ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023 ) ಸಮಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದ ಸರ್ಕಾರ ವಿರೋಧಿಗಳ ಮೇಲೆ ಮೀಸಲಾತಿ ಮಿಸೈಲ್ ಹಾಕಿದೆ. ಸಂಪುಟ ಸಭೆಯಲ್ಲಿ (Cabinet Meeting) ಇವತ್ತು ಅಂತಿಮ ನಿರ್ಣಯ ಕೈಗೊಂಡಿದ್ದನ್ನು ಖುದ್ದು ಮುಖ್ಯಮಂತ್ರಿಗಳೇ (Chief Minister) ವಿವರಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಘೋಷಿಸಿರುವ ಮೀಸಲಾತಿಯನ್ನ ಪಂಚಮಸಾಲಿ (Panchamasali) ಹೋರಾಟಗಾರರು ಪ್ರತಿಕ್ರಿಯಿಸಿದ್ದಾರೆ. ಮೀಸಲಾತಿ ಘೋಷಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಶ್ರೀಗಳು ಹೋರಾಟ ಕೈಬಿಡುವ ಬಗ್ಗೆ ನಾಳೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮುಸ್ಲಿಂ ಮೀಸಲಾತಿಗೆ ರಾಜ್ಯ ಸರ್ಕಾರ ಕೊಕ್
2C ಅಡಿ ಒಕ್ಕಲಿಗರಿಗೆ ಶೇ. 6 ಮೀಸಲಾತಿ (ಹಿಂದೆ ಇದ್ದದ್ದು 4), 2D ಅಡಿ ಲಿಂಗಾಯತರಿಗೆ ಶೇ.7ರಷ್ಟು ಮೀಸಲಾತಿ (ಹಿಂದೆ ಇದ್ದದ್ದು 7), 2Bಯಿಂದ ಮುಸ್ಲಿಂ ಸಮುದಾಯವನ್ನು ಕೈಬಿಡಲು ನಿರ್ಧರಿಸಲಾಗಿದೆ. ಮುಸ್ಲಿ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದು ಮಾಡಿ ಅವರನ್ನು ಶೇಕಡಾ 10ರ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯೂಎಸ್) ಕೋಟಾಕ್ಕೆ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: Karnataka Election: ರಾಜ್ಯದಲ್ಲಿ ಸದ್ದು ಮಾಡ್ತಿದೆ ಝಣ-ಝಣ ಕಾಂಚಾಣ; ಕಾರ್ನಲ್ಲಿತ್ತು ₹ 67 ಲಕ್ಷ ಹಣ, 16 ಕೆಜಿ ಬೆಳ್ಳಿ!
ಉಳಿದಂತೆ SC-ST ಒಳಮೀಸಲಾತಿಯಲ್ಲಿ ಹೆಚ್ಚಳ ಮಾಡಿ, SC ಸಮುದಾಯ 4 ವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ. ಇದರಂತೆ ಗುಂಪು-01 : SC ಎಡಗೈ ಸಮುದಾಯಕ್ಕೆ ಶೇಕಡಾ 6 ಮೀಸಲಾತಿ ( ಮಾದಿಗ, ಆದಿ ದ್ರಾವಿಡ, ಬಂಬಿ). ಗುಂಪು-02 : SC ಬಲಗೈ ಸಮುದಾಯಕ್ಕೆ ಶೇಕಡಾ 5.5 ಮೀಸಲಾತಿ ( ಆದಿ ಕರ್ನಾಟಕ, ಹೊಲೆಯ, ಛಲವಾದಿ). ಗುಂಪು-03 : ಅಸ್ಪೃಶ್ಯರಲ್ಲದ ಸಮುದಾಯ ಶೇಕಡಾ 4.5 ( ಬಂಜಾರ, ಬೋವಿ, ಕೊರಮ, ಕೊರಚ). ಗುಂಪು-04 : ಇತರೆ SC ಸಮುದಾಯ ಶೇಕಡಾ 1 ( ಅಲೆಮಾರಿ, ಅರೆ ಅಲೆಮಾರಿ) ವಿಂಗಡನೆ ಮಾಡಿದೆ. ಆದರೆ 2A ಸಮುದಾಯದ ಮೀಸಲಾತಿಯಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ.
ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದೇನು?
ಮೀಸಲಾತಿ ಕುರಿತಂತೆ ಸಂಪುಟದಲ್ಲಿ ಕೈಗೊಂಡಿರುವ ನಿರ್ಧಾರದ ಕುರಿತಂತೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಪಂಚಮಸಾಲಿ ಸ್ವಾಮೀಜಿ ಜಯ ಮೃತ್ಯುಂಜಯ ಶ್ರೀಗಳು, ಸರ್ಕಾರ ಕೊನೆಗೂ ನಮ್ಮ ಬೇಡಿಕೆ ಈಡೇರಿಸಲು ಒಪ್ಪಿದೆ. ನಮ್ಮ ಹೋರಾಟ ತಾರ್ಕಿಕ ಅಂತ್ಯಕ್ಕೆ ಬರುತ್ತಿದೆ. ಸರ್ಕಾರದ ಆದೇಶ ನೋಡಿ ನಮ್ಮ ಮುಂದಿನ ನಿರ್ಧಾರ ನಾಳೆ ಬೆಳಗ್ಗೆ ಕಾರ್ಯಕಾರಿ ಸಮಿತಿ ಸಭೆ ಬಳಿಕ ಕೈಗೊಳ್ಳುತ್ತೇವೆ.
ನಮ್ಮ ಸಮುದಾಯದ ಸ್ವಾಮೀಜಿ ಸರ್ಕಾರದ ನಡೆ ಸ್ವಾಗತಿಸಿರುವುದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಸಮಾಜದ ಪರವಾಗಿ ಕಳೆದೆರಡು ವರ್ಷದಿಂದ ಹೋರಾಟ ಮಾಡಿದ್ದೇನೆ. ಆದೇಶದ ಪ್ರತಿ ನೋಡಿ ಒಪ್ಪಿಕೊಳ್ಳುತ್ತೇನೆ. 2D ಜೊತೆ ಕೆಲ ಒಳ ಪಂಗಡ ಸೇರಿವೆ. ಇದಕ್ಕೆ ನಮ್ಮ ವಿರೋಧವಿಲ್ಲ. ಎಲ್ಲರ ಜೊತೆ ನಾವು ಮುಂದುವರೆಯುತ್ತೇವೆ. ಮೀಸಲಾತಿ ಹೆಚ್ಚಳ ಬೇಡಿಕೆ ಈಡೇರಿದೆ, ಈ ಬಗ್ಗೆ ನಾಳೆ ಬೆಳಗ್ಗೆ 9 ಗಂಟೆಗೆ ಅಧಿಕೃತ ನಿರ್ಧಾರ ಹೇಳುತ್ತೇವೆ ಎಂದು ತಿಳಿಸಿದರು.
ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಬಿಜೆಪಿ ಶಾಸಕರಾದ ಬೆಲ್ಲದ್ ಹಾಗೂ ಯತ್ನಾಳ್ ಅವರು ಮುಸ್ಲಿಮರಿಗೆ ಎರಡು ಕಡೆ ಮೀಸಲಾತಿ ಸಿಗುತ್ತಿದೆ. ಆದ್ದರಿಂದ ಅವರನ್ನು ಮೀಸಲಾತಿಯ ಒಂದು ಸ್ಥಾನದಿಂದ ಕೈಬಿಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಸದ್ಯ ಸರ್ಕಾರದ ನಡೆ ನೋಡಿದರೆ ಮುಸ್ಲಿಂ ಮೀಸಲಾತಿ ತೆಗೆದು ಹಾಕುವ ಸಂಬಂಧ ಸ್ಪಷ್ಟ ನಿರ್ಧಾರ ಮಾಡಿದಂತಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಬೊಮ್ಮಾಯಿ ಅವರು, 2ಬಿ ಅಡಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಿ ಅವರಿಗೆ ಇಡಬ್ಲ್ಯೂಎಸ್ ಅಡಿಯಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಆದರೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ದೇಶದ ಏಳು ರಾಜ್ಯಗಳಲ್ಲಿ ಒಬಿಸಿ ಮೀಸಲಾತಿ ಇಲ್ಲ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ