ಬೆಂಗಳೂರು (ಫೆ. 18): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಥಾನ ಬದಲಾವಣೆ ಕುರಿತು ಪದೇ ಪದೇ ಹೇಳಿಕೆ ನೀಡುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕಿಡಿಕಾರಿದ್ದಾರೆ. ಸೋ ಕಾಲ್ಡ್ ಎಂಎಲ್ಎ ನೇಚರ್ ಎಲ್ಲರಿಗೂ ಗೊತ್ತಿದೆ. ಒಬ್ಬ ಎಂಎಲ್ಎ ಹೇಳಿಕೆಗೆ ಏಕೆ ಇಷ್ಟು ಪ್ರಾಮುಖ್ಯತೆ ಕೊಡಬೇಕು ಎಂದು ಪ್ರಶ್ನಿಸಿದರು. ವಿಜಯೇಂದ್ರ ನಮ್ಮ ಪಕ್ಷದ ರಾಜ್ಯ ಉಪಾಧ್ಯಕ್ಷ ಯತ್ನಾಳ್ ಹೇಳಿಕೆಯನ್ನು ನಾನು ತಿರಸ್ಕರಿಸುತ್ತೇನೆ. ಯತ್ನಾಳ್ ಏನೇ ಮಾತಾಡಿದ್ರೂ ಅದು ತಪ್ಪು. ಬಹಳ ವರ್ಷಗಳಿಂದ ಎಲ್ಲರೂ ನೋಡಿದ್ದಾರೆ. ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ. ಅವರ ವರ್ತನೆ ಬಗ್ಗೆ ರಾಷ್ಟ್ರೀಯ ಬಿಜೆಪಿ ಶಿಸ್ತು ಸಮಿತಿ ಪರಿಶೀಲಿಸುತ್ತದೆ ಎಂದರು.
ಇದೇ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಕುರಿತು ಮಾತನಾಡಿದ ಅವರು, ಬಿಜೆಪಿ ಇಡೀ ರಾಷ್ಟ್ರದ ಜನರನ್ನು ಸಮಾನವಾಗಿ ಕಾಣುತ್ತೇವೆ. ಎಲ್ಲ ಸಮಾಜದ ಬಡವರ ಕಲ್ಯಾಣವೇ ನರೇಂದ್ರ ಮೋದಿ ಸರ್ಕಾರದ ಗುರಿಯಾಗಿದೆ ಎಂದರು.
ಇದಕ್ಕೂ ಮುನ್ನ ಹಾಸನದಲ್ಲಿ ನಡೆದ ಪಕ್ಷ ಸಂಘಟನಾ ಸಭೆಯಲ್ಲಿಯೂ ಯತ್ನಾಳ್ ವಿರುದ್ಧ ಕಿಡಿಕಾರಿದ ಅವರು, ಯತ್ನಾಳ್ ಬಗ್ಗೆ ನನಗೆ ಯಾವುದೇ ಆಸಕ್ತಿ ಇಲ್ಲ. ಪಕ್ಷದ ಕಾರ್ಯಕರ್ತರ ಮೇಲೆ ನನಗೆ ಗಮನ ಇದೆ ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ: ನಿಖಿಲ್ ಎದುರು ಕೆಜಿಎಫ್ ವಿಲನ್; ರೈಡರ್ನಲ್ಲಿ ಗರುಡನ ಆರ್ಭಟ
ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ನಂತರ ಹಾಸನ ಹಾಗೂ ಮಂಡ್ಯ ಫಲಿತಾಂಶ ಬಗ್ಗೆ ದೆಹಲಿಯಲ್ಲಿ ಚರ್ಚೆ ನಡೆಯುವಷ್ಟು ಉತ್ತಮ ಫಲಿತಾಂಶ ಬಂದಿದೆ. ಹಾಸನ ಹಾಗೂ ಮಂಡ್ಯದಲ್ಲಿ ಬಿಜೆಪಿ ಬಲವಾಗಿ ಬೆಳೆಯುತ್ತಿದೆ. ಬಿಜೆಪಿ ಸ್ಥಾನಗಳು ಹೆಚ್ಚಾದಂತೆ ಜೆಡಿಎಸ್ ಗ್ರಾಮದಲ್ಲಿ ಕುಗ್ಗುತ್ತಿದೆ. ಬಿಜೆಪಿ ಈ ರಾಷ್ಟ್ರದಲ್ಲಿ ದೊಡ್ಡ ಪಕ್ಷ. ಮೋದಿ ವಿಶ್ವದಲ್ಲೇ ದೊಡ್ಡ ನಾಯಕ ಎಂದಿದ್ದರು.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದ ಅವರು, ಬೆಳ್ಳಿ ಚಮಚದವಜೊತೆ ಬೆಳೆದ ರಾಹುಲ್ ಗಾಂಧಿಗೆ ಬಡವರ ಬಗ್ಗೆ ಏನು ತಿಳಿದಿದೆ? ಬಡವರೊಂದಿಗೆ ಬೆಳೆದ ಮೋದಿಗೆ ಮಾತ್ರ ಬಡವರ ನೋವಿನ ಅರಿವಿದೆ. ಒಂದು ದಿನವೂ ರಜೆ ಪಡೆಯದೆ ಮೋದಿ ದೇಶಕ್ಕೆ ಶ್ರಮಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಜೆಟ್ ಮಂಡನೆ ವೇಳೆ ಹೇಗೆ ವರ್ತಿಸಬೇಕು ಎಂಬುದೇ ಗೊತ್ತಿಲ್ಲ, ಬಜೆಟ್ ಮಂಡನೆ ಮಧ್ಯೆ ಅವರೇನೋ ಬೇರೆ ಪ್ರಸ್ತಾಪ ಮಾಡಿದರು. ಸ್ಪೀಕರ್ ಎಷ್ಟು ಬಾರಿ ಹೇಳುದ್ದರೂ ಅವರು ಹೇಗೆ ನಡೆದುಕೊಂಡರು ಎನ್ನುವುದನ್ನು ಶದ ಜನ ನೋಡಿದ್ದಾರೆ. ಇಂಥ ನಾಯಕರನ್ನ ಕಾಂಗ್ರೆಸ್ ಹೊಂದಿದೆ ಎಂದು ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ