ಮಂಡ್ಯ ರೈತರ ಹೋರಾಟಕ್ಕೆ ಸಿಕ್ಕಿತು ಫಲ; ಇಂದಿನಿಂದ 10 ದಿನ ನಾಲೆಗಳಿಗೆ ನೀರು

ಮಳೆ ಕೊರತೆ, ನೀರಿನ ಸಂಗ್ರಹ ಕಡಿಮೆ ಹಿನ್ನೆಲೆ ಹಾಲಿ ಬೆಳೆದಿರುವ ಬೆಳೆ ರಕ್ಷಣೆ, ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರು ಬಳಸುವಂತೆ ಸೂಚನೆ ನೀಡಲಾಗಿದೆ. 

Latha CG | news18
Updated:July 16, 2019, 4:27 PM IST
ಮಂಡ್ಯ ರೈತರ ಹೋರಾಟಕ್ಕೆ ಸಿಕ್ಕಿತು ಫಲ; ಇಂದಿನಿಂದ 10 ದಿನ ನಾಲೆಗಳಿಗೆ ನೀರು
ಕೆ.ಆರ್​.ಎಸ್​ ಅಣೆಕಟ್ಟು
  • News18
  • Last Updated: July 16, 2019, 4:27 PM IST
  • Share this:
ಮಂಡ್ಯ,(ಜು.16): ನಾಲೆಗೆ ನೀರು ಹರಿಸುವಂತೆ ಕಳೆದ ಒಂದು ತಿಂಗಳಿಂದ ನಿರಂತರ ಹೋರಾಟ ನಡೆಸಿದ್ದ ಮಂಡ್ಯ ಜಿಲ್ಲೆಯ ಅನ್ನದಾತರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿಯ ಮೇರೆಗೆ ಒಣಗುತ್ತಿರುವ ಬೆಳೆಗಳಿಗೆ ಹಾಗೂ ಜನಜಾನುವಾರುಗಳ ಕುಡಿಯುವ ನೀರಿಗಾಗಿ ನಾಲೆಗಳಿಗೆ ನೀರು  ಹರಿಸಲು ಮುಂದಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್​.ಪುಟ್ಟರಾಜು ಅಧ್ಯಕ್ಷತೆಯಲ್ಲಿ ನಡೆದ ಕೆಆರ್​ಎಸ್​ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪ್ರಾಧಿಕಾರದ ಷರತ್ತಿಗೆ ಒಳಪಟ್ಟು, ನಾಲೆಗಳಿಗೆ ನೀರು ಹರಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಜುಲೈ 16ರ ರಾತ್ರಿಯಿಂದ  25ರವರೆಗೆ ಒಟ್ಟು ಹತ್ತು ದಿನ ನಾಲೆಗೆ ನೀರು ಬಿಡಲಾಗುತ್ತದೆ.

ತಲೆಕೆಳಗಾಗುತ್ತಾ ಅತೃಪ್ತರ ಲೆಕ್ಕಾಚಾರ?; ಸುಪ್ರೀಂ ತೀರ್ಪು ಸ್ಪೀಕರ್ ಪರ ಬಂದರೆ ಅವರ ಮುಂದಿರುವ ಆಯ್ಕೆಗಳೇನು?

ಬೆಳೆ ರಕ್ಷಣೆ, ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕಾಗಿ ನಾಲೆಗಳಿಗೆ ನೀರು ಹರಿಸುವಂತೆ ಮಂಡ್ಯ ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಿಂದ ರೈತರು ಹಾಗೂ ವಿವಿಧ ಸಂಘಟನೆಗಳು ಹೋರಾಟಕ್ಕೆ ಇಳಿದಿದ್ದರು. ಇದೀಗ ನಾಲೆಗಳಿಗೆ ನೀರು ಹರಿಸಲು ಐಸಿಸಿ ತೀರ್ಮಾನ ಮಾಡಿದ್ದು, ಅನ್ನದಾತರ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ.

ಜಲಾಶಯದಲ್ಲಿ ಲಭ್ಯವಿರುವ ಅತ್ಯಲ್ಪ ಪ್ರಮಾಣದ ನೀರನ್ನು ಬೆಳೆದು ನಿಂತಿರುವ ಬೆಳೆಗಳ ರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ ನಾಲೆಗಳಿಗೆ ಹತ್ತು ದಿನ ಹರಿಸಲು ಐಸಿಸಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮಳೆ ಕೊರತೆ, ನೀರಿನ ಸಂಗ್ರಹ ಕಡಿಮೆ ಹಿನ್ನೆಲೆ ಹಾಲಿ ಬೆಳೆದಿರುವ ಬೆಳೆ ರಕ್ಷಣೆ, ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರು ಬಳಸುವಂತೆ ಸೂಚನೆ ನೀಡಲಾಗಿದೆ.

ಮುಂಗಾರು ಚುರುಕು: ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ

ರೈತರು  ಕೆಆರ್​ಎಸ್ ಅಚ್ಚುಕಟ್ಟು​​ ಪ್ರದೇಶದಲ್ಲಿ ಯಾವುದೇ ಹೊಸ ಬೆಳೆಗಳನ್ನು ಬೆಳೆಯದಂತೆ ಹಾಗೂ ಹೊಸ ಬೆಳೆಗಳಿಗೆ ಪೂರ್ವಸಿದ್ಧತೆ ಮಾಡಿಕೊಳ್ಳಬಾರದು. ಯಾವುದೇ ಹೊಸ ಬೆಳೆಗಳನ್ನು ಬೆಳೆದು ಹಾನಿಯಾದರೆ ಅದಕ್ಕೆ ನೀರಾವರಿ ಇಲಾಖೆ ಹೊಣೆಯಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
First published:July 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...