news18-kannada Updated:October 21, 2020, 12:46 PM IST
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬೆಂಗಳೂರು(ಅ.21): ಇಂದು ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಕಾರ್ಪೋರೇಟ್ಗಳು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ್ ಸ್ವಾಮಿ ಬಿಜೆಪಿ ಸೇರಿಕೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಆರ್.ಅಶೋಕ್, ಅರವಿಂದ ಲಿಂಬಾವಳಿ, ತೇಜಸ್ವಿ ಸೂರ್ಯ, ಪಿಸಿ ಮೋಹನ್, ಮುನಿರತ್ನ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಿಜೆಪಿ ಸೇರ್ಪಡೆಯಾದ ಮಂಜುಳಾ ನಾರಾಯಣ ಸ್ವಾಮಿ, ಈ ಹಿಂದೆ ಮುನಿರತ್ನ ವಿರುದ್ಧ ಪಾಲಿಕೆಯ ಒಳಗೆ ಹಾಗೂ ಹೊರಗೆ ವೈಯಕ್ತಿಕ ಮಟ್ಟದಲ್ಲಿ ಜಗಳ ಮಾಡಿ ಸುದ್ದಿಯಾಗಿದ್ದರು. ಇಂದು ಬಿಜೆಪಿ ಸೇರಿಕೊಂಡರು. ಕಾರ್ಯಕ್ರಮದ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣಾ ಅಖಾಡ ಬಿಸಿಯಾಗಿದೆ. ಕಾಂಗ್ರೆಸ್, ಜೆಡಿಎಸ್ ನಲ್ಲಿ ತಳಮಳ ಶುರುವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರು ಬಿಜೆಪಿ ಸೇರುತ್ತಾರೆ ಹಲವು ಕಾಂಗ್ರೆಸ್, ಜೆಡಿಎಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಪೂರ್ಣ ಬಹುಮತ ಇದ್ದಾಗಲೂ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಟಿಪ್ಪು ಜಯಂತಿ ಮೂಲಕ ಸಮಾಜ ಒಡೆಯುವ ಮತ್ತು ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಕೆಲಸ ಸಿದ್ದರಾಮಯ್ಯ ಸರ್ಕಾರದಲ್ಲಿ ಆಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ದೇವೇಗೌಡರ ಕುಟುಂಬಕ್ಕೆ ಸಾಧ್ಯವಾಗುವಷ್ಟು ತೊಂದರೆ ಕೊಟ್ಟರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.
ಮುಂದುವರೆದ ಅವರು, ಕಾಂಗ್ರೆಸ್ ಕತೆ ಈ ರೀತಿಯದ್ದಾದರೆ, ಜೆಡಿಎಸ್ ಕತೆ ಮತ್ತೊಂದು ರೀತಿ. ಅಧಿಕಾರ ಇದ್ದಾಗ ಒಂದು, ಇಲ್ಲದಿದ್ದಾ ಇನ್ನೊಂದು. ಅಪ್ಪ , ಮಗ ಒಂದೊಂದು ರೀತಿ ಅಧಿಕಾರ ಬೇಕಾದಾಗ ಪ್ರೇಮ ವಿವಾಹ ಆಗ್ತಾರೆ. ಆಮೇಲೆ ಬೈದಾಡಿಕೊಳ್ತಾರೆ. ಅಪ್ಪ ಒಂದು ಪಕ್ಷದ ಪರ ಮಾತಾಡ್ತಾರೆ. ಮಗ ಒಂದು ಪಕ್ಷದ ಪರ ಮಾತಾಡ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ವ್ಯಂಗ್ಯ ಮಾಡಿದರು.
ಮಹಾರಾಷ್ಟ್ರದಲ್ಲಿ 30 ಅಡಿ ಕಣಿವೆಗೆ ಬಿದ್ದ ಬಸ್; 5 ಮಂದಿ ಸಾವು, 34 ಜನರಿಗೆ ಗಾಯ
ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕಟೀಲ್, ಕಾಂಗ್ರೆಸ್ನ ಗೂಂಡಾಗಿರಿ ರಾಜಕೀಯ ಕಂಡು, ಬೇಸತ್ತು ಇಂದು ಪ್ರಮುಖರು ಬಿಜೆಪಿ ಸೇರ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಪ್ರಮುಖ ನಾಯಕರು ಬಿಜೆಪಿ ಸೇರ್ತಾರೆ. ಹಲವು ಪ್ರಮುಖರು ಬಿಜೆಪಿಯ ಕದ ತಟ್ತಾ ಇದ್ದಾರೆ ಎಂದು ಹೊಸ ಬಾಂಬ್ ಹಾಕಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವರು ಅಭಿವೃದ್ಧಿ ಮಾಡಲಿಲ್ಲ. ಬ್ರಿಟಿಷರ ತರ ಒಡೆದು ಆಳುವ ರಾಜಕೀಯ ಮಾಡಿದ್ರು. ದ್ವೇಷದ ರಾಜಕೀಯ ಮಾಡಿದ್ರು. ಹಿಂದೂ- ಮುಸ್ಲಿಂ ಬೇರೆ ಮಾಡಿದ್ರು. ಲಿಂಗಾಯತ ಧರ್ಮ ಒಡೆಯಲು ಮುಂದಾದ್ರು ಮೂರು ಸಾವಿರ ರೈತರು ಸತ್ತಾಗ ಸಿದ್ದರಾಮಯ್ಯನವರಿಗೆ ಕಣ್ಣೀರು ಬಂದಿಲ್ಲ. ಈಗ ರೈತರ ಪರ ಕಣ್ಣೀರು ಬರ್ತಾ ಇದೆ ಎಂದು ಕಿಡಿಕಾರಿದರು.
ಎಸ್ ಡಿ ಪಿ ವೈ ಕಾರ್ಯಕರ್ತರ ಮೇಲೆ ಇದ್ದ ಕೇಸ್ ಕೈ ಬಿಟ್ಟರು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಅದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಗಲಾಟೆ. ಸಂಪತ್ ರಾಜ್ನನ್ನು ಬಂಧಿಸಿ ಎನ್ನುವ ಶಕ್ತಿ ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್ ಗೆ ಇಲ್ಲ. ನ್ಯಾಯಾಂಗ ತನಿಖೆ ನಡೆಸಿ ಎಂದು ಹೇಳುವ ಧೈರ್ಯ ಇಲ್ಲ. ಕಾಂಗ್ರೆಸ್ ಅಧಿಕಾರ ಇಲ್ಲದಾಗ ಕೇವಲ ಒಬ್ಬನ ಮನೆಗೆ ಬೆಂಕ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ನಲ್ಲಿ ಇಬ್ಬರು ಲೀಡರ್. ಶಿರಾದಲ್ಲಿ ಒಬ್ಬರು, ಆರ್ ಆರ್ ನಗರದಲ್ಲಿ ಇನ್ನೊಬ್ಬರು. ಶಿರಾದಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಬೇಕು ಅಂತ ಒಬ್ಬರು. ಆರ್ ಆರ್ ನಗರದಲ್ಲಿ ತನ್ನ ಅಭ್ಯರ್ಥಿ ಗೆಲ್ಲಬೇಕು ಎಂದು ಇನ್ನೊಬ್ಬರು. ಈ ಉಪ ಚುನಾವಣೆ ಮುಗಿದ ಮೇಲೆ ಬಂಡೆ ಛಿದ್ರವಾಗತ್ತೆ. ಹುಲಿಯಾ ಕಾಡಿಗೆ ಹೋಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಕಟೀಲ್ ವ್ಯಂಗ್ಯ ಮಾಡಿದರು.
Published by:
Latha CG
First published:
October 21, 2020, 12:46 PM IST