HOME » NEWS » State » STATE GOVERNMENT INCREASE TAXI TRAVEL PRICE IN ALL OVER STATE INCLUDE BANGALORE LG

ಟ್ಯಾಕ್ಸಿ ಪ್ರಯಾಣ ದರ ಏರಿಸಿದ ರಾಜ್ಯ ಸರ್ಕಾರ; ನೂತನ ದರ ಎಷ್ಟು? ಇಲ್ಲಿದೆ ಮಾಹಿತಿ

ಕಾಯುವಿಕೆ ದರಗಳನ್ನು 20 ನಿಮಿಷಗಳವರೆಗೆ ಉಚಿತ ಎಂದು ನೀಡಲಾಗಿದೆ. ನಂತರ ಪ್ರತಿ 15 ನಿಮಿಷಗಳಿಗೆ 10 ರೂ ನಿಗದಿ ಮಾಡಲಾಗಿದೆ.

news18-kannada
Updated:April 1, 2021, 6:59 PM IST
ಟ್ಯಾಕ್ಸಿ ಪ್ರಯಾಣ ದರ ಏರಿಸಿದ ರಾಜ್ಯ ಸರ್ಕಾರ; ನೂತನ ದರ ಎಷ್ಟು? ಇಲ್ಲಿದೆ ಮಾಹಿತಿ
ಟ್ಯಾಕ್ಸಿ
  • Share this:
ಬೆಂಗಳೂರು(ಏ.01): ಕೊನೆಗೂ ರಾಜ್ಯದಲ್ಲಿ ಟ್ಯಾಕ್ಸಿ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ.  ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟ್ಯಾಕ್ಸಿ ದರ ಪರಿಷ್ಕರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇಂಧನ ಬೆಲೆ ಹೆಚ್ಚಳ ಹಿನ್ನೆಲೆ ಹಾಗೂ ಮೊನ್ನೆ ಟ್ಯಾಕ್ಸಿ ಚಾಲಕ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಕೊನೆಗೂ ಟ್ಯಾಕ್ಸಿ ಮಾಲೀಕರ ಬೇಡಿಕೆಯಂತೆ ವಿವಿಧ ಸ್ವರೂಪದ ಟ್ಯಾಕ್ಸಿಗಳ ಪ್ರಯಾಣ ದರ ಏರಿಕೆ ಮಾಡಿದೆ.  ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ ಟ್ಯಾಕ್ಸಿ ಪ್ರಯಾಣ ದರ ಏರಿಕೆ ಹಿನ್ನೆಲೆ, ಪ್ರಯಾಣಿಕರಿಗೆ ಸ್ವಲ್ಪ ಹೊರೆಯಾಗುವ ಸಾಧ್ಯತೆ ಇದೆ. 

ರಾಜ್ಯ ಸರ್ಕಾರವು ವಾಹನ ಮೌಲ್ಯದ ಆಧಾರದ ಮೇಲೆ ನೂತನ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಮೊನ್ನೆ ಟ್ಯಾಕ್ಸಿ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಟ್ಯಾಕ್ಸಿ ಪ್ರಯಾಣ ದರ ಏರಿಕೆ ಮಾಡಿದೆ. ಎ.ಬಿ.ಸಿ ಮತ್ತು ಡಿ ಗಳೆಂದು ವರ್ಗೀಕರಣ ಮಾಡಿ ದರ ಪರಿಷ್ಕರಣೆ ಮಾಡಲಾಗಿದೆ.   ಎ ವರ್ಗ ಅಂದರೆ  ಹೆಚ್ಚಿನ ಬೆಲೆಯುಳ್ಳ ವಾಹನಗಳು, ಡಿ-ವರ್ಗ ಅಂದರೆ ಕಡಿಮೆ ಬೆಲೆಯುಳ್ಳ ವಾಹನಗಳು.

ಎ-ವರ್ಗ ಅಂದರೆ 15 ಲಕ್ಷ ರೂ.ಗಿಂತ ಮೇಲ್ಪಟ್ಟ ವಾಹನಗಳು- ಈ ವಾಹನಗಳಿಗೆ ನಿಗದಿತ ಪ್ರಯಾಣ ದರ 150 ರೂ., ಕನಿಷ್ಠ27 ರೂ., ಗರಿಷ್ಠ 54 ರೂ. ದರ ಪರಿಷ್ಕರಣೆ ಮಾಡಲಾಗಿದೆ.

ಇನ್ನು, ಬಿ ವರ್ಗ ಅಂದರೆ 10 ಲಕ್ಷದಿಂದ 16 ಲಕ್ಷ ರೂ. ವಾಹನಗಳು- ಕನಿಷ್ಠ24 ರೂ. ಗರಿಷ್ಠ48 ರೂ.ಗಳು.

ಸಿ ವರ್ಗ ಅಂದರೆ 5 ಲಕ್ಷದಿಂದ 10 ಲಕ್ಷದ ವಾಹನಗಳು- ಕನಿಷ್ಠ21 ರೂ, ಗರಿಷ್ಠ42 ರೂ ನಿಗದಿ ಮಾಡಲಾಗಿದೆ.

ಡಿ ವರ್ಗ  ಅಂದರೆ 5  ಲಕ್ಷದ ವಾಹನಗಳು- ನಿಗದಿತ ದರ 75 ರೂ.,  ಕನಿಷ್ಠ18 ರೂ., ಗರಿಷ್ಠ36 ರೂ.  ದರ ಪರಿಷ್ಕರಣೆ ಮಾಡಲಾಗಿದೆ.

Ayanur Manjunath: ಬಸನಗೌಡ ಪಾಟೀಲ್‌ ಯತ್ನಾಳ್ ಹುಚ್ಚ ವೆಂಕಟ್ ಇದ್ದಂತೆ..!; ಆಯನೂರು ಮಂಜುನಾಥ್ ಲೇವಡಿಜಿಎಸ್ ಟಿ ಹಾಗೂ ಟೋಲ್ ಶುಲ್ಕವನ್ನು ಪ್ರಯಾಣಿಕನಿಂದ ವಸೂಲಿ ಮಾಡಲಾಗುತ್ತದೆ. ಸಮಯದ ಆಧಾರದಲ್ಲಿ ಮಾಡುತ್ತಿದ್ದ ದರ ವಸೂಲಿಗೆ ಬ್ರೇಕ್ ಹಾಕಲಾಗಿದೆ.  ಕಿ.ಮೀ ಆಧಾರದಲ್ಲಿ ಅಧಿಸೂಚನೆಯ ದರವನ್ನು ಮಾತ್ರ ಪ್ರಯಾಣಿಕರಿಂದ ವಸೂಲಿ ಮಾಡಬೇಕು. ಕಾಯುವಿಕೆ ದರಗಳನ್ನು 20 ನಿಮಿಷಗಳವರೆಗೆ ಉಚಿತ ಎಂದು ನೀಡಲಾಗಿದೆ. ನಂತರ ಪ್ರತಿ 15 ನಿಮಿಷಗಳಿಗೆ 10 ರೂ ನಿಗದಿ ಮಾಡಲಾಗಿದೆ.

ಡಿ ವರ್ಗ - 5 ಲಕ್ಷ ಮೌಲ್ಯದೊಳಗಿನ ವಾಹನಗಳು. ಡಿ ವರ್ಗಕ್ಕೆ ಆರಂಭದ 4 ಕಿ.ಮೀ ಗೆ 75 ರೂ. ಹೆಚ್ಚುವರಿ ಪ್ರತಿ ಕಿ.ಮೀ 18 ರಿಂದ 36 ರೂ.

ಸಿ-ವರ್ಗ 5-10 ಲಕ್ಷದೊಳಗಿನ ವಾಹನಗಳು. ಸಿ ವರ್ಗಕ್ಕೆ ಆರಂಭದ 4 ಕಿ.ಮೀಗೆ 100 ರೂ. ಹೆಚ್ಚುವರಿ ಕಿ.ಮೀಗೆ 21 ರಿಂದ 42 ರೂ.

ಬಿ-ವರ್ಗ 10-16 ಲಕ್ಷದೊಳಗಿನ ವಾಹನಗಳು. ಬಿ ವರ್ಗಕ್ಕೆ ಆರಂಭದ 4 ಕಿ.ಮೀಗೆ 120 ರೂ.

ಎ-ವರ್ಗ 16 ಲಕ್ಷ ಮೇಲ್ಪಟ್ಟ ಮೌಲ್ಯದ ವಾಹನಗಳು. ಎ ವರ್ಗಕ್ಕೆ  ಆರಂಭದ ನಾಲ್ಕು ಕಿ.ಮೀ 150 ರೂ ನಿಗದಿ. ಹೆಚ್ಚುವರಿ ಕಿ.ಮೀ ಗೆ 27 ರಿಂದ 54 ರೂ ವರೆಗೆ ದರ ನಿಗದಿ ಮಾಡಲಾಗಿದೆ.
Published by: Latha CG
First published: April 1, 2021, 6:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories