Puneetha Namana: ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ

ಪುನೀತ್ ಅವರ ಅಗಲಿಕೆಯ ನಂತರ ನಲ್ವತ್ತೆಂಟು ಗಂಟೆಗಳ ಕಾಲ ಹರಿದು ಬಂದ ಅಭಿಮಾನಿಗಳ ಜನಸಾಗರ ನಾನು ವರ್ಣಿಸಲು ಅಸಾಧ್ಯ. ಅಂದು ನಾನು ಪ್ರೀತಿಯ ಅಪ್ಪು ಕೆನ್ನೆಗೆ ಮುತ್ತಿಟ್ಟಾಗ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ ಅದು ನನ್ನ ಹೃದಯದಿಂದ ಬಂದದ್ದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​

ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​

 • Share this:
  ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Power Star Puneeth Rajkumar) ನಮ್ಮನ್ನು ಅಗಲಿ ಇಂದಿಗೆ 19 ದಿನಗಳು ಕಳೆದಿವೆ. ಅಪ್ಪು ನಿಧನಕ್ಕೆ ಸಂತಾಪ ಸೂಚಿಸುವ ಸಲುವಾಗಿ ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ಇಂದು ಪುನೀತ ನಮನ ಕಾರ್ಯಕ್ರಮವನ್ನು (Puneetha Namana) ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಸಿನಿ ರಂಗದ ಕಲಾವಿದರು, ಸಿಎಂ ಆದಿಯಾಗಿ ಹಲವು ರಾಜಕಾರಣಿಗಳು ಪಾಲ್ಗೊಂಡು ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸಿದರು. ಅಪ್ಪು ನಿಧನದ ಬಳಿಕ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ನೀಡಬೇಕು ಎಂಬ ಕೂಗು ಎಲ್ಲೆಡೆಯಿಂದ ಕೇಳಿಬಂದಿತ್ತು. ಅದರಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಅವರು ತಮ್ಮ ಭಾಷಣದ ವೇಳೆ ಪುನೀತ್ ರಾಜ್​ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಿಸಿದರು.

  1992ರಿಂದ ರಾಜ್ಯ ಸರ್ಕಾರದ ವತಿಯಿಂದ ಕೊಡಮಾಡುತ್ತಾ ಬಂದಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಈವರೆಗೂ 9 ಮಂದಿಗಷ್ಟೇ ನೀಡಲಾಗಿದೆ. ಇದೀಗ ಪುನೀತ್ ಅವರು ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಭಾಜನರಾದ 10ನೇ ವ್ಯಕ್ತಿಯಾಗಿದ್ದಾರೆ. ಈವರೆಗೂ ಡಾ. ರಾಜಕುಮಾರ್, ಶಿವಕುಮಾರ ಸ್ವಾಮೀಜಿ, ಭೀಮಸೇನ್ ಜೋಷಿ, ಸಿಎನ್ಆರ್ ರಾವ್ ಸೇರಿದಂತೆ 9 ಜನರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ.

  ಪ್ರಶಸ್ತಿ ಘೋಷಿಸುತ್ತಿದ್ದಂತೆ ಎದ್ದು ಚಪ್ಪಾಳೆ ತಟ್ಟಿದ ಸಭಿಕರು

  ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಈ ದೇಶದ ಇತಿಹಾಸ ಬಹಳ ದೊಡ್ಡದಿದೆ. ಆದರೆ, ಮನುಷ್ಯರ ಚಾರಿತ್ರ್ಯ ತುಂಬಾ ಚಿಕ್ಕದಾಗಿದೆ. ಪುನೀತ್ ರಾಜಕುಮಾರ್ ಅವರು ಬಹುದೊಡ್ಡ ಚಾರಿತ್ರ್ಯದೊಂದಿಗೆ ಈ ದೇಶದ ಇತಿಹಾಸ ಸೇರಿದ್ದಾರೆ. ಮುತ್ತುರಾಜನ ಮುತ್ತು ಇಂದು ದೈಹಿಕವಾಗಿ ನಮ್ಮನ್ನು ಅಗಲಿದರು ಅವರ ಚಾರಿತ್ರ್ಯ ಎಂದಿಗೂ ಅಜರಾಮರವಾಗಿರಲಿದೆ. ಅವರ ಸೇವೆ, ಉದಾತ್ತ ಮಾನವೀಯ ಕಳಕಳಿಗೆ ರಾಜ್ಯ ಸರ್ಕಾರ ಆರು ಕೋಟಿ ಕನ್ನಡಿಗರ ಪರವಾಗಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಿದೆ ಎಂದು ಘೋಷಿಸಿದರು. ಪ್ರಶಸ್ತಿ ಘೋಷಿಸುತ್ತಿದ್ದಂತೆ ನೆರೆದಿದ್ದ ಎಲ್ಲರೂ ಎದ್ದು ನಿಂತು ಕರತಾಡತನ ಮೊಳಗಿಸಿದರು.

  ಪುನೀತ್ ರಾಜ್ ಕುಮಾರ್ ಅವರು ಡಾ ರಾಜ್ ಕುಮಾರ್ ಅವರ ಆದರ್ಶಗಳನ್ನು ಚಾಚೂ ತಪ್ಪದೆ ಪಾಲಿಸಿ ಎಲ್ಲರನ್ನೂ ಅವರು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರು. ಸೂರ್ಯ ಚಂದ್ರ ಇರುವವರೆಗೂ ಪುನೀತ್ ರಾಜಕುಮಾರ್ ಅವರು ಚಿರಸ್ಥಾಯಿಯಾಗಿರುತ್ತಾರೆ ಕರ್ನಾಟಕ ರತ್ನವಾಗಿ ಮಿಂಚುತ್ತಿರುತ್ತಾರೆ. ಎಲ್ಲರ ಹೃದಯದಲ್ಲೂ ಅವರು ನೆಲೆಸುತ್ತಾರೆ ಎಂದು ಅವರು ಭಾವುಕರಾಗಿ ನುಡಿದರು.

  ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ ಅಪ್ಪು

  ನಾನು ಬಾಲ್ಯದಿಂದಲೂ ಪುನೀತ್ ರಾಜ್ ಕುಮಾರ್ ಅವರನ್ನು ಕಂಡಿದ್ದೇನೆ. ಅವರ ಸರಳತೆ ಅವರ ಸೇವಾ ಗುಣಗಳು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿ ಡಾಕ್ಟರ್ ರಾಜ್ ತಕ್ಕ ಮಗನಾಗಿ ಆಗಿ ಬೆಳೆದು ಎಲ್ಲರಿಗೂ ಸ್ನೇಹ ಪ್ರೀತಿ ಹಂಚಿ ಹೋದ ಆ ಮಹಾನ್ ವ್ಯಕ್ತಿಯನ್ನು ಚಿರಸ್ಥಾಯಿಯಾಗಿ ಉಳಿಸುವ ಕರ್ತವ್ಯವನ್ನ ನಮ್ಮ ಸರ್ಕಾರ ಮಾಡುತ್ತದೆ ಎಂದು ಅವರು ತಿಳಿಸಿದರು.

  ಪುನೀತ್ ಅವರ ಅಗಲಿಕೆಯ ನಂತರ ನಲ್ವತ್ತೆಂಟು ಗಂಟೆಗಳ ಕಾಲ ಹರಿದು ಬಂದ ಅಭಿಮಾನಿಗಳ ಜನಸಾಗರ ನಾನು ವರ್ಣಿಸಲು ಅಸಾಧ್ಯ. ಅಂದು ನಾನು ಪ್ರೀತಿಯ ಅಪ್ಪು ಕೆನ್ನೆಗೆ ಮುತ್ತಿಟ್ಟಾಗ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ ಅದು ನನ್ನ ಹೃದಯದಿಂದ ಬಂದದ್ದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

  ಇದನ್ನು ಓದಿ: Puneeth Rajkumar: 'ಪುನೀತ ನಮನ' ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ ವಿಶೇಷ ಪುತ್ಥಳಿ..!

  ಕಾರ್ಯಕ್ರಮ ಆರಂಭವಾದಾಗ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಮುತ್ತುರಾಜನ ಮುತ್ತು ಎತ್ತ ಹೋದೆಯೋ... ಎಂಬ ಅರ್ಥಗರ್ಭಿತ ಹಾಡನ್ನು ಪ್ರಸಾರ ಮಾಡಲಾಯಿತು. ಹಾಡು ಪ್ರಸಾರವಾಗುತ್ತಿದ್ದಂತೆ ಎಲ್ಲರೂ ಎದ್ದು ನಿಂತು ದೀಪ ಹಿಡಿದು ಅಪ್ಪುವಿಗೆ ಭಾಷ್ಪಾಂಜಲಿ ಸಲ್ಲಿಸಿದರು.
  Published by:HR Ramesh
  First published: