ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಅದೆಷ್ಟೇ ತೀವ್ರಗೊಳಿಸಿದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಇಲ್ಲಿಯವರೆಗೆ ಮುಷ್ಕರ ನಿರತ ನೌಕರರ ಮೇಲೆ ವಜಾ, ಅಮಾನತು ಅಸ್ತ್ರ ಪ್ರಯೋಗಿಸಿದ್ದ ಸರ್ಕಾರ ಇದೀಗ ಕೆಸ್ಮಾ ಅಸ್ತ್ರ ಪ್ರಯೋಗ ಮಾಡ್ತಿದೆ. ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸ್ತಿರುವ ಮುಷ್ಕರ 10ನೇ ದಿನಕ್ಕೆ ಕಾಲಿಟ್ಟಿದೆ. ಎಷ್ಟೇ ಮನವಿ ಮಾಡಿದರೂ ಸಾರಿಗೆ ನೌಕರರು ಕರ್ತವ್ಯಗೆ ಗೈರಾಗಿ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ದಿನೆ ದಿನೇ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ಪರಿಗಣಿಸಿ ಸರ್ಕಾರ ಮುಷ್ಕರನಿರತ ನೌಕರರ ವಿರುದ್ಧ ವಜಾ, ಅಮಾನತು, ವರ್ಗಾವಣೆ ಅಸ್ತ್ರ ಗಳನ್ನು ಪ್ರಯೋಗಿಸಿತ್ತು. ಇದೀಗ ಕೆಸ್ಮಾ ಕಾಯ್ದೆ ಅಡಿ 141 ಸಿಬ್ಬಂದಿಯಲ್ಲಿ 35 ಜನ FIR ಇದರಲ್ಲಿ ಈಗಾಗಲೇ 47 ಸಿಬ್ಬಂದಿ ಬಂಧನವಾಗಿದೆ.
ಕೆಸ್ಮಾ ಕಾಯ್ದೆ ಅಗತ್ಯ ಸೇವೆ ಮಾಡುವವರ ಮೇಲೆ ತೊಂದರೆ, ಹಾನಿ, ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡುತ್ತಾರೋ ಅವರ ಮೇಲೆ ಹಾಕುವ ಕೇಸು ಇದು. ಸರ್ಕಾರಿ ಸಿಬ್ಬಂದಿಗಳ ಹಲ್ಲೆ, ಹಲ್ಲೆಗೆ ಯತ್ನ, ತೊಂದರೆ ಮಾಡಿದರೆ ಇದೇ ಕಟ್ಟುನಿಟ್ಟಿನ ಕಾಯ್ದೆಯಡಿ ಕೇಸ್ ಹಾಕುತ್ತಾರೆ. ಇಂಥ ಕಟ್ಟುನಿಟ್ಟಿನ ಕೇಸ್ ಇದೀಗ ಸಾರಿಗೆ ಸಿಬ್ಬಂದಿಗಳ ಮೇಲೆ ಹಾಕುತ್ತಿದ್ದಾರೆ.
GfxBmtc ನಿಗಮದಲ್ಲಿ ಸಿಬ್ಬಂದಿ ಕ್ರಮದ ಮಾಹಿತಿ ಏಪ್ರಿಲ್ 8 - 96 ನೌಕರರ ವಜಾ, ಏಪ್ರಿಲ್ 9 -120 ನೌಕರರು ವಜಾ, ಏಪ್ರಿಲ್ 10 -118 ನೌಕರರ ವಜಾ, ಏಪ್ರಿಲ್ 11 - 122 ನೌಕರರ ವಜಾ, ಏಪ್ರಿಲ್ 16 - 240 ನೌಕರರ ವಜಾ, ಏಪ್ರಿಲ್ 14 - 221 ನೌಕರರ ಅಮಾನತು, ಏಪ್ರಿಲ್ 15 - 213 ನೌಕರರ ಅಮಾನತು. ಕಳೆದ 10 ದಿನದಲ್ಲಿ 1100 ಸಿಬ್ಬಂದಿ ಮೇಲೆ ಶಿಸ್ತಿನ ಕ್ರಮ, GfxKSRTC ನಿಗಮ ಏಪ್ರಿಲ್-7 ರಿಂದ ಏಪ್ರಿಲ್15 ವರಿಗೆ ಚಾಲಕ- ನಿರ್ವಹಕರ ಮೇಲೆ ಕ್ರಮ 15 ಸಿಬ್ಬಂದಿ ಅಮಾನತು, 85 ಸಿಬ್ಬಂದಿ ವಜಾ ಮಾಡಿರುವ ಕೆಎಸ್ಆರ್ಟಿಸಿ Gfx
ಇತ್ತ ಬಿಎಂಟಿಸಿ ನಿಗಮ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದವರಿಗೆ ಗೇಟ್ ಪಾಸ್ ನೀಡಿದೆ.
ಇದನ್ನು ಓದಿ: ಸಾರಿಗೆ ಮುಷ್ಕರ ಜಿದ್ದಾಜಿದ್ದಿ; ಜಮಖಂಡಿಯಲ್ಲಿ ಬಸ್ಸಿಗೆ ಕಲ್ಲೇಟಿನಿಂದ ರಾಜ್ಯದಲ್ಲಿ ಮೊದಲ ಚಾಲಕ ಬಲಿ!
ಬಿಎಂಟಿಸಿ ಸೇವೆಯಲ್ಲಿ ಉಳಿಯಬೇಕೆಂದ್ರೆ ದೈಹಿಕವಾಗಿ ಸದೃಶವಾಗಿರಲೇಬೇಕು. ವೈದ್ಯಕೀಯ-ದೇಹದಾರ್ಢ್ಯತೆ ಸ್ಥಿರವಾಗಿದ್ದಲ್ಲಿ ಮಾತ್ರ ಬಿಎಂಟಿಸಿಯಲ್ಲಿ ಕೆಲಸ ಮಾಡಬೇಕು. ಆದರೆ 55 ವರ್ಷ ಮೇಲ್ಪಟ್ಟ 35 ಸಿಬ್ಬಂದಿಯನ್ನು ವಜಾ ಮಾಡಿದೆ. ಬಿಎಂಟಿಸಿಯಲ್ಲಿ 1772 ಸಿಬ್ಬಂದಿ 55 ವರ್ಷ ಮೇಲ್ಪಟ್ಟವರು ಇದ್ದಾರೆ. ಹೀಗಾಗಿ ಮುಂದೆ 55 ವರ್ಷ ಮೇಲ್ಪಟ್ಟ ಉಳಿದ ಸಿಬ್ಬಂದಿಗೆ ಸಂಕಷ್ಟ ಎದುರಾಗಿದೆ. ಇತ್ತ ಡಿಪೋ 40ರಲ್ಲಿ ಬಲಗೈ ಸ್ವಾಧೀನ ಕಳೆದುಕೊಂಡ ಚಾಲಕನಾಗಿ ಬಸ್ ಓಡಿಸಲು ಬಿಎಂಟಿಸಿ ಅಧಿಕಾರಿಗಳು ಅನುಮತಿ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಸಾರಿಗೆ ಮುಷ್ಕರ ನಾಳೆಯೂ ಮುಂದುವರೆಯಲಿದ್ದು, ನಾಳೆ ಕಾರ್ಮಿಕ ಇಲಾಖೆಯ ಮುಖ್ಯಸ್ಥರಿಗೆ ಭೇಟಿ ಮಾಡಿ ನೌಕರರಿಗೆ ಸಂಬಳ ಕೊಡಿಸುವಂತೆ ಒತ್ತಾಯ ಮಾಡುತ್ತೇವೆ ಎಂದು ಸಾರಿಗೆ ನೌಕರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದರು. ಇಂದು ರಾಜ್ಯಾದ್ಯಂತ ಸಾರಿಗೆ ನೌಕರರು ಶಾಸಕರ ಮನೆ ಮುಂದೆ ಧರಣಿ ಮಾಡಲು ಮುಂದಾಗಿದ್ರು. ಆದರೆ ಧರಣಿಗೆ ಅನುಮತಿ ನೀಡದ ಕಾರಣಕ್ಕೆ ಶಾಸಕರ ಮನೆಗೆ ಹೋಗಿ ಮನವಿ ಪತ್ರ ಸಲ್ಲಿಸಿದ್ದಾರೆ. ನಾಳೆ ಕಾರ್ಮಿಕ ಇಲಾಖೆಗೂ ಭೇಟಿ ನೀಡಿ ಹೋರಾಟ ಮುಂದುವರೆಸಿದ್ದು, ಸಾರಿಗೆ ಮುಷ್ಕರ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ