• Home
  • »
  • News
  • »
  • state
  • »
  • ಭತ್ತ ಖರೀದಿ ಕೇಂದ್ರ ಆರಂಭ ಮಾಡದ ಸರ್ಕಾರ; ಹೆಚ್ಚಾಯ್ತು ದಲ್ಲಾಳಿಗಳ ಹಾವಳಿ

ಭತ್ತ ಖರೀದಿ ಕೇಂದ್ರ ಆರಂಭ ಮಾಡದ ಸರ್ಕಾರ; ಹೆಚ್ಚಾಯ್ತು ದಲ್ಲಾಳಿಗಳ ಹಾವಳಿ

ಭತ್ತ

ಭತ್ತ

ಕೇಂದ್ರ ಸರಕಾರದ ಬೆಂಬಲ ಬೆಲೆಯೊಂದಿಗೆ ಸರಕಾರ ಭತ್ತ ಖರೀದಿ ಮಾಡಬೇಕು. ಪ್ರತಿ ಕ್ವಿಂಟಾಲ್ ಭತ್ತಕ್ಕೆ 1800 ರೂ ಸರಕಾರ ನಿಗದಿ ಮಾಡಿದೆ. ಆದರೆ, ಸರಕಾರ ಈಗಾಗಲೇ ಖರೀದಿ ಕೇಂದ್ರ ಆರಂಭ ಮಾಡಬೇಕಿತ್ತು. ಆದರೆ ಸರಕಾರ ರೈತರನ್ನು ಮರೆತು ಬಿಟ್ಟಿದೆಯಾ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ

  • Share this:

ಯಾದಗಿರಿ(ನ.05):  ರೈತರ ಸಂಕಷ್ಟಗಳನ್ನೇ ಬಂಡವಾಳ ಮಾಡಿಕೊಂಡ ದಲ್ಲಾಳಿಗಳು ಕಡಿಮೆ ದರಕ್ಕೆ ಭತ್ತ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಸರಕಾರ ಮಾತ್ರ ಖರೀದಿ ಕೇಂದ್ರ ಆರಂಭ ಮಾಡದೆ ನಿರ್ಲಕ್ಷ್ಯ ವಹಿಸಿದೆ. ಒಂದು ಕಡೆ ಮಳೆ ಮತ್ತೊಂದೆಡೆ ಭೀಮಾನದಿ ಪ್ರವಾಹಕ್ಕೆ ಈಗಾಗಲೇ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ‌ .ಭತ್ತದ ಬೆಳೆ ಕೂಡ ಸಂಪೂರ್ಣ ನೀರು ಪಾಲಾಗಿ ಹಾನಿಯಾಗಿದೆ. ಆದರೆ ಇನ್ನೂ ಅಳಿದುಳಿದ ಭತ್ತದ ಬೆಳೆಯು ಈಗಾಗಲೇ ಕಟಾವು ಮಾಡಿ, ರಾಶಿ ಮಾಡಿ ರೈತರು ಮಾರಾಟ ಮಾಡುತ್ತಿದ್ದಾರೆ. ಜಿಲ್ಲೆಯ ಹುಣಸಗಿ, ಶಹಾಪುರ, ಸುರಪುರ, ವಡಗೇರಾ, ಯಾದಗಿರಿ ಮೊದಲಾದ ಕಡೆ  1 ಲಕ್ಷ ಹೆಕ್ಟೇರ್​​​ ಪ್ರದೇಶದಲ್ಲಿ  ಭತ್ತ ಬೆಳೆದಿದ್ದಾರೆ. ಈಗ ಭತ್ತ ಬೆಳೆದು ಮಾರಾಟ ಮಾಡಬೇಕೆಂದರೆ ಸರಕಾರ ಇನ್ನೂ ಖರೀದಿ ಕೇಂದ್ರ ಆರಂಭ ಮಾಡಿಲ್ಲ. ಇದರಿಂದ ರೈತರು ಅನಿವಾರ್ಯವಾಗಿ ಕಡಿಮೆ ದರಕ್ಕೆ ಭತ್ತ ಮಾರಾಟ ಮಾಡುವಂತಾಗಿದೆ.


ಶಿರಾ ಉಪಚುನಾವಣೆ: ಮತಯಂತ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್


ಮಹಾರಾಷ್ಟ್ರ ಮೂಲದ ದಲ್ಲಾಳಿಗಳು ಸ್ಥಳೀಯ ಮಟ್ಟದ ದಲ್ಲಾಳಿಗಳ ಮೂಲಕ ರೈತರ ಜಮೀನು ಪ್ರದೇಶಕ್ಕೆ ತೆರಳಿ ಭತ್ತ ಖರೀದಿ ಮಾಡುತ್ತಿದ್ದಾರೆ. ಪ್ರತಿ 75 ಕೆಜಿಗೆ 900 ರಿಂದ 1 ಸಾವಿರ ರೂ. ಪಾವತಿಸಿ ಕಡಿಮೆ ದರಕ್ಕೆ ಭತ್ತ ಖರೀದಿ ಮಾಡುತ್ತಿದ್ದಾರೆ. ದಲ್ಲಾಳಿಗಳ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ರೈತರ ಅನಿವಾರ್ಯತೆಯನ್ನೆ ಬಂಡವಾಳ ಮಾಡಿಕೊಂಡು ಕಡಿಮೆ ದರಕ್ಕೆ ಭತ್ತ ಖರೀದಿ ಮಾಡುತ್ತಿದ್ದಾರೆ.


ಖರೀದಿ ಕೇಂದ್ರ ಆರಂಭ ಮಾಡದ್ದಕ್ಕೆ ಆಕ್ರೋಶ...!


ಕೇಂದ್ರ ಸರಕಾರದ ಬೆಂಬಲ ಬೆಲೆಯೊಂದಿಗೆ ಸರಕಾರ ಭತ್ತ ಖರೀದಿ ಮಾಡಬೇಕು. ಪ್ರತಿ ಕ್ವಿಂಟಾಲ್ ಭತ್ತಕ್ಕೆ 1800 ರೂ ಸರಕಾರ ನಿಗದಿ ಮಾಡಿದೆ. ಆದರೆ, ಸರಕಾರ ಈಗಾಗಲೇ ಖರೀದಿ ಕೇಂದ್ರ ಆರಂಭ ಮಾಡಬೇಕಿತ್ತು. ಆದರೆ ಸರಕಾರ ರೈತರನ್ನು ಮರೆತು ಬಿಟ್ಟಿದೆಯಾ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ. ಯಾಕೆಂದರೆ, ಇಲ್ಲಿವರಗೆ ಖರೀದಿ ಕೇಂದ್ರ ಆರಂಭ ಮಾಡಿ ಭತ್ತ ಖರೀದಿ ಆರಂಭವಾಗಬೇಕಿತ್ತು.


ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ರೈತ ಮುಖಂಡ ಲಕ್ಷ್ಮೀಕಾಂತ ಪಾಟೀಲ ಮಾತನಾಡಿ, ಸರಕಾರ ಭತ್ತ ಖರೀದಿ ಕೇಂದ್ರ ಆರಂಭ ಮಾಡಿ ರೈತರಿಗೆ ಅನುಕೂಲ ಮಾಡಬೇಕಿತ್ತು. ಆದರೆ, ಈಗ ದಲ್ಲಾಳಿಗಳು ಕಡಿಮೆ ದರಕ್ಕೆ ಭತ್ತ ಖರೀದಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ಕೂಡಲೇ ಅನ್ನದಾತರ ಸಂಕಷ್ಟ ಅರಿತು ಭತ್ತ ಖರೀದಿ ಕೇಂದ್ರ ಆರಂಭ ಮಾಡಿ ರೈತರಿಗೆ  ವೈಜ್ಞಾನಿಕ ದರ ಸಿಗುವಂತೆ ಮಾಡಬೇಕಿದೆ.

Published by:Latha CG
First published: