ಡಿಸಿಎಂ ಪರಮೇಶ್ವರ್ ಮನೆಯಲ್ಲಿ ಸಚಿವರ ಸಭೆ; ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಕೊನೆಯ ಕಸರತ್ತು!

ಇಂದು ಡಿಸಿಎಂ ಪರಮೇಶ್ವರ್ ಅವರ ಮನೆಯಲ್ಲಿ ಕರೆಯಲಾಗಿರುವ ಸಚಿವರ ಸಭೆಯಲ್ಲಿ ಖುದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಪಕ್ಷ ಮತ್ತು ಮೈತ್ರಿ ಸರ್ಕಾರ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು ಅನಿವಾರ್ಯವಾಗಿ ಕೆಲವರು ತಮ್ಮ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಲೇಬೇಕು” ಅನ್ನೋ ಮಾತನ್ನು  ಸಚಿವರ ಮುಂದಿಟ್ಟಿದ್ದಾರೆ.

MAshok Kumar | news18
Updated:May 30, 2019, 11:11 AM IST
ಡಿಸಿಎಂ ಪರಮೇಶ್ವರ್ ಮನೆಯಲ್ಲಿ ಸಚಿವರ ಸಭೆ; ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಕೊನೆಯ ಕಸರತ್ತು!
ದಿನೇಶ್ ಗುಂಡೂರಾವ್, ಕೆ.ಸಿ. ವೇಣುಗೋಪಾಲ್
  • News18
  • Last Updated: May 30, 2019, 11:11 AM IST
  • Share this:
ಬೆಂಗಳೂರು (ಮೇ.30); ಒಂದೆಡೆ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಕೊನೆಯ ಕಸರತ್ತಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ಮನೆಯಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಸಚಿವರ ಸಭೆ ನಡೆಯುತ್ತಿದೆ.

ಸದಾಶಿವ ನಗರದಲ್ಲಿರುವ ಪರಮೇಶ್ವರ್ ಮನೆಯಲ್ಲಿ ಈಗಾಗಲೇ ಸಭೆ ಆರಂಭವಾಗಿದ್ದು, ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಜಯಮಾಲಾ, ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್, ಎಂಟಿಬಿ ನಾಗರಾಜ್, ವೆಂಕಟರಮಣಪ್ಪ, ದಿನೇಶ್ ಗುಂಡೂರಾವ್ ಸೇರಿದಂತೆ ಬಹುತೇಕ ರಾಜ್ಯ ಸಚಿವ ಸಂಪುಟದ ಎಲ್ಲಾ ಸಚಿವರು ಪಾಲ್ಗೊಂಡಿದ್ದಾರೆ.

ಸಚಿವ ಸ್ಥಾನ ತ್ಯಾಗಕ್ಕೆ ಮನವೋಲೈಕೆ; ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಅಲ್ಲದೆ ಲೋಕಸಭೆ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷದಲ್ಲೂ ಭಿನ್ನಮತೀಯರ ಸಂಖ್ಯೆಯೂ ಹೆಚ್ಚಾಗಿದ್ದು, ಎಲ್ಲರೂ ಸಚಿವ ಸ್ಥಾನಕಾಂಕ್ಷಿಗಳಾಗಿ ಬದಲಾಗಿದ್ದಾರೆ. ಇದು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಭಿನ್ನಮತೀಯರಿಗೆ ಸಚಿವ ಸ್ಥಾನ ನೀಡಿ ಸರ್ಕಾರವನ್ನು ಉಳಿಸಿಕೊಳ್ಳುವುದೊಂದೆ ಈಗ ಕಾಂಗ್ರೆಸ್ ಮುಂದೆ ಉಳಿದಿರುವ ಏಕೈಕ ದಾರಿ.

ಇದನ್ನೂ ಓದಿ : ಮಂಡ್ಯದ ಕೆಲ ಕಾಂಗ್ರೆಸ್ ನಾಯಕರ ರಾಜಕೀಯ ಅಸ್ಥಿತ್ವಕ್ಕೆ ದಾಳವಾದ್ರ ಸುಮಲತಾ?; ಅಡಕತ್ತರಿಗೆ ಸಿಲುಕಿದ ರೆಬಲ್ ನಾಯಕಿ!

ಹೀಗಾಗಿ ಇಂದು ಡಿಸಿಎಂ ಪರಮೇಶ್ವರ್ ಅವರ ಮನೆಯಲ್ಲಿ ಕರೆಯಲಾಗಿರುವ ಸಚಿವರ ಸಭೆಯಲ್ಲಿ ಖುದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಪಕ್ಷ ಮತ್ತು ಮೈತ್ರಿ ಸರ್ಕಾರ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು ಅನಿವಾರ್ಯವಾಗಿ ಕೆಲವರು ತಮ್ಮ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಲೇಬೇಕು” ಅನ್ನೋ ಮಾತನ್ನು  ಸಚಿವರ ಮುಂದಿಟ್ಟಿದ್ದಾರೆ.

ಇದಕ್ಕೂ ಮೊದಲು ನಿಮ್ಮ ಸ್ವ-ಇಚ್ಛೆಯಿಂದ ನೀವೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದು ಒಳಿತು ಎಂದು ಕೆ.ಸಿ. ವೇಣುಗೋಪಾಲ್ ಸಚಿವರ ಎದುರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಸಭೆಯಲ್ಲಿ ಸಂಪುಟ ವಿಸ್ತರಣೆ ಹಾಗೂ ಪುನಃ ರಚನೆ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

ನಿಮ್ಮ ನೆಚ್ಚಿನ ನ್ಯೂಸ್ 18 ಕನ್ನಡ ಸುದ್ದಿಗಳಿಗಾಗಿ ಇದೀಗ ಶೇರ್​ಚಾಟ್ ಫಾಲೋ ಮಾಡಿ.
First published: May 30, 2019, 11:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading