• Home
  • »
  • News
  • »
  • state
  • »
  • Congress Tweet: ಸಿಎಂ ಅಂಕಲ್, ಶಾಲೆಗೆ ಯಾವ ಬಣ್ಣನಾದ್ರೂ ಹೊಡಿರಿ; ಮೊದಲು ಮಕ್ಕಳಿಗೆ ಪುಸ್ತಕ ಕೊಡಿ

Congress Tweet: ಸಿಎಂ ಅಂಕಲ್, ಶಾಲೆಗೆ ಯಾವ ಬಣ್ಣನಾದ್ರೂ ಹೊಡಿರಿ; ಮೊದಲು ಮಕ್ಕಳಿಗೆ ಪುಸ್ತಕ ಕೊಡಿ

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

ಉಡುಪಿಯಲ್ಲಿ ಮಕ್ಕಳೇ ಶ್ರಮದಾನದ ಮೂಲಕ ರಸ್ತೆ ರಿಪೇರಿ ಮಾಡಿದ್ದನ್ನು ಕಾಂಗ್ರೆಸ್‌ ಪ್ರಸ್ತಾಪಿಸಿ ಸರಣಿ ಟ್ವೀಟ್​ ಮಾಡಿದ್ದಾರೆ.

  • Share this:

ಬೆಂಗಳೂರು (ನ.15): ಬಿಜೆಪಿ ಸರ್ಕಾರದ (BJP Government) ವಿರುದ್ಧ ಕಾಂಗ್ರೆಸ್ ಸರಣಿ ಟ್ವೀಟ್ (Congress Tweet)​ ಮೂಲಕ ಕಿಡಿಕಾರಿದೆ. ​ಸಿಎಂ ಅಂಕಲ್ ಶಾಲೆಗೆ (School) ಯಾವ ಬಣ್ಣನಾದ್ರೂ ಹೊಡಿರಿ. ನಮ್ಮ ಉಡುಪಿಯಲ್ಲಿ ಶಾಲೆಗೆ ಬರಲು ರಸ್ತೆಯೇ ಸರಿ ಇಲ್ಲ. ನಾವು ಶಾಲೆಗೆ ಬಂದ್ರೆ ತಾನೇ ನಿಮ್ಮ ಬಣ್ಣ ನೋಡಲು ಸಾಧ್ಯವಾಗುವುದು? ನಾವೇ ನಮ್ ಕೈಲಾದಷ್ಟು ಸರಿಪಡಿಸಿದ್ದೇವೆ. ನೀವ್ ಯಾವಾಗ ನಿಮ್ಮ ಜವಾಬ್ದಾರಿ ನಿರ್ವಹಿಸುವುದು ಸಿಎಂ ಅಂಕಲ್? ಎಂದು ಟ್ವೀಟ್ ಮೂಲಕ ಕಾಂಗ್ರೆಸ್​ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಪ್ರಶ್ನೆ ಮಾಡಿದ್ದಾರೆ. ಉಡುಪಿಯಲ್ಲಿ ಮಕ್ಕಳೇ ಶ್ರಮದಾನದ ಮೂಲಕ ರಸ್ತೆ ರಿಪೇರಿ ಮಾಡಿದ್ದನ್ನು ಕಾಂಗ್ರೆಸ್‌ ಇಲ್ಲಿ ಪ್ರಸ್ತಾಪ ಮಾಡಿದೆ. 


ಪಠ್ಯಪುಸ್ತಕ ಕೊಡಲಿಲ್ಲ ಏಕೆ?


ಸಿಎಂ ಅಂಕಲ್ ಹ್ಯಾಶ್ ಟ್ಯಾಗ್ ಅಡಿ ಕಾಂಗ್ರೆಸ್ ಸರಣಿ ಟ್ವೀಟ್ ಮುಂದುವರೆದಿದೆ. ಸರ್ಕಾರಿ ಶಾಲೆಗಳಷ್ಟೇ ಅಲ್ಲ, ಖಾಸಗಿ ಶಾಲೆಗಳಿಗೂ ಸಂಪೂರ್ಣ ಪಠ್ಯಪುಸ್ತಕ ಕೊಡಲಿಲ್ಲ ಏಕೆ? ನಾವು ಶಾಲೆಗಳಿಗೆ ಬಣ್ಣ ನೋಡಲು ಬರಬೇಕಾ, ಪಾಠ ಕಲಿಯಲು ಬರಬೇಕಾ ಅಂಕಲ್? ಅರ್ಧ ವರ್ಷ ಕಳೆದರೂ ಪುಸ್ತಕವನ್ನೇ ಕೊಟ್ಟಿಲ್ಲ ಅಂದ್ರೆ ನಾವು ಓದಿ ಎಕ್ಸಾಮ್ ಬರೆಯೋದು ಹೇಗೆ ಸಿಎಂ ಅಂಕಲ್?  ಟ್ವೀಟ್ ಮೂಲಕ ಕಾಂಗ್ರೆಸ್​ ಸಿಎಂ ಬೊಮ್ಮಾಯಿ  ಅವರನ್ನು ಪ್ರಶ್ನೆ ಮಾಡಿದೆ.


#ಸಿಎಂಅಂಕಲ್ ಶಾಲೆಗೆ ಯಾವ ಬಣ್ಣನಾದ್ರೂ ಹೊಡಿರಿ,ನಮ್ಮ ಉಡುಪಿಯಲ್ಲಿ ಶಾಲೆಗೆ ಬರಲು ರಸ್ತೆಯೇ ಸರಿ ಇಲ್ಲ,
ನಾವು ಶಾಲೆಗೆ ಬಂದರೆ ತಾನೆ ನಿಮ್ಮ ಬಣ್ಣ ನೋಡಲು ಸಾಧ್ಯವಾಗುವುದು?


ನಾವೇ ನಮ್ ಕೈಲಾದಷ್ಟು ಸರಿಪಡಿಸಿದ್ದೇವೆ, ನೀವ್ ಯಾವಾಗ ನಿಮ್ಮ ಜವಾಬ್ದಾರಿ ನಿರ್ವಹಿಸುವುದು ಸಿಎಂ ಅಂಕಲ್? pic.twitter.com/HYcJKp0VCD


— Karnataka Congress (@INCKarnataka) November 15, 2022



ಏಕೆ ತಮ್ಮ ಕಾರುಗಳಿಗೆ ಕೇಸರಿ ಪೈಂಟ್ ಬಳಸಿಲ್ಲ?


ಶಾಲೆಗಳಿಗೆ ಬಣ್ಣ ಬಳಿಯುವ ರಾಜಕೀಯಕ್ಕೆ ಮುಂದಾದ ಬಿಜೆಪಿ ನಾಯಕರು ಉತ್ತರಿಸಲಿ. ಏಕೆ ತಮ್ಮ ಕಾರುಗಳಿಗೆ ಕೇಸರಿ ಪೈಂಟ್ ಬಳಸಿಲ್ಲ? ಎಷ್ಟು ಬಿಜೆಪಿ ನಾಯಕರು ತಮ್ಮ ಮನೆಗೆ ಕೇಸರಿ ಬಣ್ಣ ಬಳಿದುಕೊಂಡಿದ್ದಾರೆ? ಮನೆ ಇರಲಿ ಕನಿಷ್ಠ ಕಂಪೌಂಡ್‌ಗೂ ಕೇಸರಿ ಬಣ್ಣ ಬಳಸಿಲ್ಲ ಏಕೆ? ಮೊದಲು ತಮ್ಮ ಮನೆಗೆ ಕೇಸರಿ ಬಳಿದುಕೊಳ್ಳಲಿ, ನಂತರ ಶಾಲೆಗಳತ್ತ ಬರಲಿ.


ಯಾಕೆ ಈ ಅನ್ಯಾಯ ಮಾಡ್ತಿದೀರಿ ಸಿಎಂ ಅಂಕಲ್?


ಶಿಕ್ಷಣ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಕರ್ನಾಟಕ 14ನೇ ಸ್ಥಾನಕ್ಕೆ ಕುಸಿದಿದೆಯಂತೆ, ಹಾಗಂತ ಪೇಪರ್‌ನಲ್ಲಿ ಬಂದಿತ್ತು. ನಮಗೆ ಸೂಚ್ಯಂಕದ ಬಗ್ಗೆ ಗೊತ್ತಿಲ್ಲ, ಆದ್ರೆ ನಮಗೆ ಶಾಲೆಯಲ್ಲಿ ಯಾವ ಸೌಕರ್ಯವೂ ಸಿಗ್ತಿಲ್ಲ, ಶಾಲೆಗೆ ಬಂದರೆ ಯಾವುದೋ ಬಸ್ ಸ್ಟ್ಯಾಂಡ್‌ಗೆ ಬಂದಂತೆ ಆಗುತ್ತಿದೆ. ಯಾಕೆ ಈ ಅನ್ಯಾಯ ಮಾಡ್ತಿದೀರಿ ಸಿಎಂ ಅಂಕಲ್? ಎಂದು ಕಾಂಗ್ರೆಸ್​ ಟ್ವೀಟ್ ಮಾಡಿದ್ದಾರೆ.


ನಾವೂ ಆ ಸಾಧನೆ ಮಾಡೋದು ನಿಮಗೆ ಇಷ್ಟ ಇಲ್ವಾ


ಸಿಎಂ ಅಂಕಲ್ , ಕೋವಿಡ್ ಹೆಸರಲ್ಲಿ 2 ವರ್ಷ ನಮ್ಮ ವಿದ್ಯಾಭ್ಯಾಸ ಹಾಳು ಮಾಡಿದ್ರಿ, ಈಗ ಶೈಕ್ಷಣಿಕ ಸವಲತ್ತು, ಮೂಲಭೂತ ಸೌಕರ್ಯ ಕೊಡದೆ ನಮ್ಮ ವಿದ್ಯಾಭ್ಯಾಸ ಹಾಳು ಮಾಡ್ತಿದೀರಿ. ನಿಮ್ ಮಕ್ಳು ಮಾತ್ರ ಓದಿ ದೊಡ್ಡ ದೊಡ್ಡ ಸಾಧನೆ ಮಾಡ್ಬೇಕು, ಉದ್ಯಮ ಕಟ್ಟಬೇಕು, ನಾವೂ ಆ ಸಾಧನೆ ಮಾಡೋದು ನಿಮಗೆ ಇಷ್ಟ ಇಲ್ವಾ ಸಿಎಂ ಅಂಕಲ್?


ಇದನ್ನೂ ಓದಿ: BJP Tweet: ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಮನೆ ಮಾತ್ರ; ಬಿಜೆಪಿ ವ್ಯಂಗ್ಯ


ಕರ್ನಾಟಕದಲ್ಲಿ ದೊಡ್ಡವರಲ್ಲಿ ಇದ್ದ ತಾರತಮ್ಯ ಶಾಲೆಗಳಲ್ಲಿ ಮಕ್ಕಳ ವಿಚಾರದಲ್ಲೂ ಹೆಚ್ಚಾಗಿದೆ ಅಂತ ಪಿಎಂ ಅಂಕಲ್ ಅವರೇ ಹೇಳ್ತಿದಾರಲ್ಲ ಏಕೆ? ಅಂಬೇಡ್ಕರ್ ಅವರ ಪಾಠದಲ್ಲಿ ಸಮಾನತೆ ಅನ್ನೋ ಪದವನ್ನ ತುಂಬಾ ಓದಿದ್ದೇವೆ, ನಾವೆಲ್ಲಾ ಒಂದೇ ಆದರೂ SC ಮಕ್ಕಳು ಇತರ ಸಮುದಾಯದ ಮಕ್ಕಳೊಂದಿಗೆ ಸಮವಾಗಿರಲು ಸಾಧ್ಯವಾಗ್ತಿಲ್ಲ ಏಕೆ ಅಂಕಲ್? ಎಂದು ಕಾಂಗ್ರೆಸ್​ ಸರಣಿ ಟ್ವೀಟ್​ ಮಾಡಿ ಸಿಎಂ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.

Published by:ಪಾವನ ಎಚ್ ಎಸ್
First published: