HOME » NEWS » State » STATE GOVERNMENT ALLOWS 100 PERCENT OCCUPANCY IN FILM THEATRE IN KARNATAKA FOR FOUR WEEKS SESR

ಥಿಯೇಟರ್​ ಭರ್ತಿಗೆ ಅವಕಾಶ; ನಾಲ್ಕುವಾರ ಗಡುವು ನೀಡಿದ ರಾಜ್ಯ ಸರ್ಕಾರ

ನಾಲ್ಕು ವಾರಗಳ ಶೇ 100 ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದೆ. ಬಳಿಕ ಕೊರೋನಾ ಸೋಂಕಿನ ಪ್ರಕರಣದ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ

news18-kannada
Updated:February 3, 2021, 7:08 PM IST
ಥಿಯೇಟರ್​ ಭರ್ತಿಗೆ ಅವಕಾಶ; ನಾಲ್ಕುವಾರ ಗಡುವು ನೀಡಿದ ರಾಜ್ಯ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಫೆ. 3): ಎಲ್ಲೆಡೆ ಕೋವಿಡ್​ ಮಾರ್ಗಸೂಚಿ ಸಡಿಲಗೊಳಿಸಿರುವ ವೇಳೆ ಸಿನಿಮಾ ಥಿಯೇಟರ್​ಗೆ ಮಾತ್ರ ಆಸನಗಳ ಭರ್ತಿಗೆ ನಿರ್ಬಂಧ ಹೇರಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ಯಾಂಡಲ್​ವುಡ್​ ಮಂದಿ ಗರಂ ಆಗಿದ್ದರು. ಈ ಕುರಿತು ಹಿರಿಯ ನಟ ಶಿವರಾಜ್​ ಕುಮಾರ್​​, ತಾರಾ ಅನುರಾಧ ಸೇರಿದಂತೆ ಫಿಲ್ಮ್​ ಛೇಂಬರ್​ನ ಕೆಲಸ ಸದಸ್ಯರು ಆರೋಗ್ಯ ಸಚಿವ ಕೆ ಸುಧಾಕರ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಚಲನಚಿತ್ರರಂಗ ಕಳೆದ 10 ತಿಂಗಳಲ್ಲಿ ಎಲ್ಲ ರಂಗಗಳಂತೆ  ನಷ್ಟ ಅನುಭವಿಸಿದೆ. ಶೇಕಡಾ 50ರಷ್ಟು ಅವಕಾಶ ನೀಡಿದರೆ ಪರಭಾಷಾ ಚಿತ್ರಗಳ ಹಾವಳಿ ಹೆಚ್ಚಾಗುತ್ತದೆ . ಈ ಹಿನ್ನಲೆ ರಾಜ್ಯದಲ್ಲಿಯೂ  ಶೇಕಡಾ 100ರಷ್ಟು ಆಸನ ಭರ್ತಿಗೆ  ಅವಕಾಶ ಮಾಡಿಕೊಡಬೇಕು ಎಂದು ಅಹವಾಲು ಮುಂದಿಟ್ಟರು. ಫಿಲ್ಮ್​ ಚೇಂಬರ್​ ವಾದಕ್ಕೆ ಮಣಿದ ಸರ್ಕಾರ ನಾಲ್ಕು ವಾರಗಳ ಶೇ 100 ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದೆ. ಬಳಿಕ ಕೊರೋನಾ ಸೋಂಕಿನ ಪ್ರಕರಣದ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ. ಈ ಕುರಿತು ಮಾತನಾಡಿದ ಸಚಿವ ಸುಧಾಕರ್​, ಟಾಕೀಸ್​ಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ನಾಳೆಯಿಂದಲೇ ಹೊಸ ಮಾರ್ಗಸೂಚಿ ಜಾರಿ ಮಾಡಲಾಗುವುದು. ಸಿಎಂ ಸೂಚನೆ ಮೇರೆ ಚಿತ್ರರಂಗದೊಂದಿಗೆ  ಸಭೆ ನಡೆಸಿದ್ದೇವೆ. ಕೊರೋನಾ ಸೋಂಕಿನ ಪ್ರಕರಣ ಹೆಚ್ಚಳವಾದರೆ ನಿರ್ಧಾರ ವಾಪಸ್ ಪಡೆಯುವುದಾಗಿ ತಿಳಿಸಿದರು.

ಅಭಿಮಾನಿಗಳ ಮೇಲೆ ನಮ್ಮ ಭರವಸೆ : ಶಿವರಾಜ್​ ಕುಮಾರ್​

ಇನ್ನು ಈ ಕುರಿತು ಮಾತನಾಡಿದ ನಟ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​, ತಾಂತ್ರಿಕ ಸಲಹಾ ಸಮಿತಿ ಬಳಿ ನಮ್ಮ ಸಮಸ್ಯೆ ಹೇಳಿದ್ದೇವೆ. ಸಿನಿಮಾ ಥಿಯೇಟರ್​ಗೆ ಮಾತ್ರ ಶೇ.50ರಷ್ಟು ಆಸನ ನೀಡಲಾಗಿದ್ದು, ಶೇ 100 ರಷ್ಟು ಯಾವ ಉದ್ದೇಶದಿಂದ ಕೇಳುತ್ತಿದ್ದೇವೆ ಎಂಬುದರ ವಿವರಣೆ ನೀಡಿದ್ದೇವೆ. ಸರ್ಕಾರ ಇದಕ್ಕೆ ಒಪ್ಪಿದ್ದು, ನಾಲ್ಕು ವಾರಗಳ ಕಾಲವಕಾಶ ನೀಡಿದೆ. ಅಲ್ಲದೇ ಸ್ಯಾನಿಟೈಸ್, ಮಾಸ್ಕ್ ಬಗ್ಗೆ ಸೂಚಿಸಿದ್ದಾರೆ‌. ನಮ್ಮ ಅಭಿಮಾನಿಗಳು ಸಹಕರಿಸುತ್ತಾರೆ. ನಾಲ್ಕು ವಾರ ಅನ್ನೋದು ನಮಗೆ ಬಹಳ ಚಿಕ್ಕದು. ನಮ್ಮ ಮೇಲೆ ಸರ್ಕಾರ ಭರವಸೆ ಇಟ್ಟಿದೆ, ನಾವು ಅಭಿಮಾನಿಗಳ ಮೇಲೆ ಭರವಸೆ ಇಟ್ಟಿದ್ದೇವೆ. ನಮ್ಮ ಬೇಡಿಕೆಗೆ ಮಣಿದು ಮಾರ್ಗಸೂಚಿ ಬದಲಾಯಿಸಿದ ಸಿಎಂ ಅವರಿಗೂ ಧನ್ಯವಾದ ಅರ್ಪಿಸುತ್ತೇವೆ ಎಂದರು.
Published by: Seema R
First published: February 3, 2021, 7:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories