News18 India World Cup 2019

ಜಿಂದಾಲ್​ಗೆ ಭೂಮಿ ನೀಡುವ ವಿಚಾರ ಮರುಪರಿಶೀಲನೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ; ಎಸ್​.ಆರ್.ಹಿರೇಮಠ

ಗದಗ‌ನ ಕಪ್ಪತಗುಡ್ಡವನ್ನು ಅಭಯಾರಣ್ಯವೆಂದು ಘೋಷಿಸಿ ಹೈಕೋರ್ಟ್ ಆದೇಶ ಮಾಡಿರುವುದು ಸ್ವಾಗತಾರ್ಹ. ಕಪ್ಪತಗುಡ್ಡ ಉಳಿಸಿ, ಬೆಳೆಸಿ, ಬಳಸಿ ಚಿಂತನಾ ಶಿಬಿರ‌ವನ್ನು  ಜುಲೈ 13, 14ರಂದು ಗದಗ ತೋಂಟದಾರ್ಯ ಮಠದಲ್ಲಿ ಶಿಬಿರ ಆಯೋಜನೆ ಎಂದು ಮಾಹಿತಿ ನೀಡಿದರು.

HR Ramesh | news18
Updated:June 14, 2019, 3:06 PM IST
ಜಿಂದಾಲ್​ಗೆ ಭೂಮಿ ನೀಡುವ ವಿಚಾರ ಮರುಪರಿಶೀಲನೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ; ಎಸ್​.ಆರ್.ಹಿರೇಮಠ
ಎಸ್​ಆರ್ ಹಿರೇಮಠ
HR Ramesh | news18
Updated: June 14, 2019, 3:06 PM IST
ಹುಬ್ಬಳ್ಳಿ: ಜಿಂದಾಲ್ ಕಂಪನಿಗೆ 3667 ಎಕರೆ ಜಮೀನು ನೀಡುವ ವಿಚಾರವಾಗಿ ರಾಜ್ಯ ಸರ್ಕಾರ ಮರು ಪರಿಶೀಲನೆಗೆ ಮುಂದಾಗಿರುವುದು ಸ್ವಾಗತಾರ್ಹ ಕ್ರಮ ಎಂದು ಸಾಮಾಜಿಕ ಹೋರಾಟಗಾರ ಎಸ್​.ಆರ್.ಹಿರೇಮಠ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರೇಮಠ, ಕನಿಷ್ಠ ಬೆಲೆಗೆ ಜಮೀನು ಮಾರುವ ಬದಲು ಲೀಜ್ ಕೊಡುವುದು ಲೇಸು. ಈ ವಿಷಯವನ್ನು ಸಂಪುಟ ಸಭೆಯಲ್ಲಿ ಗಂಭೀರವಾಗಿ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಜಿಂದಾಲ್‌ನಿಂದ ನನಗೆ 2013ರಲ್ಲಿ ಬೆದರಿಕೆ ಬಂದಿತ್ತು. ತೋರಣಗಲ್‌ನಲ್ಲಿ ಕೆಲವರು ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದರು. ಖಾಸಗಿಯವರ ಜೊತೆಗೆ ಸಂಘರ್ಷ ಮಾಡುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಜಿಂದಾಲ್ ಕಂಪನಿಯ ಕಾನೂನು ಬಾಹಿರ ಕೃತ್ಯಗಳ ವಿರುದ್ಧ ರಾಜ್ಯಾದ್ಯಂತ ಜನಾಂದೋಲನ ರೂಪಿಸಲಾಗುತ್ತಿದೆ. 3667 ಎಕರೆ ಜಮೀನಿನ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ಸಮಗ್ರ ತನಿಖೆಯಾಗಬೇಕು. ನಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರ‌‌ ಬರೆಯಲಾಗಿದೆ.  ಕಂಪನಿಗಳಿಗೆ ಅವಶ್ಯಕವಾದಷ್ಟು ಜಮೀನು ಮಾತ್ರ ಲೀಜ್ ಕೊಡಬೇಕು. ನೈಸರ್ಗಿಕ ಜಮೀನನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವುದು ಅಕ್ಷಮ್ಯ ಎಂದರು.

ಇದನ್ನು ಓದಿ: ಜಿಂದಾಲ್​ ಭೂ ವಿವಾದ: ಇಂದಿನಿಂದ ಎರಡು ದಿನ ಬಿಜೆಪಿ ಶಾಸಕ, ಸಂಸದರಿಂದ ಅಹೋರಾತ್ರಿ ಧರಣಿ!

ಗದಗ‌ನ ಕಪ್ಪತಗುಡ್ಡವನ್ನು ಅಭಯಾರಣ್ಯವೆಂದು ಘೋಷಿಸಿ ಹೈಕೋರ್ಟ್ ಆದೇಶ ಮಾಡಿರುವುದು ಸ್ವಾಗತಾರ್ಹ. ಕಪ್ಪತಗುಡ್ಡ ಉಳಿಸಿ, ಬೆಳೆಸಿ, ಬಳಸಿ ಚಿಂತನಾ ಶಿಬಿರ‌ವನ್ನು  ಜುಲೈ 13, 14ರಂದು ಗದಗ ತೋಂಟದಾರ್ಯ ಮಠದಲ್ಲಿ ಶಿಬಿರ ಆಯೋಜನೆ ಎಂದು ಮಾಹಿತಿ ನೀಡಿದರು.

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...