ಸಚಿವ ಸಂಪುಟ ಸಭೆ ಆರಂಭ; ಅಧಿವೇಶನಕ್ಕೆ ಮತ್ತೆ ಸಿಗಲಿದೆಯಾ ಮಾಧ್ಯಮ ಪ್ರವೇಶ?

ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎನ್ನುವ ಕೂಗು ಕರ್ನಾಟಕದಲ್ಲಿ ಜೋರಾಗಿದೆ. ಹೀಗಾಗಿ, ಆದ್ಯತೆಯ ಭಾಷೆಯಾಗಿ ಕನ್ನಡ ಬಳಕೆ ಮಾಡುವ ವಿಧೇಯಕ 2019 ಅನುಮೋದನ ನೀಡುವ ವಿಚಾರ ಪ್ರಸ್ತಾಪ ಆಗಲಿದೆ.

Rajesh Duggumane | news18-kannada
Updated:October 22, 2019, 11:32 AM IST
ಸಚಿವ ಸಂಪುಟ ಸಭೆ ಆರಂಭ; ಅಧಿವೇಶನಕ್ಕೆ ಮತ್ತೆ ಸಿಗಲಿದೆಯಾ ಮಾಧ್ಯಮ ಪ್ರವೇಶ?
ಸಿಎಂ ಬಿ.ಎಸ್​. ಯಡಿಯೂರಪ್ಪ
 • Share this:
ಬೆಂಗಳೂರು: ಪ್ರವಾಹದಿಂದ ರಾಜ್ಯ ಚೇತರಿಸಿಕೊಳ್ಳುವ ಮೊದಲೇ ಮತ್ತೆ ಭಾರೀ ಮಳೆ ಕಾಣಿಸಿಕೊಂಡಿದೆ. ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗುವ ಲಕ್ಷಣ ಗೋಚರವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನ‌ ನೇತೃತ್ವದಲ್ಲಿ ಸಂಪುಟ ಸಭೆ ಕರೆಯಲಾಗಿದೆ.

ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಭೆ ನಡೆಯಲಿದೆ. ಈ ವೇಳೆ ಉತ್ತರ ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆ ಕಾಣಿಸಿಕೊಂಡಿದ್ದು, ಅದರಿಂದ ಆಗಿರುವ ಅನಾಹುತಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಹಿಂದೆ ಆಗಿರುವ ಅನಾಹುತಕ್ಕೆ ಸರಿಯಾದ ಅನುದಾನ ಸಿಕ್ಕಿಲ್ಲ. ಹೀಗಿರುವಾಗಲೇ ಮತ್ತೆ ನೆರೆ ಭೀತಿ ಕಾಡಿದ್ದು, ಮುಂದೆ ಆಗುವ ಅನಾಹುತದ ಬಗ್ಗೆ ಚರ್ಚೆ ನಡೆಸಲು ನಿರ್ಧರಿಸಲಾಗಿದೆ.

ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎನ್ನುವ ಕೂಗು ಕರ್ನಾಟಕದಲ್ಲಿ ಜೋರಾಗಿದೆ. ಹೀಗಾಗಿ, ಆದ್ಯತೆಯ ಭಾಷೆಯಾಗಿ ಕನ್ನಡ ಬಳಕೆ ಮಾಡುವ ವಿಧೇಯಕ 2019 ಅನುಮೋದನ ನೀಡುವ ವಿಚಾರ ಪ್ರಸ್ತಾಪ ಆಗಲಿದೆ.

ರಾಜ್ಯದಲ್ಲಿ ಸಾಕಷ್ಟು ಜಿಲ್ಲೆಗಳನ್ನು ಒಡೆದು ಎರಡು ಜಿಲ್ಲೆಗಳನ್ನಾಗಿ ಮಾಡಬೇಕು, ಹೊಸ ತಾಲೂಕು ರಚನೆ ಮಾಡಬೇಕು ಎನ್ನುವ ವಿಚಾರ ರಾಜ್ಯದಲ್ಲಿ ಚರ್ಚೆಯಲ್ಲಿದೆ. ಈ ಪ್ರಸ್ತಾವನೆ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.

ಸಭೆಯಲ್ಲಿ ಚರ್ಚೆಗೆ ಬರುವ ವಿಚಾರಗಳು:

 • ಅಧಿವೇಶನಕ್ಕೆ ಮಾಧ್ಯಮ ನಿರ್ಬಂದ ಕುರಿತು ಸ್ಪೀಕರ್​ ತೆಗೆದುಕೊಂಡ ನಿರ್ಧಾರದ ಬಗ್ಗೆ ಮರುಪರಿಶೀಲನೆ. ನಿರ್ಬಂಧ ಹಿಂತೆಗೆಯುವ ಬಗ್ಗೆ ಸ್ಪೀಕರ್​ ಮನವಿ ಸಾಧ್ಯತೆ
 • ಉತ್ತರಕರ್ನಾಟಕ ಪ್ರವಾಹ ಸಂತ್ರಸ್ಥರ ಪರಿಹಾರ. ಹಲವು ಕಡೆ ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಚರ್ಚೆ

 • ಪರಿಹಾರ ವಿತರಣೆ, ತುರ್ತು ಕ್ರಮಗಳ ಬಗ್ಗೆ ತೀರ್ಮಾನ ಸಾಧ್ಯತೆ

 • ಹೊಸ ಟೆಕ್ಸ್​​​ಟೈಲ್ಸ್ ಗಾರ್ಮೆಂಟ್ ನೀತಿ ಜಾರಿ ಕುರಿತು ಚರ್ಚೆ

 • ಚಿತ್ರದುರ್ಗದಲ್ಲಿ ಸರ್ಕಾರಿ ಅಧಿಕಾರಿಗಳ ಕಾಂಪ್ಲೆಕ್ಸ್ ನಿರ್ಮಾಣ

 • 25 ಕೋಟಿ ರೂ. ವೆಚ್ಛದ ಯೋಜನೆಗೆ ಅನುಮತಿ ಸಾಧ್ಯತೆ

 • 18 ಕೋಟಿ ರೂಪಾಯಿ ವೆಚ್ಛದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

 • ಅಜ್ಜಂಪುರ ಗ್ರಾ.ಪಂ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸುವ ಸಾಧ್ಯತೆ

 • ಕೃಷ್ಣಾ ಭಾಗ್ಯ ಜಲನಿಗಮಕ್ಕೆ ಲೋನ್ ಪಡೆಯಲು ಅನುಮತಿ?

 • ಒಂದು ಸಾವಿರ ಕೋಟಿ ಲೋನ್ ಸಂಗ್ರಹಕ್ಕೆ ಒಪ್ಪಿಗೆ ಸಾಧ್ಯತೆ

 • ಮೈಸೂರು ಸ್ಯಾಂಡಲ್ ಸೋಪ್ಸ್​ನಿಂದ ಕಿಟ್ ಖರೀದಿಗೆ ಒಪ್ಪಿಗೆ ಸಾಧ್ಯತೆ

 • ಪೊಲೀಸ್ ಭವನ ನಿರ್ಮಾಣಕ್ಕೆ 80 ಕೋಟಿ ಒಪ್ಪಿಗೆ ಸಾಧ್ಯತೆ


 

First published: October 22, 2019, 11:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading