Amrut Mahotsav: ಅಮೃತ ಮಹೋತ್ಸವ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲೆಗೊಬ್ಬರು ಸಚಿವರ ನೇಮಕ; ಯಾರಿಗೆ ಯಾವ ಜಿಲ್ಲೆ?

ಅಮೃತ ಹೆಸರಿನ ಎಲ್ಲಾ ಯೋಜನೆಗಳಿಗೂ ರಾಜ್ಯ ಸರ್ಕಾರದ ಅನುದಾನದಿಂದಲೇ ಹಣ ವಿನಿಯೋಗಿಸಲಾಗುವುದು. ಎಲ್ಲಾ ಯೋಜನೆಗಳಿಗೂ ಹಣಕಾಸು ಇಲಾಖೆಯ ಒಪ್ಪಿಗೆ ಇದೆ. ಹಣಕಾಸು ಇಲಾಖೆಯ ಒಪ್ಪಿಗೆ ಬಳಿಕವೇ ಸಚಿವ ಸಂಪುಟದಲ್ಲಿ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧ

ವಿಧಾನಸೌಧ

  • Share this:
    ಬೆಂಗಳೂರು (ಸೆಪ್ಟೆಂಬರ್ 10): ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ (Indian Independence Amrut Mahotsav) ಅಂಗವಾಗಿ ಘೋಷಿಸಲಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಹಾಗೂ ಫಲಾನುಭವಿಗಳ (Felicitated) ಆಯ್ಕೆ ಮಾಡಲು ನಡೆಯುವ ಸಭೆಯ ಅಧ್ಯಕ್ಷತೆ ವಹಿಸಲು ಸಚಿವರನ್ನು (Appointed Ministers) ನೇಮಕ ಮಾಡಿ ರಾಜ್ಯ ಸರ್ಕಾರ (State Government) ಆದೇಶ ಹೊರಡಿಸಿದೆ. ಜಿಲ್ಲೆಗಳಲ್ಲಿ ಕೋವಿಡ್ ಮತ್ತು ನೆರೆ ಪರಿಹಾರ ಉಸ್ತುವಾರಿಗಾಗಿ ನೇಮಕ ಮಾಡಿರುವ ಸಚಿವರಿಗೇ ಅಮೃತ ಮಹೋತ್ಸವ ಯೋಜನೆಗಳ ಅನುಷ್ಠಾನದ ಉಸ್ತುವಾರಿ ವಹಿಸಿದ್ದಾರೆ.

    ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗಾಗಿ ಕೇಂದ್ರ ಸರ್ಕಾರ (Central Government) ಅಮೃತ ಮಹೋತ್ಸವ ಯೋಜನೆ ಜಾರಿಗೆ ತಂದಿದೆ. ಇದರ ಅಂಗವಾಗಿ ರಾಜ್ಯದಲ್ಲಿಯೂ ಯೋಜನೆಯಡಿ 14 ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದಕ್ಕಾಗಿ 644.5 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಲಾಗಿದೆ.

    ಯಾವ ಸಚಿವರಿಗೆ ಯಾವ ಜಿಲ್ಲೆ?

    1. ಗೋವಿಂದ ಎಂ.ಕಾರಜೋಳ - ಬೆಳಗಾವಿ

    2. ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ

    3. ಆರ್.ಅಶೋಕ್- ಬೆಂಗಳೂರು ನಗರ

    4. ಬಿ. ಶ್ರೀರಾಮುಲು- ಚಿತ್ರದುರ್ಗ

    5. ವಿ.ಸೋಮಣ್ಣ- ರಾಯಚೂರು

    6. ಉಮೇಶ್ ವಿ.ಕತ್ತಿ- ಬಾಗಲಕೋಟೆ

    7. ಎಸ್.ಅಂಗಾರ- ದಕ್ಷಿಣ ಕನ್ನಡ

    8. ಜೆ.ಸಿ.ಮಾಧುಸ್ವಾಮಿ- ತುಮಕೂರು

    9. ಆರಗ ಜ್ಞಾನೇಂದ್ರ- ಚಿಕ್ಕಮಗಳೂರು

    10. ಡಾ: ಸಿ.ಎನ್.ಅಶ್ವತ್ಥ್ ನಾರಾಯಣ- ರಾಮನಗರ

    11. ಸಿ.ಸಿ.ಪಾಟೀಲ್- ಗದಗ

    12. ಆನಂದ್ ಸಿಂಗ್ - ಬಳ್ಳಾರಿ ಮತ್ತು ವಿಜಯನಗರ

    13. ಕೋಟಾ ಶ್ರೀನಿವಾಸ ಪೂಜಾರಿ - ಕೊಡಗು

    14. ಪ್ರಭು ಬಿ.ಚೌಹಾಣ್- ಬೀದರ್

    15. ಮುರುಗೇಶ್ ನಿರಾಣಿ- ಕಲಬುರಗಿ

    16. ಅರಬೈಲ್ ಶಿವರಾಮ್ ಹೆಬ್ಬಾರ್- ಉತ್ತರ ಕನ್ನಡ

    17. ಎಸ್.ಟಿ.ಸೋಮಶೇಖರ್- ಮೈಸೂರು ಮತ್ತು ಚಾಮರಾಜನಗರ

    18. ಬಿ.ಸಿ.ಪಾಟೀಲ್- ಹಾವೇರಿ

    19. ಬಿ.ಎ.ಬಸವರಾಜ್- ದಾವಣಗೆರೆ

    20. ಡಾ: ಕೆ.ಸುಧಾಕರ್- ಚಿಕ್ಕಬಳ್ಳಾಪುರ

    21. ಕೆ.ಗೋಪಾಲಯ್ಯ- ಹಾಸನ

    22. ಶಶಿಕಲಾ ಜೊಲ್ಲೆ- ವಿಜಯಪುರ

    23. ಎಂ.ಟಿ.ಬಿ.ನಾಗರಾಜು- ಬೆಂಗಳೂರು ಗ್ರಾಮಾಂತರ

    24. ಡಾ: ಕೆ.ಸಿ.ನಾರಾಯಣಗೌಡ- ಮಂಡ್ಯ

    25. ಬಿ.ಸಿ.ನಾಗೇಶ್- ಯಾದಗಿರಿ

    26. ವಿ.ಸುನೀಲ್ ಕುಮಾರ್- ಉಡುಪಿ

    27. ಆಚಾರ್ ಹಾಲಪ್ಪ ಬಸಪ್ಪ- ಕೊಪ್ಪಳ

    28. ಶಂಕರ.ಬಿ.ಪಾಟೀಲ್ ಮುನೇನಕೊಪ್ಪ- ಧಾರವಾಡ

    29. ಮುನಿರತ್ನ- ಕೋಲಾರ


    ಅಮೃತ ಮಹೋತ್ಸವ ಯೋಜನೆಯಡಿ ಹಲವು ಯೋಜನೆಗಳು

    ಅಮೃತ್‌ ನಿರ್ಮಲ ನಗರ ಯೋಜನೆ ಅಡಿ 75 ನಗರ ಸ್ಥಳೀಯ ಸಂಸ್ಥೆಗಳನ್ನು ಸ್ವಚ್ಛ ಹಾಗೂ ಸುಂದರವಾಗಿ ಕಾಣುವಂತೆ ಮಾಡಲು ತಲಾ 1 ಕೋಟಿ ರು.ಗಳಂತೆ 75 ಕೋಟಿ ರು.ಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ. ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ ಅಡಿ ಆರೋಗ್ಯ ಇಲಾಖೆ ವತಿಯಿಂದ 150 ಕೋಟಿ ರು. ವೆಚ್ಚದಲ್ಲಿ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಹಾಗೂ ಪ್ರತಿ ಆರೋಗ್ಯ ಕೇಂದ್ರಕ್ಕೆ ತಲಾ 20 ಲಕ್ಷ ರು. ಒದಗಿಸಲಾಗುತ್ತದೆ.

    ಇದನ್ನು ಓದಿ: Coronavirus: ಅಕ್ಟೋಬರ್ ಅಂತ್ಯದವರೆಗೆ ಕೇರಳಕ್ಕೆ ಹೋಗಬೇಡಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮನವಿ

    7500 ಸ್ವ ಸಹಾಯ ಸಂಘಗಳಿಗೆ ಅನುದಾನ

    ಅಮೃತ ಸ್ವ ಸಹಾಯ ಕಿರು ಉದ್ದಿಮೆ ಯೋಜನೆ ಅಡಿ ರಾಜ್ಯದಲ್ಲಿ ಇರುವ 7500 ಅತ್ಯುತ್ತಮ ಸ್ವ ಸಹಾಯ ಸಂಘಗಳನ್ನು ಆಯ್ಕೆ ಮಾಡಿ ತಲಾ 1 ಲಕ್ಷ ರೂಪಾಯಿ ಸಹಾಯಧನ ಒದಗಿಸಲಾಗುತ್ತದೆ. 75 ಕೋಟಿ ರು. ಒದಗಿಸಿ ಉದ್ದಿಮೆಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತದೆ. ಅಮೃತ್‌ ಗ್ರಾಮ ಪಂಚಾಯಿತಿ ಯೋಜನೆ ಅಡಿ 750 ಪಂಚಾಯಿತಿಗಳಿಗೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ತಲಾ 25 ಲಕ್ಷ ರು. ಅನುದಾನ (187 ಕೋಟಿ ರೂ.) ಒದಗಿಸಲಾಗುತ್ತದೆ.

    ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

    ಅಮೃತ ಹೆಸರಿನ ಎಲ್ಲಾ ಯೋಜನೆಗಳಿಗೂ ರಾಜ್ಯ ಸರ್ಕಾರದ ಅನುದಾನದಿಂದಲೇ ಹಣ ವಿನಿಯೋಗಿಸಲಾಗುವುದು. ಎಲ್ಲಾ ಯೋಜನೆಗಳಿಗೂ ಹಣಕಾಸು ಇಲಾಖೆಯ ಒಪ್ಪಿಗೆ ಇದೆ. ಹಣಕಾಸು ಇಲಾಖೆಯ ಒಪ್ಪಿಗೆ ಬಳಿಕವೇ ಸಚಿವ ಸಂಪುಟದಲ್ಲಿ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
    Published by:HR Ramesh
    First published: