HOME » NEWS » State » STATE GOVERNMENT HAS RELEASED RS 112 CRORE FOR 14 DISTRICTS FOR DROUGHT AND FLOOD RESCUE OPERATION AFTER 6 MONTH MAK

ನೆರೆ-ಬರ ಪರಿಹಾರ ಕಾರ್ಯಕ್ಕೆ 6 ತಿಂಗಳ ನಂತರ ಹಣ ಬಿಡುಗಡೆ; 14 ಜಿಲ್ಲೆಗಳಿಗೆ 112 ಕೋಟಿ ನೀಡಿದ ರಾಜ್ಯ ಸರ್ಕಾರ

ಕಳೆದ ವರ್ಷ ಉತ್ತರ ಕರ್ನಾಟಕ ಹಾಗೂ ಕೊಡಗು ಜಿಲ್ಲೆಯ ಅನೇಕ ಭಾಗಗಳಲ್ಲಿ ಮಳೆಯ ರುದ್ರನರ್ತನಕ್ಕೆ ಜನ ಸಂಕಷ್ಟ ಅನುಭವಿಸಿದ್ದರು. ಇದಲ್ಲದೆ, ನೂರಾರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳು ಎಂದು ಸರ್ಕಾರವೇ ಅಧಿಕೃತವಾಗಿ ಘೋಷಣೆ ಮಾಡಿತ್ತು.

news18-kannada
Updated:January 28, 2020, 8:20 AM IST
ನೆರೆ-ಬರ ಪರಿಹಾರ ಕಾರ್ಯಕ್ಕೆ 6 ತಿಂಗಳ ನಂತರ ಹಣ ಬಿಡುಗಡೆ; 14 ಜಿಲ್ಲೆಗಳಿಗೆ 112 ಕೋಟಿ ನೀಡಿದ ರಾಜ್ಯ ಸರ್ಕಾರ
ನೆರೆ ಸಂದರ್ಭದಲ್ಲಿ ಬೆಳೆಗಾವಿಯಲ್ಲಿ ತೆಗೆದ ಚಿತ್ರ.
  • Share this:
ಬೆಂಗಳೂರು (ಜನವರಿ 28); ರಾಜ್ಯದಲ್ಲಿ ನೆರೆ ಮತ್ತು ಬರಕ್ಕೆ ತುತ್ತಾಗಿರುವ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಕ್ಕೆಂದು ರಾಜ್ಯ ಸರ್ಕಾರ 14 ಜಿಲ್ಲೆಗಳಿಗೆ 112 ಕೋಟಿ ಬಿಡುಗಡೆ ಮಾಡಿದೆ. ಎಸ್​ಡಿಆರ್​ಎಫ್​ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡಿದ್ದು, ಈ ಹಣ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಕಳೆದ ವರ್ಷ ಉತ್ತರ ಕರ್ನಾಟಕ ಹಾಗೂ ಕೊಡಗು ಜಿಲ್ಲೆಯ ಅನೇಕ ಭಾಗಗಳಲ್ಲಿ ಮಳೆಯ ರುದ್ರನರ್ತನಕ್ಕೆ ಜನ ಸಂಕಷ್ಟ ಅನುಭವಿಸಿದ್ದರು. ಇದಲ್ಲದೆ, ನೂರಾರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳು ಎಂದು ಸರ್ಕಾರವೇ ಅಧಿಕೃತವಾಗಿ ಘೋಷಣೆ ಮಾಡಿತ್ತು. ಈ ನಡುವೆ ನೆರೆ ಪೀಡಿತ ಪ್ರದೇಶಗಳಲ್ಲಿ ನಿರಾಶ್ರಿತರಿಗೆ ಸರ್ಕಾರ ಸರಿಯಾದ ಸೌಲಭ್ಯ ಮಾಡಿಲ್ಲ ಎಂಬ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿದೆ.

ಯಾವ ಜಿಲ್ಲೆಗಳಿಗೆ ಎಷ್ಟು ಹಣ?

ಬಳ್ಳಾರಿ- 15 ಕೋಟಿ
ದಾವಣಗೆರೆ- 14 ಕೋಟಿ
ಚಿತ್ರದುರ್ಗ-13 ಕೋಟಿ
ಬೆಂಗಳೂರು ಗ್ರಾಮಾಂತರ- 10 ಕೋಟಿಚಿಕ್ಕಬಳ್ಳಾಪುರ- 10 ಕೋಟಿ
ಕೋಲಾರ- 10 ಕೋಟಿ
ಬೀದರ್- 5 ಕೋಟಿ
ಚಾಮರಾಜನಗರ- 5 ಕೋಟಿ
ಕೊಪ್ಪಳ- 5 ಕೋಟಿ
ರಾಮನಗರ- 5 ಕೋಟಿ
ವಿಜಯಪುರ- 5 ಕೋಟಿ
ರಾಯಚೂರು- 5 ಕೋಟಿ
ತುಮಕೂರು- 5 ಕೋಟಿ
ಯಾದಗಿರಿ- 5 ಕೋಟಿ

ಇದನ್ನೂ ಓದಿ : ಕಬ್ಬನ್ ಪಾರ್ಕ್ ಆಯ್ತು ಈಗ ಲಾಲ್​ಬಾಗ್​ನಲ್ಲಿ ಸಚಿವ ವಿ. ಸೋಮಣ್ಣ ರೌಂಡ್ಸ್​

ಇದನ್ನೂ ಓದಿ : ತೀವ್ರ ವಿರೋಧದ ನಡುವೆಯೂ ಹನುಮನ ದೇಗುಲ ತೆರವುಗೊಳಿಸಿದ ಮೆಟ್ರೋ ಅಧಿಕಾರಿಗಳು
First published: January 28, 2020, 8:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories