ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧಾರ ; ಸಚಿವ ಸಿ ಟಿ ರವಿ

ಪ್ರವಾಸಿ ತಾಣಗಳ ಅಭಿವೃದ್ಧಿಗೆ 279 ಕೋಟಿ ರೂಪಾಯಿ ನೀಡಲಾಗುವುದು. ತುಮಕೂರಿನ ಶಿವಕುಮಾರ ಸ್ವಾಮೀಜಿಗಳ ಜನ್ಮಸ್ಥಳ ಅಭಿವೃದ್ಧಿಯ ಜೊತೆಗೆ ಬಾಲಗಂಗಾಧರನಾಥ ಶ್ರೀಗಳ ಜನ್ಮಸ್ಥಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು

news18-kannada
Updated:December 7, 2019, 3:59 PM IST
ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧಾರ ; ಸಚಿವ ಸಿ ಟಿ ರವಿ
ಸಚಿವ ಸಿ.ಟಿ. ರವಿ
  • Share this:
ಬೆಂಗಳೂರು(ಡಿ.07): ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ. ಗೋಲ್ಡನ್ ಚಾರಿಯೇಟ್ ರೈಲು ಸೇವೆ ಪುನರಾರಂಭಕ್ಕೆ ಪ್ರಯತ್ನಿಸಿದ್ದು, ವಿಶ್ವ ಪಾರಂಪರಿಕ ಸ್ಥಳಗಳ ಜೊತೆಗೆ ಹೊಸ ತಾಣಗಳಾದ ಬಾದಾಮಿ, ಬೇಲೂರು, ಹಳೆಬೀಡು, ಪಟ್ಟದಕಲ್ಲು ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.

ವಿಧಾನಸೌಧದಲ್ಲಿ ಹೆಜ್ಜೆ ಗುರುತು ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು,  ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ನಾವು ಬದ್ಧವಾಗಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಬಾದಾಮಿ, ಬೇಲೂರು, ಹಂಪಿ, ವಿಜಯಪುರದಲ್ಲಿ 4 ಸ್ಟಾರ್ ಹೊಟೇಲ್ ನಿರ್ಮಾಣ ಮಾಡಲಾಗುವುದು. 75 ಕೋಟಿ ವೆಚ್ಚದಲ್ಲಿ ಮೈಸೂರ್ ಹಾಥ್ ನಿರ್ಮಾಣ ಮಾಡಿ  ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಶಿವಕುಮಾರ ಸ್ವಾಮೀಜಿಗಳ ಜನ್ಮಸ್ಥಳ ಅಭಿವೃದ್ಧಿಗೆ ಒತ್ತು 

ಪ್ರವಾಸಿ ತಾಣಗಳ ಅಭಿವೃದ್ಧಿಗೆ 279 ಕೋಟಿ ರೂಪಾಯಿ ನೀಡಲಾಗುವುದು. ತುಮಕೂರಿನ ಶಿವಕುಮಾರ ಸ್ವಾಮೀಜಿಗಳ ಜನ್ಮಸ್ಥಳ ಅಭಿವೃದ್ಧಿಯ ಜೊತೆಗೆ ಬಾಲಗಂಗಾಧರನಾಥ ಶ್ರೀಗಳ ಜನ್ಮಸ್ಥಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸವನ್ನು ವಿಸ್ತರಿಸಲಾಗಿದೆ. ಇದಕ್ಕಾಗಿ 10 ಕೋಟಿ ಅನುದಾನ ನೀಡಲಾಗುವುದು ಎಂದರು.

ಇದನ್ನೂ ಓದಿ : ನಮ್ಮ ಸಮೀಕ್ಷೆ ಪ್ರಕಾರ ನಾವು ಸೋಲುವುದಿಲ್ಲ; ಸತೀಶ್​ ಜಾರಕಿಹೊಳಿ ವಿಶ್ವಾಸ

ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ.  ಮಂಡ್ಯದ ಮೈಶುಗರ್ ನಡೆಸೋಕೆ ಕಷ್ಟ ಈಗಾಗಲೇ ಸಾಕಷ್ಟು ಹಣ ಅದಕ್ಕೆ ಸುರಿದಿದ್ದೇವೆ ಆದರೂ ಏನೂ ಪ್ರಯೋಜನವಿಲ್ಲ  ಎಂದು ಹೇಳಿದರು.

45 ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುತ್ತಿವೆ. ಪ್ರತಿ ಟನ್ ಗೆ 2613 - 3418 ರೂ ನಿಗಧಿ ಮಾಡಲಾಗಿದೆ. ರೈತರಿಗೆ ನೀಡಬೇಕಿದ್ದ ಬಾಕಿ ಮೊತ್ತ 11921 ಕೋಟಿ  ರೂಪಾಯಿ ಪಾವತಿ ಆಗಿದೆ. ಇದರಲ್ಲಿ  37 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ ಎಂದರುಸಾಹಿತಿಗಳು 5 ನಿಮಿಷದಲ್ಲಿ ಹೇಳುವ ವಿಷಯವನ್ನು20 ನಿಮಿಷ ತೆಗೆದುಕೊಳ್ತಾರೆ. ಹೀಗಾಗಿ ನನಗೆ ತಾಳ್ಮೆ, ಸಮಾಧಾನ ಬೆಳೆದಿದೆ. ಅವರಂತೆಯೇ ಹೇಳೋಕೆ ತಾಳ್ಮೆ ಬೆಳೆಸಿಕೊಳ್ಳುತ್ತಿದ್ದೇನೆ. ನಾವು ಅವರ ಬಗ್ಗೆ ಬೇರೆ ಹೇಳೋಕೂ ಆಗಲ್ಲ ಎಂದು ಸಾಹಿತಿಗಳ ಬಗ್ಗೆ ಪರೋಕ್ಷವಾಗಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಮಹಾಪುರುಷರ ಜಯಂತಿ ಸೈದ್ಧಾಂತಿಕವಾಗಿರಬೇಕು

ಜಾತಿ ಆಧಾರಿತ ಜಯಂತಿಗಳ ಬಗ್ಗೆ ನಂಬಿಕೆಯಿಲ್ಲ. ಮಹಾಪುರುಷರ ಜಯಂತಿ ಸೈದ್ಧಾಂತಿಕವಾಗಿರಬೇಕು. ಅವರು ಆಚರಿಸುವ ಸೈದ್ಧಾಂತಿಕತೆಗೆ ಬದ್ಧವಾಗಿರಬೇಕು. ಕೆಲವರು ನಾವೇ ಮಾಡಿದ್ದು ಅಂತ ಎದೆತಟ್ಟಿ ಹೇಳ್ತಾರೆ.  ನಮಗೆ ಹಾಗೆ ಹೇಳಿಕೆಕೊಳ್ಳುವುದು ಬೇಡ. ಅದಕ್ಕೆ ಬೇರೆಯದೇ ಚಿಂತನೆ ಮಾಡುತ್ತಿದ್ದೇವೆ‌. ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಸಚಿವ ಸಿ ಟಿ ರವಿ ತಿರುಗೇಟು ನೀಡಿದರು. 
First published:December 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ