ಜೂನ್ ಅಂತ್ಯದೊಳಗೆ ರಾಜ್ಯ ಸಂಪುಟ ವಿಸ್ತರಣೆ; ಹೆಚ್ಚುವರಿಯಾಗಿ ನಾಲ್ವರಿಗೆ ಸಚಿವ ಸ್ಥಾನ ಸಾಧ್ಯತೆ?

ಕೊರೋನಾ ಭೀತಿಯ ನಡುವೆಯೂ ಬಿ.ಎಸ್.‌ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಂದಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಸಂಪುಟಕ್ಕೆ ಮತ್ತೆ ನಾಲ್ವರು ಸೇರ್ಪಡೆಯಾಗುವುದು ಖಚಿತವಾಗಲಿದೆ ಎನ್ನಲಾಗುತ್ತಿದೆ.

news18-kannada
Updated:May 28, 2020, 9:51 PM IST
ಜೂನ್ ಅಂತ್ಯದೊಳಗೆ ರಾಜ್ಯ ಸಂಪುಟ ವಿಸ್ತರಣೆ; ಹೆಚ್ಚುವರಿಯಾಗಿ ನಾಲ್ವರಿಗೆ ಸಚಿವ ಸ್ಥಾನ ಸಾಧ್ಯತೆ?
ಸಿಎಂ ಬಿ.ಎಸ್‌. ಯಡಿಯೂರಪ್ಪ.
  • Share this:
ಬೆಂಗಳೂರು (ಮೇ 28); ಜೂನ್‌ ತಿಂಗಳ ಅಂತ್ಯದೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಹುತೇಕ ಖಚಿತವಾಗಲಿದ್ದು, ಸಂಪುಟಕ್ಕೆ ಹೊಸದಾಗಿ ನಾಲ್ಕು ಜನ ಮಂತ್ರಿಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಿಜೆಪಿ ಮೂಲಗಳ ಮಾಹಿತಿಯ ಪ್ರಕಾರ ನಿನ್ನೆ ರಾತ್ರಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಸಚಿವ ಸ್ಥಾನ ಆಕಾಂಕ್ಷಿಗಳಾದ ಉಮೇಶ್ ಕತ್ತಿ, ರಾಮದಾಸ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇಬ್ಬರಿಗೂ ಮಾಹಿತಿ ನೀಡಿರುವ ಸಿಎಂ "ಸಂಪುಟಕ್ಕೆ ನಾಲ್ವರನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಉಮೇಶ್ ಕತ್ತಿ, ರಾಮದಾಸ್, ಅರವಿಂದ್ ಲಿಂಬಾವಳಿ, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.

ನಾಲ್ವರ ಹೆಸರನ್ನು ಹೈಕಮಾಂಡ್ ಗೆ ಈಗಾಗಲೇ ಕಳುಹಿಸಲಾಗಿದ್ದು, ಜೂನ್ ಒಂದರಿಂದ ಲಾಕ್‌ಡೌನ್ ಫ್ರೀ ಆಗಲಿದೆ. ಲಾಕ್‌ಡೌನ್ ಫ್ರೀ ಆದ ನಂತರ ಈ ಕುರಿತು ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಹೈಕಮಾಂಡ್ ಅನುಮತಿ ಕೊಟ್ಟರೆ ಜೂನ್ ಮೊದಲ ಅಥವಾ ಎರಡನೇ ವಾರದಲ್ಲೇ ಸಂಪುಟ ವಿಸ್ತರಣೆ ಮಾಡಲಾಗುವುದು" ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಕೊರೋನಾ ಭೀತಿಯ ನಡುವೆಯೂ ಬಿ.ಎಸ್.‌ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಂದಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಸಂಪುಟಕ್ಕೆ ಮತ್ತೆ ನಾಲ್ವರು ಸೇರ್ಪಡೆಯಾಗುವುದು ಖಚಿತವಾಗಲಿದೆ ಎನ್ನಲಾಗುತ್ತಿದೆ.

 

ಇದನ್ನೂ ಓದಿ : ವಲಸೆ ಕಾರ್ಮಿಕರ ಸಂಕಷ್ಟಕ್ಕೆ ರಾಜ್ಯ-ಕೇಂದ್ರ ಸರ್ಕಾರಗಳು ಜರುಗಿಸಿದ ಕ್ರಮವೇನು?; ಸುಪ್ರೀಂ ಪ್ರಶ್ನೆ
First published: May 28, 2020, 9:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading