news18-kannada Updated:January 29, 2021, 8:55 PM IST
ಬಿಬಿಎಂಪಿ
ಬೆಂಗಳೂರು; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಮಾಡಿ ಹಾಗೂ ವಾರ್ಡ್ಗಳ ಪುನರ್ವಿಂಗಡಣೆಗೆ ರಾಜ್ಯ ಸರ್ಕಾರದ ಶುಕ್ರವಾರ ಆದೇಶ ನೀಡಿದೆ. ಬಿಬಿಎಂಪಿ ಪ್ರಸ್ತುತ 198 ಸದಸ್ಯ ಸ್ಥಾನವನ್ನು ಹೊಂದಿದೆ. ಇದೀಗ ರಾಜ್ಯ ಸರ್ಕಾರ ಆ ಸ್ಥಾನಗಳನ್ನು 243ಕ್ಕೆ ಹೆಚ್ಚಳ ಮಾಡಿದೆ.
ಬಿಬಿಎಂಪಿ ಕಾರ್ಪೊರೇಟರ್ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಳ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದಾಗಿ ಕಾರ್ಪೊರೇಟರ್ಗಳ ಸಂಖ್ಯೆ 198 ರಿಂದ 243 ಕ್ಕೆ ಏರಿಕೆಯಾದಂತಾಗಿದೆ. ಜೊತೆಗೆ 6 ತಿಂಗಳ ಒಳಗೆ ವಾರ್ಡ್ ಗಳ ಪುನರ್ ವಿಂಗಡನೆ ಮಾಡಲು ಸೂಚನೆ ನೀಡಿದೆ. ವಾರ್ಡ್ಗಳ ಪುನರ್ವಿಂಗಡಣೆಗೆ ನಾಲ್ಕು ಮಂದಿ ಹಿರಿಯ ಐಎಎಸ್ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ರಾಜ್ಯಪತ್ರ.
ಬಿಬಿಎಂಪಿ ವಾರ್ಡ್ ಪುನರ್ ವಿಂಗಡನಾ ಸಮಿತಿಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬೆಂಗಳೂರು ಜಿಲ್ಲಾಧಿಕಾರಿ ಶಿವಮೂರ್ತಿ, ಬಿಡಿಎ ಆಯುಕ್ತ ಮಹದೇವ್, ಬಿಬಿಎಂಪಿ ವಿಶೇಷ ಆಯುಕ್ತ ಬಸವರಾಜ್ (ಕಂದಾಯ) ಒಳಗೊಂಡ
ಸಮಿತಿ ರಚಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಇದನ್ನು ಓದಿ: Second PUC Exam Time Table: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಎಕ್ಸಾಂ ಟೈಮ್ ಟೇಬಲ್
ಈ ಹಿಂದೆ ಶೀಘ್ರದಲ್ಲಿ ಚುನಾವಣೆ ನಡೆಸುವಂತೆ ರಾಜ್ಯ ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಚುನಾವಣೆ ನಡೆಸಲು ಸಿದ್ಧವಿರದ ಸರ್ಕಾರ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಸುಪ್ರೀಂಕೊರ್ಟ್ ಸಹ ಆದೇಶ ಎತ್ತಿ ಹಿಡಿದು ಬಿಬಿಎಂಪಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ಬಿಬಿಎಂಪಿ ಇದೀಗ ಚುನಾವಣೆಗೆ ಸಿದ್ಧವಾಗುತ್ತಿದ್ದು, ಏತನ್ಮಧ್ಯೆ, ರಾಜ್ಯ ಸರ್ಕಾರ ಸದಸ್ಯರ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಳ ಮಾಡಿದೆ.
Published by:
HR Ramesh
First published:
January 29, 2021, 8:55 PM IST