ಹೊಸ ವರ್ಷಾಚರಣೆ: ಈ 10 ನಿಯಮಗಳನ್ನು ಪಾಲಿಸುವಂತೆ ಪಬ್​, ಬಾರ್​, ರೆಸ್ಟೋರೆಂಟ್​​ಗಳಿಗೆ ಸೂಚನೆ

ಲೈಸನ್ಸ್ ಷರತ್ತುಗಳನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು. ಗ್ರಾಹಕರು ಬರುವ ಪ್ರವೇಶ ದ್ವಾರ , ಹೊರ ಹೋಗುವ ದಾರಿ, ಒಳಭಾಗ , ಪಾರ್ಕಿಂಗ್, ಮುಂಭಾಗದ ರಸ್ತೆ ಕಾಣುವಂತೆ ಸಿಸಿಟಿವಿ ಅಳವಡಿಸಬೇಕು.

ಬಾರ್ ಆ್ಯಂಡ್ ರೆಸ್ಟೋರೆಂಟ್ (ಪ್ರಾತಿನಿಧಿಕ ಚಿತ್ರ)

ಬಾರ್ ಆ್ಯಂಡ್ ರೆಸ್ಟೋರೆಂಟ್ (ಪ್ರಾತಿನಿಧಿಕ ಚಿತ್ರ)

 • Share this:
  ಬೆಂಗಳೂರು(ಡಿ.30): ಹೊಸ ವರ್ಷಾಚರಣೆ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಕೊರೋನಾ ಹಿನ್ನೆಲೆ, ಈ ಬಾರಿ ಹೊಸ ವರ್ಷಾಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಹೊಸ ವರ್ಷಾಚರಣೆಯ ದಿನ ನಗರದ ಪ್ರಮುಖ ರಸ್ತೆಗಳು ಮತ್ತು ಫ್ಲೈಓವರ್​​​ಗಳನ್ನು ಮುಚ್ಚಲಾಗುತ್ತಿದ್ದು, ಪಬ್​ ಮತ್ತು ರೆಸ್ಟೋರೆಂಟ್​ಗಳ ಮೇಲೆ ಖಾಕಿ ಹದ್ದಿನ ಕಣ್ಣಿಟ್ಟಿದೆ. 

  ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆಯ ನಿಯಮಗಳ ಪಾಲನೆಗೆ ಸೂಚನೆ ನೀಡಲಾಗಿದೆ.  ಪಬ್, ಬಾರ್, ರೆಸ್ಟೋರೆಂಟ್ ಗಳು ಪಾಲಿಸಲೇಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ.

  • ಲೈಸನ್ಸ್ ಷರತ್ತುಗಳನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು.

  • ಗ್ರಾಹಕರು ಬರುವ ಪ್ರವೇಶ ದ್ವಾರ , ಹೊರ ಹೋಗುವ ದಾರಿ, ಒಳಭಾಗ , ಪಾರ್ಕಿಂಗ್, ಮುಂಭಾಗದ ರಸ್ತೆ ಕಾಣುವಂತೆ ಸಿಸಿಟಿವಿ ಅಳವಡಿಸಬೇಕು.

  • ಹೆಚ್ ಡಿ ಕ್ವಾಲಿಟಿ ಸಿಸಿಕ್ಯಾಮೆರಾ ಅಳವಡಿಸಬೇಕು.

  • ಸಿಸಿ ಕ್ಯಾಮೆರಾಗಳು 24 ಗಂಟೆ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು.

  • ಕನಿಷ್ಟ ಒಂದು ತಿಂಗಳು ಡಾಟಾ ಸ್ಟೋರೆಜ್ ಇರುವಂತೆ ನೋಡಿಕೊಳ್ಳುವುದು.

  • ಒಳಭಾಗ, ಹೊರಗೆ , ಪಾರ್ಕಿಂಗ್ ನಲ್ಲಿ ಹೆಚ್ಚಿನ ಬೆಳಕು ಇರುವಂತೆ ಲೈಟಿಂಗ್ ವ್ಯವಸ್ಥೆ.

  • ಪಬ್ ಗಳ ಪ್ರಮುಖ ಜಾಗಗಳಲ್ಲಿ ಅಲಾರಾಂಗಳು ಅಳವಡಿಸಬೇಕು.

  • ಪ್ರಮುಖ ಸ್ಥಳಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಗಳ ನಿಯೋಜನೆ.

  • ಕೆಪಿಎಸ್ಇ ಕಾಯ್ದೆಯಂತೆ ಸಾರ್ವಜನಿಕ ಸುರಕ್ಷತಾ ಕ್ರಮ ಹಾಗೂ ಉಪಕರಣಗಳನ್ನ ಅಳವಡಿಸಬೇಕು.


  ಈ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಒಂದು ವೇಳೆ ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆ ನಿಯಮಗಳ ಉಲ್ಲಂಘನೆ ಕಂಡು ಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.

  ಇನ್ನು ಹೊಸ ವರ್ಷಾಚರಣೆ ಹಿನ್ನೆಲೆ, ಡಿ. 31ರ ಸಂಜೆ 6ಗಂಟೆಯಿಂದ ಜನವರಿ 1ರ ಬೆಳಗ್ಗಿನ ಜಾವ 6 ಗಂಟೆವರೆಗೆ 144 ಸೆಕ್ಷನ್ ಕೂಡ ಜಾರಿಯಲ್ಲಿ ಇರುತ್ತದೆ. ಇದರ ಜೊತೆಗೆ ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಕೇಂದ್ರ ವಿಭಾಗದ ಹಲವು ಮಾರ್ಗಗಳನ್ನು ಬಂದ್ ಮಾಡಲಾಗಿದೆ.
  Published by:Latha CG
  First published: