ರೈತ ಮಹಿಳೆಗೆ ಸಚಿವ ಮಾಧುಸ್ವಾಮಿ ಅವಾಚ್ಯ ಪದ ಬಳಕೆ; ಕ್ಷಮೆಗೆ ಆಗ್ರಹಿಸಿರುವ ರಾಜ್ಯ ರೈತ ಸಂಘ

ಮಹಿಳೆಯರು ಸಚಿವರ ನಡೆಗೆ ಛೀಮಾರಿ ಹಾಕುತ್ತಿದ್ದಾರೆ. ಇದರ ಬೆನ್ನಿಗೆ ಇಂದು ಆಕ್ರೋಶ ಹೊರಹಾಕಿರುವ ರಾಜ್ಯ ರೈತ ಸಂಘ ಮತ್ತು ಹಸಿರು ಸೇವೆ, ಸಚಿವರು ಪ್ರಶ್ನೆ ಮಾಡಿದ ಮಹಿಳೆಯನ್ನು ಅವಾಚ್ಯ ಶಬ್ದದಿಂದ ನಿಂಧಿಸಿದ್ದು ತಪ್ಪು ಎಂದು ತಿಳಿಸಿದೆ.

news18-kannada
Updated:May 21, 2020, 3:25 PM IST
ರೈತ ಮಹಿಳೆಗೆ ಸಚಿವ ಮಾಧುಸ್ವಾಮಿ ಅವಾಚ್ಯ ಪದ ಬಳಕೆ; ಕ್ಷಮೆಗೆ ಆಗ್ರಹಿಸಿರುವ ರಾಜ್ಯ ರೈತ ಸಂಘ
ಜೆಸಿ ಮಾಧುಸ್ವಾಮಿ
  • Share this:
ಬೆಂಗಳೂರು (ಮೇ 21); ರೈತ ಮಹಿಳೆಯನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಅವಮಾನಿಸಿದ ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಕ್ರೋಶ ಹೊರಹಾಕಿದೆ. 

ಕೋಲಾರದಲ್ಲಿ ನೀರಾವರಿ ಯೋಜನೆಯ ವೀಕ್ಷಣೆಗಾಗಿ ಬುಧವಾರ ಸಚಿವ ಮಾಧುಸ್ವಾಮಿ ಜಿಲ್ಲೆಗೆ ತೆರಳಿದ್ದರು. ಆದರೆ, ಅಗ್ರಹಾರ ಕೆರೆ ವೀಕ್ಷಣೆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಕೋಲಾರ ಜಿಲ್ಲಾದ್ಯಕ್ಷೆ ನಳಿನಿ ಗೌಡ ಹಾಗೂ ಮತ್ತೊರ್ವ ಮಹಿಳಾ ಹೋರಾಟಗಾರ್ತಿ ಸಚಿವರಿಗೆ ಮನವಿ ನೀಡಲು ಮುಂದಾದರು.

ಅಲ್ಲದೆ, "ದಯವಿಟ್ಟು ಅಗ್ರಹಾರ ಕೆರೆಯಲ್ಲಿನ ಒತ್ತುವರಿಯನ್ನು ತೆರವುಗೊಳಿಸಿ" ಎಂದು ಸಚಿವರ ಬಳಿ ವಿನಂತಿಸಿಕೊಂಡಿದ್ದರು. ಆದರೆ, ಈ ವೇಳೆ ಗರಂ ಆದ ಸಚಿವರು "ನೀನು ತೆರವು ಮಾಡ್ತೀಯೇನಮ್ಮ, ರಾಸ್ಕಲ್‌" ಎಂದು ಅವಾಚ್ಯ ಪದ ಬಳಸಿ ನಿಂದಿಸಿದ್ದರು. ಅಲ್ಲದೆ, ಪೊಲೀಸರ ಮೂಲಕ ರೈತ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಹೊರಹಾಕಲಾಗಿತ್ತು.

ಈ ಘಟನೆ ಇದೀಗ ರಾಜ್ಯಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಮಹಿಳೆಯರು ಸಚಿವರ ನಡೆಗೆ ಛೀಮಾರಿ ಹಾಕುತ್ತಿದ್ದಾರೆ. ಇದರ ಬೆನ್ನಿಗೆ ಇಂದು ಆಕ್ರೋಶ ಹೊರಹಾಕಿರುವ ರಾಜ್ಯ ರೈತ ಸಂಘ ಮತ್ತು ಹಸಿರು ಸೇವೆ, "ಸಚಿವರು ಪ್ರಶ್ನೆ ಮಾಡಿದ ಮಹಿಳೆಯನ್ನು ಅವಾಚ್ಯ ಶಬ್ದದಿಂದ ನಿಂಧಿಸಿದ್ದು ತಪ್ಪು. ಸಚಿವರು ಮಹಿಳೆಯ ಮೇಲೆ ದರ್ಪ ತೋರಿಸಿದ್ದಾರೆ. ಹೀಗಾಗಿ ಈ ಕೂಡಲೇ ಸಚಿವರು ತಮ್ಮ ವರ್ತನೆ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು" ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ರೈತ ಮಹಿಳೆಯನ್ನು ಸಚಿವ ಮಾಧುಸ್ವಾಮಿ ನಿಂದಿಸಿದ ಪ್ರಕರಣ; ಪೊಲೀಸ್‌ ಮಹಾನಿರ್ದೇಶಕರಿಗೆ ಕಾಂಗ್ರೆಸ್‌ ದೂರು
First published: May 21, 2020, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading