ರಮದ ಬಗ್ಗೆ  ರಾಜ್ಯ ಸರ್ಕಾರ 8 ತಿಂಗಳ ಹಿಂದೆಯೇ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿತ್ತು ಎಂಬ ಮಾಹಿತಿ ಹೊರಬಿದ್ದಿದೆ.

ಹೌದು, 2018ರ ಜುಲೈ ತಿಂಗಳಲ್ಲಿ ರಾಜ್ಯ ಸರ್ಕಾರ ಇಂತಹದ್ದೊಂದು ಎಚ್ಚರಿಕೆಯನ್ನು ಹೂಡಿಕೆದಾರರಿಗೆ ನೀಡಿತ್ತು ಎಂದು ತಿಳಿದು ಬಂದಿದೆ. ಆರ್​ಬಿಐ ನಿಯಮ ಪಾಲಿಸದ ಐಎಂಎ ಕಂಪನಿ ವಿರುದ್ಧ ಸಾರ್ವಜನಿಕ​​ ಪ್ರಕಟಣೆಯನ್ನು ಹೊರಡಿಸಿತ್ತು. ಹೂಡಿಕೆದಾರರಿಂದ ನಿಯಮಬಾಹಿರವಾಗಿ ಹಣ ಸಂಗ್ರಹ ಮಾಡುತ್ತಿದೆ ಎಂಬ ಮಾಹಿತಿಯೂ ಲಭಿಸಿತ್ತು. ಈ ಹಿನ್ನೆಲೆ ಬೆಂಗಳೂರು ಉತ್ತರ ತಹಶೀಲ್ದಾರ್​  ಐಎಂಎ ವಿರುದ್ಧ ನೋಟಿಸ್​ ಜಾರಿ ಮಾಡಿದ್ದರು.

ಇದನ್ನೂ ಓದಿ: 'ನೀವು ಯಾರಿಗೂ‌ ಹೆದರಬೇಡಿ, ಯಾವ ರಾಜಕಾರಣಿಗೆ ಹಣ ನೀಡಿದ್ದಿರಾ ಹೇಳಿ ವಸೂಲಿ‌ ಮಾಡೋಣ'; ಮನ್ಸೂರ್​ಗೆ ಸಚಿವ ಜಮೀರ್ ಅಭಯ

ಆರ್​ಬಿಐ ಮಾಹಿತಿ ಹಿನ್ನೆಲೆ 2018ರ ಜುಲೈನಲ್ಲಿ ಈ ಬಗ್ಗೆ ರಾಜ್ಯ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು. ರಾಜ್ಯ ಮುಖ್ಯ ಕಾರ್ಯದರ್ಶಿ, ಅರ್ ಬಿ ಐ ರಾಜ್ಯದ ಮುಖ್ಯ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.  ಈ ಮಹತ್ವದ ಸಭೆಯಲ್ಲಿ ಐಎಂಎ ಕಂಪನಿ ನಿಯಮಬಾಹಿರವಾಗಿ ಹಣ ಸಂಗ್ರಹಿಸುತ್ತಿರುವ ಬಗ್ಗೆ ಚರ್ಚಿಸಲಾಗಿತ್ತು. ಈ ಹಿನ್ನೆಲೆ ಸಿಐಡಿಗೆ ಕೇಸ್​ ದಾಖಲಿಸಿ ತನಿಖೆ ನಡೆಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಆದರೆ ಹೂಡಿಕೆದಾರರು ಎಚ್ಚೆತ್ತುಕೊಳ್ಳದ ಹಿನ್ನೆಲೆ ಸಿಐಡಿ ಅಧಿಕಾರಿಗಳು ಪ್ರಕರಣವನ್ನು ರದ್ದು ಮಾಡಿದ್ದರು.

ಇದೀಗ ಐಎಂಎ ಮಾಲೀಕ ಮನ್ಸೂರ್ ಖಾನ್​ ಬಹುಕೋಟಿ ಹಣವನ್ನು ದೋಚಿ ತಲೆಮರೆಸಿಕೊಂಡಿದ್ದಾನೆ. ಹೂಡಿಕೆ ಮಾಡಿದ್ದ ಸಾವಿರಾರು ಜನರು ಮೂರು ದಿನಗಳಿಂದ ಮನ್ಸೂರ್​ ವಿರುದ್ಧ ದೂರು ದಾಖಲಿಸುತ್ತಿದ್ದಾರೆ. ಈವರೆಗೆ 15 ಸಾವಿರಕ್ಕಿಂತ ಹೆಚ್ಚು ದೂರುಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಪ್ರಕರಣವನ್ನು ತನಿಖೆ ಮಾಡಲು ರಾಜ್ಯ ಸರ್ಕಾರ ಡಿಐಜಿ ರವಿಕಾಂತೇಗೌಡ ನೇತೃತ್ವದಲ್ಲಿ ಎಸ್​​ಐಟಿಯನ್ನು ರಚನೆ ಮಾಡಿದೆ. ಜೊತೆಗೆ ಮನ್ಸೂರ್​ ವಿರುದ್ಧ ರೆಡ್​ ಕಾರ್ನರ್​ ನೋಟಿಸ್​ ಜಾರಿ ಮಾಡಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading