No Objection Certificate : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ಬೇರೊಂದು ಹುದ್ದೆಗೆ ಅರ್ಜಿ ಸಲ್ಲಿಸಲು ಎನ್​​ಒಸಿ ಬೇಕಿಲ್ಲ

No Objection Certificate : ಎನ್ ಒ ಸಿ ಪಡೆಯುವುದು ಇನ್ನು ಮುಂದೆ ಕಡ್ಡಾಯವಿಲ್ಲ. ಬೇರೊಂದು ಇಲಾಖೆಯ ಹುದ್ದೆಗೆ ಆಯ್ಕೆಯಾದ ನಂತರ ಹಿಂದೆ ಸೇವೆ ಸಲ್ಲಿಸುತ್ತಿರುವ ಇಲಾಖೆಯಿಂದ ಎನ್ ಒ ಸಿ ಪಡೆದುಕೊಳ್ಳಲು ಅನುಕೂಲ ಮಾಡಿ ಈಗಾಗಲೇ ಕಲಂ 11ರ ನಿಯಮಗಳನ್ನು ಸಡಿಲಿಸಿ ಕರ್ನಾಟಕ ರಾಜ್ಯಪತ್ರ ಹೊರಡಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಸೆಪ್ಟೆಂಬರ್​. 10): ಸರ್ಕಾರಿ ನೌಕರಿಯಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವವರು ಇನ್ನೊಂದು ಹೊಸ ಹುದ್ದೆಗೆ ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿ ಹಾಕಲು ತಾವು ಸೇವೆ ಸಲ್ಲಿಸುತ್ತಿರುವ ಇಲಾಖೆಯಿಂದ ಎನ್ಒಸಿ (No objection certificate) ಪಡೆಯುವುದು ಕಡ್ಡಾಯವಾಗಿತ್ತು. ಇದರಿಂದ ಹೊಸ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಇಲಾಖೆಯನ್ನು ಅಲೆಯುವುದು, ಅನುಮತಿಗಾಗಿ ಇಲಾಖೆಯ ಹಿರಿಯ ಅಧಿಕಾರಿಗಳ ಹಿಂದೆ ಅಲೆಯಬೇಕಾಗುವ ಕಿರಿಕಿರಿ, ಇದರಿಂದ ಪ್ರತ್ಯಕ್ಷ-ಪರೋಕ್ಷ ದುರುಪಯೋಗಗಳು ಸಹ ಅಲ್ಲಲ್ಲಿ ವರದಿಯಾಗುತ್ತಿದ್ದವು. ಅದಕ್ಕೆಲ್ಲ ಅಂತ್ಯ ಹಾಡಿ ನೌಕರ ಸ್ನೇಹಿ ನಿಯಮ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಎನ್ ಒ ಸಿ ಪಡೆಯುವುದು ಇನ್ನು ಮುಂದೆ ಕಡ್ಡಾಯವಿಲ್ಲ. ಬೇರೊಂದು ಇಲಾಖೆಯ ಹುದ್ದೆಗೆ ಆಯ್ಕೆಯಾದ ನಂತರ ಹಿಂದೆ ಸೇವೆ ಸಲ್ಲಿಸುತ್ತಿರುವ ಇಲಾಖೆಯಿಂದ ಎನ್ ಒ ಸಿ (ನಿರಪೇಕ್ಷಣಾ ಪ್ರಮಾಣ ಪತ್ರ) ಪಡೆದುಕೊಳ್ಳಲು ಅನುಕೂಲ ಮಾಡಿ ಈಗಾಗಲೇ ಕಲಂ 11ರ ನಿಯಮಗಳನ್ನು ಸಡಿಲಿಸಿ ಕರ್ನಾಟಕ ರಾಜ್ಯಪತ್ರ ಹೊರಡಿಸಲಾಗಿದೆ. ಇದು ರಾಜ್ಯ ನೌಕರರಿಗೆ ಸಂತಸದ ಸುದ್ದಿಯಾಗಿದೆ. ಎನ್ ಒ ಸಿ ಗಾಗಿ ಇಲಾಖೆಯನ್ನು ಅಲೆದಾಡುವುದು ತಪ್ಪುತ್ತದೆ.

  ಈ ಮೂಲಕ ಹೆಚ್ಚೆಚ್ಚು ಅಭ್ಯರ್ಥಿಗಳು ಹೊಸ ನೌಕರರಿಗೆ ಅರ್ಜಿ ಸಲ್ಲಿಸಲು ಸಹ ಸಾಧ್ಯವಾಗುತ್ತದೆ. ಜೊತೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾದಷ್ಟು ಸ್ಪರ್ಧೆ ಹೆಚ್ಚಾಗುತ್ತದೆ. ಪರೀಕ್ಷಾ ಶುಲ್ಕ ಸಂಗ್ರಹವು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಯಾವುದೇ ಹುದ್ದೆಗೆ ಸ್ಪರ್ಧಿಸುವ ಉದ್ಯೋಗಿ ಅಭ್ಯರ್ಥಿಯ ಆಯ್ಕೆಯ ಹಕ್ಕನ್ನು ಈ ಮೂಲಕ ಪ್ರೋತ್ಸಾಹಿಸಿದಂತೆಯು ಆಗುತ್ತದೆ.

  ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಹೋಗುವ ನೌಕರರ ಸಂಖ್ಯೆ ಸಹ ಹೆಚ್ಚಾಗಬಹುದು, ಈಗಾಗಲೇ ಸರ್ಕಾರಿ ವೃತ್ತಿಯಲ್ಲಿರುವವರು ತಮ್ಮ ಇಲಾಖೆಯನ್ನು ತೊರೆದ ನಂತರ ಆ ಹುದ್ದೆಗೆ ತ್ವರಿತ ನೇಮಕಾತಿಯನ್ನು ಮಾಡುವ ಬಗ್ಗೆಯೂ ಸರ್ಕಾರ ಗಮನಹರಿಸಬೇಕು ಎನ್ನುವ ವಾದವೂ ಇದೆ. ಸರ್ಕಾರದ ಎಲ್ಲ ಯೋಜನೆಗಳು ಸಮರ್ಪಕವಾಗಿ ಜನರನ್ನು ತಲುಪಬೇಕಾದರೆ ಉತ್ತಮ ಕಾರ್ಯನಿರ್ವಹದ ಸಾಮರ್ಥ್ಯದ ನೌಕರರ ನೇಮಕಾತಿಯು ಸಹ ಅಷ್ಟೇ ಅಗತ್ಯ. ಆ ಬಗ್ಗೆಯೂ ಸರ್ಕಾರ ಗಮನಹರಿಸಿದರೆ ರಾಜ್ಯವನ್ನು ಮತ್ತಷ್ಟು ನೌಕರ ಸ್ನೇಹಿತನಾಗಿ ಮಾಡಬಹುದು.

  ಇದನ್ನೂ ಓದಿ : Jog Falls : ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ಜೋಗ ಜಲಪಾತ ಅಭಿವೃದ್ಧಿ : ಸಂಸದ ಬಿ ವೈ ರಾಘವೇಂದ್ರ

  ಸರ್ಕಾರದ ಮಹತ್ವದ ನಿರ್ಧಾರದಿಂದ ಸಂತಸವಾಗಿದೆ. ಎನ್ ಒ ಸಿ ಗಾಗಿ ಅಲೆದಾಡುವ ಸಮಯ ಉಳಿಸಿದಂತೆ ಆಗಿದ್ದು, ಸಂಬಂಧಿಸಿದ ಇಲಾಖೆಯ ಕೆಲಸದ ಹೆಚ್ಚುವರಿ ಹೊರೆಯೂ ಕಡಿಮೆಯಾಗುತ್ತದೆ. ಇದು ನೌಕರ ಸ್ನೇಹಿ ನಿರ್ಧಾರವಾಗಿದೆ ಎಂದು ಶಿಕ್ಷಕ ರವಿರಾಜ್ ಸಾಗರ್ ಹೇಳುತ್ತಾರೆ.

  ಸರ್ಕಾರದ ಈ ಮಹತ್ವದ ನಿರ್ಧಾರದರಿಂದ ಸಾವಿರಾರು ಸರ್ಕಾರಿ ನೌಕರರಿಗೆ ಅನುಕೂಲವಾಗುತ್ತದೆ. ಎನ್ ಒ ಸಿ ಸಂಬಂಧಿತ ಇಲಾಖೆಯ ಹೆಚ್ಚುವರಿ ಕೆಲಸವು ಕಡಿಮೆಯಾಗುತ್ತದೆ.
  Published by:G Hareeshkumar
  First published: