ಸಾರಿಗೆ ನೌಕರರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ; ಕೆಲವು ಪ್ರಮುಖ ಬೇಡಿಕೆಗಳಿಗೆ ಒಪ್ಪಿಗೆ!

ಅಸಲಿಗೆ ಕಳೆದ ಹಲವು ತಿಂಗಳುಗಳಿಂದ ರಾಜ್ಯದ ನಾಲ್ಕೂ ವಿಭಾಗದ ಸಾರಿಗೆ ನೌಕರರಿಗೆ ಕೊರೋನಾ ಮತ್ತು ನಷ್ಟದ ನೆಪ ಹೇಳೆ ಸರ್ಕಾರದ ಪೂರ್ಣ ವೇತನವನ್ನು ನೀಡಿರಲಿಲ್ಲ. ಹೀಗಾಗಿ ಸಾರಿಗೆ ಇಲಾಖೆ ನೌಕರರು ಕಳೆದ ಡಿಸೆಂಬರ್​ ತಿಂಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದರು.

ತಲೆ ಮೇಲೆ ಇಟ್ಟಂಗಿ‌ ಹೊತ್ತುಕೊಂಡು ಮಕ್ಕಳೊಂದಿಗೆ ಧರಣಿ ನಡೆಸಿದ ಸಾರಿಗೆ ಇಲಾಖೆ ನೌಕರರು

ತಲೆ ಮೇಲೆ ಇಟ್ಟಂಗಿ‌ ಹೊತ್ತುಕೊಂಡು ಮಕ್ಕಳೊಂದಿಗೆ ಧರಣಿ ನಡೆಸಿದ ಸಾರಿಗೆ ಇಲಾಖೆ ನೌಕರರು

  • Share this:
    ಬೆಂಗಳೂರು (ಫೆಬ್ರವರಿ 11); ರಾಜ್ಯದ ಸಾರಿಗೆ ನೌಕರರ ಪ್ರತಿಭಟನೆಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ, ನೌಕರರ ಕೆಲ ಬೇಡಿಕೆಗಳನ್ನು ಕೂಡಲೇ ನೆರವೇರಿಸಲು ಸಮ್ಮತಿ ನೀಡಿದೆ.  "ನಗದು ರಹಿತ ಚಿಕಿತ್ಸೆ ನೀಡುವ ಪದ್ದತಿ ಜಾರಿ, ಸರ್ಕಾರಿ ಹಾಗೂ ಸರ್ಕಾರಿ ಸ್ವಾಯತ್ತ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ವೈದ್ಯಕೀಯ ವೆಚ್ಚವನ್ನು ಮರು ಪಾವತಿಸುವ ಮಾದರಿಯಲ್ಲಿ cGHs ದರದನ್ವಯ ಚಿಕಿತ್ಸೆ ಮರುಪಾವತಿಸಲು ಕ್ರಮ, ಕೊವೀಡ್ ನಿಂದ ಮೃತಪಟ್ಟ ಕುಟುಂಬ ಗಳಿಗೆ ೩೦ ಲಕ್ಷ ಪರಿಹಾರಕ್ಕೆ ನಿರ್ಧಾರ, ಸಾರಿಗೆ ಸಂಸ್ಥೆಗಳಲ್ಲಿ HRMS ವ್ಯವಸ್ಥೆ ಜಾರಿ, ಅಧಿಕಾರಿಗಳ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ಜಾರಿ, NINC ಪದ್ದತಿ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿ" ಸೇರಿದಂತೆ ಕೆಲ ಬೇಡಿಕೆಗಳನ್ನು ಕೂಡಲೇ ಇಡೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

    ಅಸಲಿಗೆ ಕಳೆದ ಹಲವು ತಿಂಗಳುಗಳಿಂದ ರಾಜ್ಯದ ನಾಲ್ಕೂ ವಿಭಾಗದ ಸಾರಿಗೆ ನೌಕರರಿಗೆ ಕೊರೋನಾ ಮತ್ತು ನಷ್ಟದ ನೆಪ ಹೇಳೆ ಸರ್ಕಾರದ ಪೂರ್ಣ ವೇತನವನ್ನು ನೀಡಿರಲಿಲ್ಲ. ಹೀಗಾಗಿ ಸಾರಿಗೆ ಇಲಾಖೆ ನೌಕರರು ಕಳೆದ ಡಿಸೆಂಬರ್​ ತಿಂಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದರು. ಈ ವೇಳೆ ಪ್ರಯಾಣಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಈ ಸಂದರ್ಭದಲ್ಲಿ ಮೆತ್ತಗಾಗಿದ್ದ ಸರ್ಕಾರ ಸಾರಿಗೆ ನೌಕರರ ಕೆಲ ಬೇಡಿಕೆಗಳನ್ನು ಇಡೇರಿಸುವ ಭರವಸೆ ನೀಡಿದ್ದರೂ ಸಹ ಈವರೆಗೆ ಬೇಡಿಕೆಯನ್ನು ಈಡೇರಿಸಿರಲಿಲ್ಲ.

    ಇದನ್ನೂ ಓದಿ: ಬೇಡಿಕೆ ಈಡೇರದ ಹಿನ್ನೆಲೆ ಸಾರಿಗೆ ನೌಕರರಿಂದ ಇಂದು ಮತ್ತೆ ಪ್ರತಿಭಟನೆ: ಉಗ್ರ ಹೋರಾಟದ ಎಚ್ಚರಿಕೆ!

    ಹೀಗಾಗಿ ಸರ್ಕಾರ ಕೊಟ್ಟ ಹುಸಿ ಭರವಸೆ ವಿರೋಧಿಸಿ ಸಾರಿಗೆ ನೌಕರರು ನಿನ್ನೆ ಮತ್ತೆ ಬಿಎಂಟಿಸಿ ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಕೊಪ್ಪಳದಲ್ಲಿ ಓರ್ವ ಸಾರಿಗೆ ನೌಕರ ಮನೆಗೆ ರೇಷನ್​ ತರಲೂ ಹಣ ಇಲ್ಲ ಎಂದು ತನ್ನ ಕಿಡ್ನಿಯನ್ನೇ ಮಾರಾಟಕ್ಕೆ ಇಟ್ಟಿದ್ದ ಸುದ್ದಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಸಂಚಲನ ಉಂಟು ಮಾಡಿತ್ತು.

    ಆದರೆ, ಕೊನೆಗೂ ಸಾರಿಗೆ ನೌಕರರ ಒತ್ತಡಕ್ಕೆ ಮಣಿದಿರುವ ಸರ್ಕಾರ ಅವರ ಕೆಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಮನಸ್ಸ ಮಾಡಿರುವುದು ಉತ್ತಮ ಬೆಳವಣಿಗೆ. ಆದರೆ, ಅವರಿಗೆ ಕಳೆದ ಆರು ತಿಂಗಳಿನಿಂದ ಸಂಬಳ ನೀಡಿಲ್ಲ. ಆದರೆ, ಇಂದೂ ಸಹ ಸಂಬಳದ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟ ವಿವರಣೆ ನೀಡಿಲ್ಲ. ಹೀಗಾಗಿ ಸಂಪೂರ್ಣ ಸಂಬಳ ಎಂದು ಕೈಸೇರುವುದು? ಎಂಬ ಅನಿಶ್ಚಿತತೆಯ ನಡುವೆಯೇ ಸಾರಿಗೆ ನೌಕರರ ಬದುಕು ನಡೆಯುತ್ತಿದೆ. ಈ ಸಮಸ್ಯೆಯ ಪೂರ್ಣ ಪರಿಹಾರಕ್ಕಾಗಿ ಕಾರ್ಮಿಕರು ಸಹ ಕಾದು ಕುಳಿತಿದ್ದಾರೆ.
    Published by:MAshok Kumar
    First published: