ಡಿ. 7ರಿಂದ 15ರವರೆಗೆ ಚಳಿಗಾಲದ ಅಧಿವೇಶನ; ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ – ರಾಜ್ಯ ಸಂಪುಟ ನಿರ್ಧಾರ
ಬಳ್ಳಾರಿಯ ಪಶ್ಚಿಮ ಭಾಗದ ತಾಲೂಕುಗಳನ್ನೊಳಗೊಂಡ ವಿಜಯನಗರ ಪ್ರತ್ಯೇಕ ಜಿಲ್ಲೆ ರಚಿಸಲು ಇವತ್ತಿನ ಸಚಿವ ಸಂಪಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರ ರೂಪುರೇಖೆ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನಿಸುವ ನಿರೀಕ್ಷೆ ಇದೆ.
news18-kannada Updated:November 18, 2020, 12:02 PM IST

ಸಿಎಂ ಬಿಎಸ್ ಯಡಿಯೂರಪ್ಪ
- News18 Kannada
- Last Updated: November 18, 2020, 12:02 PM IST
ಬೆಂಗಳೂರು(ನ. 18): ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ 7ರಿಂದ 15ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಇವತ್ತು ತರಾತುರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದರ ತೀರ್ಮಾನ ಮಾಡಲಾಯಿತು. ವಿಧಾನಸೌಧದಲ್ಲೇ ಅಧಿವೇಶನ ನಡೆಯಲಿದೆ. ಇದೇ ವೇಳೆ, ವಿಜಯನಗರ ಪ್ರತ್ಯೇಕ ಜಿಲ್ಲೆಗೂ ಸಂಪುಟ ಅಸ್ತು ಎಂದಿದೆ. ಆದರೆ, ಜಿಲ್ಲೆಯ ರಚನೆ ಸಂಬಂಧ ಅಗತ್ಯ ಇರುವ ಪ್ರಕ್ರಿಯೆಗಳ ಬಗ್ಗೆ ಮುಂದಿನ ಸಂಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲೂ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಸಚಿವ ಮಾಧುಸ್ವಾಮಿ ಸೇರಿದಂತೆ ಸಂಪುಟದ ಬಹುತೇಕ ಸಚಿವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮಧ್ಯಾಹ್ನ 11:30ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿಗೆ ತೆರಳುವ ಅನಿವಾರ್ಯತೆ ಇದ್ದರಿಂದ ಸಂಪುಟ ಸಭೆಯನ್ನು ಕೇವಲ 20 ನಿಮಿಷಕ್ಕೇ ಮುಗಿಸಲಾಯಿತು. ಸಭೆ ಬಳಿ ಡಿಸಿಎಂ ಗೋವಿಂದ ಕಾರಜೋಶ ಅವರ ಜೊತೆ ಸಿಎಂ ದೆಹಲಿಗೆ ಹೋಗಲು ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದರು. ಈ ಕ್ಯಾಬಿನೆಟ್ ಸಭೆಯಲ್ಲಿ ಸಂಪುಟ ಪುನಾರಚನೆ ವಿಚಾರ ಚರ್ಚೆಯಾಗುವ ನಿರೀಕ್ಷೆ ಇತ್ತು. ಆದರೆ, ಸಮಯ ಇಲ್ಲದ ಕಾರಣ ಅದರ ಪ್ರಸ್ತಾಪ ಆಗಲಿಲ್ಲ ಎಂದು ಮೂಲಗಳು ಹೇಳಿವೆ. ಹೀಗಾಗಿ, ಸಂಪುಟದಿಂದ ಯಾರನ್ನು ಕೈಬಿಡಬಹುದು ಎಂಬ ಸುಳಿವು ಇವತ್ತಿನ ಸಭೆಯಲ್ಲಿ ಸಿಗಲಿಲ್ಲ. ಇದೇ ಸಂಪುಟ ಪುನಾರಚನೆ ವಿಚಾರವಾಗಿ ದೆಹಲಿಯಲ್ಲಿ ಯಡಿಯೂರಪ್ಪ ಅವರು ವರಿಷ್ಠರ ಜೊತೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.
ಇದೇ ವೇಳೆ, ಇವತ್ತಿನ ಸಂಪುಟ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ವಿಜಯನಗರ ಪ್ರತ್ಯೇಕ ಜಿಲ್ಲೆ ಜೊತೆಗೆ ಇನ್ನೂ ಹಲವು ವಿಚಾರಗಳ ಚರ್ಚೆ ಆಗಿರುವ ಮಾಹಿತಿ ನೀಡಿದರು.
ಇದನ್ನೂ ಓದಿ: ಸ್ಮಾರ್ಟ್ ಸಿಟಿ ಸೇರಿ ಭರಪೂರ ಮೂಲಸೌಕರ್ಯ ಯೋಜನೆಗಳು; ಹೂಡಿಕೆಗೆ ಭಾರತ ಪ್ರಶಸ್ತ: ಪ್ರಧಾನಿ ಮೋದಿ
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಮುಂದೆ ಅದಕ್ಕೆ ಹಣ ಮೀಸಲಿಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಸದ್ಯಕ್ಕಂತೂ ಅದಕ್ಕೆ ಹಣ ಮೀಸಲಿಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬರೀ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಮಾತ್ರ ತೀರ್ಮಾನ ಅಗಿದೆ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಕೃಷ್ಣಾ ಭಾಗ್ಯ ಜಲ ನಿಗಮ, ಕಾವೇರಿ ಅಭಿವೃದ್ಧಿ ನಿಗಮ ಮತ್ತು ವಿಶ್ವೇಶ್ವರಯ್ಯ ಅಭಿವೃದ್ಧಿ ನಿಗಮಕ್ಕೆ ಸಾಲ ಪಡೆಯಲು ಅನುಮತಿ ನೀಡಲಾಗಿದೆ. ಹೊಸಪೇಟೆಯಲ್ಲಿ 13 ಕೋಟಿ ಅಂದಾಜು ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ; ಎಸ್ಸಿ-ಎಸ್ಟಿಗೆ ಮೀಸಲು ಪ್ರಮಾಣ ಹೆಚ್ಚಳ ನಿಗದಿಗೆ ಸಚಿವ ಸಂಪುಟ ಉಪಸಮಿತಿ ರಚನೆ ಮಾಡಲು ಮುಖ್ಯಮಂತ್ರಿಗೆ ಅಧಿಕಾರ; 2021ನೇ ಸಾಲಿನಲ್ಲಿ 21 ಸಾರ್ವತ್ರಿಕ ರಜೆ ಮತ್ತು 19 ನಿರ್ಬಂಧಿತ ರಜೆ ನೀಡಲು ಅನುಮೋದನೆ; ಲೋಕಸೇವಾ ಆಯೋಗದ ಅನುಮತಿ ಇಲ್ಲದೆ ಸರ್ಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳಲು ನಿಯಮಾವಳಿಗಳ ತಿದ್ದುಪಡಿ; ಪ್ರವಾಹ ಪರಿಹಾರಕ್ಕೆ ಕೇಂದ್ರದಿಂದ ಬಿಡುಗಡೆ ಆಗಿರುವ 500 ಕೋಟಿ ಜೊತೆಗೆ ರಾಜ್ಯ ಸರ್ಕಾರದಿಂದ 1 ಸಾವಿರ ಕೋಟಿ ರೂ ವಿನಿಯೋಗಿಸಲು ತೀರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.ವಿವಾದಕ್ಕೆ ಕಾರಣವಾಗಿರುವ ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರವನ್ನು ಪ್ರಸ್ತಾಪಿಸಿದ ಕಾನೂನು ಸಚಿವರು, ನಿಗಮ ಸ್ಥಾಪನೆಗೆ ವ್ಯಕ್ತವಾಗುತ್ತಿರುವ ವಿರೋಧಕ್ಕೆ ಬೇಸರ ವ್ಯಕ್ತಪಡಿಸಿದರು.
ಒಂದು ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಯಾಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೂ ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಾಧಿಕಾರ ಮಾಡಬೇಕಾದರೆ ಕಾನೂನು ರೂಪಿಸಬೇಕು. ಆದರೆ, ನಿಗಮಕ್ಕೆ ಸರ್ಕಾರವೇ ನಿರ್ಧಾರ ಕೈಗೊಳ್ಳಬಹುದು. ಈ ನಿಗಮಕ್ಕೆ ಹಣ ಎಷ್ಟು ನಿಗದಿ ಮಾಡಬೇಕು ಎಂಬುದು ಚರ್ಚೆ ಆಗಿಲ್ಲ ಎಂದು ಕಾನೂನು ಸಚಿವರು ಹೇಳಿದರು.
ಇದನ್ನೂ ಓದಿ: ರಾಜ್ಯದ ಮರಾಠ ಜನರ ಅಭಿವೃದ್ಧಿಗೆ ಪ್ರಾಧಿಕಾರ; ಮರಾಠಿ ಭಾಷೆಗೂ ಇದಕ್ಕೂ ಸಂಬಂಧವಿಲ್ಲ; ಸಿಎಂ ಬಿಎಸ್ವೈ ಸ್ಪಷ್ಟನೆ
ವಿಜಯನಗರ ಜಿಲ್ಲೆ ರಚನೆ ನಿರ್ಧಾರಕ್ಕೆ ಆನಂದ್ ಸಿಂಗ್ ಸ್ವಾಗತ:
ವಿಜಯನಗರ ಪ್ರತ್ಯೇಕ ಜಿಲ್ಲೆ ನಿರ್ಮಾಣಕ್ಕೆ ಬಹಳ ಪ್ರಯತ್ನ ಮಾಡಿದ್ದ ಆನಂದ್ ಸಿಂಗ್ ಅವರು ಇವತ್ತಿನ ಸಂಪುಟ ಸಭೆ ನಿರ್ಧಾರವನ್ನು ಸ್ವಾಗತಿಸಿದರು. ವಿಜಯನಗರ ಜಿಲ್ಲೆಯಾಗಬೇಕು ಎಂಬುದು ಬಹುದಿನದ ಬೇಡಿಕೆ. ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರ ಕ್ಷೇತ್ರವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಬಳ್ಳಾರಿ ಪಶ್ಚಿಮ ಭಾಗದ ತಾಲೂಕುಗಳ ಬೇಡಿಕೆ ಈಡೇರಿದೆ. ಈ ನಿಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ ಎಂದು ಆನಂದ್ ಸಿಂಗ್ ತಿಳಿಸಿದರು.
ಇತಿಹಾಸ ಪುಟದಲ್ಲಿ ಸೇರುವ ದಿನ ಇದು. ಅಂದಿನ ರಾಜಧಾನಿ ಹಂಪಿಯನ್ನು ಎತ್ತಿ ಹಿಡಿಯುವ ಕೆಲಸವನ್ನು ಸಿಎಂ ಮಾಡಿದ್ದಾರೆ. ವಿಜಯನಗರ ಜಿಲ್ಲೆಯು ರಾಜ್ಯ ಹಾಗೂ ರಾಷ್ಟ್ರಕ್ಕೆ ಹೆಮ್ಮೆಯ ವಿಚಾರವಾಗಿದೆ. ಜಿಲ್ಲೆಯ ಎಲ್ಲಾ ಜನರ ಪರವಾಗಿ ಸಿಎಂಗೆ ಧನ್ಯವಾದಗಳನ್ನ ಹೇಳುತ್ತೇನೆ ಎಂದರು.
ಪ್ರಸ್ತಾಪಿತ ವಿಜಯನಗರ ಜಿಲ್ಲೆಗೆ ಈಗ ಬಳ್ಳಾರಿಯಲ್ಲಿರುವ ಹೂವಿನಹಡಗಲಿ, ಕೊಟ್ಟೂರು, ಹರಪನಹಳ್ಳಿ, ಕೂಡ್ಲಿಗಿ, ಹೊಸಪೇಟೆ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳು ಸೇರಲಿವೆ. ಹೊಸಪೇಟೆಯು ಜಿಲ್ಲಾ ಕೇಂದ್ರವಾಗಿರಲಿದೆ.
ವರದಿ: ಕೃಷ್ಣ ಜಿ.ವಿ.
ಮಧ್ಯಾಹ್ನ 11:30ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿಗೆ ತೆರಳುವ ಅನಿವಾರ್ಯತೆ ಇದ್ದರಿಂದ ಸಂಪುಟ ಸಭೆಯನ್ನು ಕೇವಲ 20 ನಿಮಿಷಕ್ಕೇ ಮುಗಿಸಲಾಯಿತು. ಸಭೆ ಬಳಿ ಡಿಸಿಎಂ ಗೋವಿಂದ ಕಾರಜೋಶ ಅವರ ಜೊತೆ ಸಿಎಂ ದೆಹಲಿಗೆ ಹೋಗಲು ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದರು.