HOME » NEWS » State » STATE BJP INCHARGE ARUNA SINGH SAYS UNITY IN BJP SESR

ರಾಜ್ಯ ಬಿಜೆಪಿ ನಾಯಕರಲ್ಲಿ ಒಡಕಿಲ್ಲ, ಒಗ್ಗಟ್ಟಾಗಿದ್ದೇವೆ; ಉಸ್ತುವಾರಿ ಅರುಣ್​ ಸಿಂಗ್​​ ಸಮರ್ಥನೆ

ಇದೇ ವೇಳೆ ಕೇಂದ್ರದ ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಂಡ ಅವರು,  ನಾವು ರೈತರ ಆದಾಯ ಹೆಚ್ಚಿಸಲು ಮುಂದಾಗಿದ್ದೇವೆ. ಕೈ ನಾಯಕರಿಗೆ ರೈತರ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದರು.

news18-kannada
Updated:February 17, 2021, 7:18 PM IST
ರಾಜ್ಯ ಬಿಜೆಪಿ ನಾಯಕರಲ್ಲಿ ಒಡಕಿಲ್ಲ, ಒಗ್ಗಟ್ಟಾಗಿದ್ದೇವೆ; ಉಸ್ತುವಾರಿ ಅರುಣ್​ ಸಿಂಗ್​​ ಸಮರ್ಥನೆ
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್
  • Share this:
ಬೆಂಗಳೂರು (ಫೆ. 17): ಸಿಎಂ ಸ್ಥಾನ ಬದಲಾವಣೆ ಕುರಿತು ಪದೇ ಪದೇ ಹೇಳಿಕೆ ನೀಡುವ ಮೂಲಕ ಪಕ್ಷದ ನಾಯಕರಲ್ಲಿ ಒಮ್ಮತವಿಲ್ಲ ಎಂಬುದನ್ನು ಯತ್ನಾಳ್​ ತೋರಿಸಿದ್ದರು. ಇದೇ ಹಿನ್ನಲೆ ಅವರಿಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್​ ಜಾರಿ ಮಾಡಿದೆ. ಈ ಬೆಳವಣಿಗೆ ನಡುವಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ,ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ, ಪಕ್ಷ ಬಲಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸಮರ್ಥನೆ ನೀಡಿದ್ದಾರೆ. ನಮ್ಮ ಮೂಲ ಉದ್ದೇಶಗಳನ್ನು ಜಾರಿಗೊಳಿಸುವ ಕೆಲಸ ಯಡಿಯೂರಪ್ಪ ಮಾಡುತ್ತಿದ್ದಾರೆ. ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ.  ಗೋಹತ್ಯೆ ನಿಷೇಧ ಕಾಯ್ದೆ ಯಡಿಯೂರಪ್ಪ ಜಾರಿಗೆ ತಂದಿದ್ದಾರೆ. ಇಂಥ ಮೂಲ ವಿಷಯಗಳನ್ನು ಬಿಜೆಪಿ ಜಾರಿಗೆ ತರುತ್ತಿದೆ. ಬಿಜೆಪಿ ನಾಯಕರು ವೈಯಕ್ತಿಕ ಸ್ವಾರ್ಥ ದೂರ ಇಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. 

ಇದೇ ವೇಳೆ ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್​ನಲ್ಲಿ ನಾಯಕತ್ವ ಫೇಲ್ ಆಗಿದೆ. ರಾಜ್ಯ ಕಾಂಗ್ರೆಸ್ ಕೂಡ ಬಣವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ರಾಹುಲ್ ಗಾಂಧಿ ನಾಯಕತ್ವ ಸಂಪೂರ್ಣ ವಿಫಲಗೊಂಡಿದೆ. ಪಾರ್ಲಿಮೆಂಟ್ ನಲ್ಲಿ ರಾಹುಲ್​ ಗಾಂಧಿ ಮಾತುಗಳನ್ನು ಗಮನಿಸಿದರೆ ಕೇಂದ್ರ ನಾಯಕತ್ವ ಗೊಂದಲದಲ್ಲಿದೆ. ಪಕ್ಷ ಸಂಘಟನೆಗೆ ಶ್ರಮವೂ ಇಲ್ಲ ಎಂಬುದು ಸಾಬೀತಾಗುತ್ತದೆ ಎಂದರು.

ಇದೇ ವೇಳೆ ಕೇಂದ್ರದ ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಂಡ ಅವರು,  ನಾವು ರೈತರ ಆದಾಯ ಹೆಚ್ಚಿಸಲು ಮುಂದಾಗಿದ್ದೇವೆ. ಕೈ ನಾಯಕರಿಗೆ ರೈತರ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ರಾಹುಲ್, ಪ್ರಿಯಾಂಕಗೆ ಬೇಳೆಗೂ ಬಟಾಣಿಗೂ ವ್ಯತ್ಯಾಸ ಗೊತ್ತಿಲ್ಲ. ಯಾವತ್ತಾದ್ರೂ ಕೃಷಿ ಭೂಮಿಗೆ ಹೋಗಿ ನೋಡಿದ್ದಾರಾ? ರೈತರ ಕಷ್ಟ ಅವರಿಗೆ ಗೊತ್ತಿಲ್ಲ ಎಂದು ಟೀಕಿಸಿದರು.

ಇದನ್ನು ಓದಿ: ರಾಹುಲ್​ ಗಾಂಧಿ ದಲಿತ ಯುವತಿಯನ್ನು ಮದುವೆಯಾಗಿ, ಜಾತಿ ಪದ್ಧತಿ ನಿರ್ಮೂಲನೆಗೊಳಿಸಬೇಕು; ಬಿಜೆಪಿ ಸಚಿವರಿಂದ ಸಲಹೆ

ರಾಮ ಮಂದಿರ ನಿರ್ಮಾಣ ದೇಣಿಗೆ ನೀಡದವರ ಮನೆ ಗುರುತು ಹಾಕಿರುವ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮನಸ್ಥಿತಿ ಏನು? ಇಂತಹ ಮನಸ್ಥಿತಿ ಯಾಕೆ
ತೋರಿಸುತ್ತಿದ್ದಾರೆ. ಅವರ ಹೇಳಿಕೆ ಹಾಸ್ಯಾಸ್ಪದದಿಂದ ಕೂಡಿದೆ. ಅವರಿಗೆ ಚಂದಾ ಹಣ ಸಿಗಲ್ಲ ಎಂಬ ಯೋಚನೆ ಕುಮಾರಸ್ವಾಮಿ ಗೆ ಇರಬೇಕು ಅಷ್ಟೇ ಎಂದರು.

ಇನ್ನು ರಾಜ್ಯಕ್ಕೆ ಭೇಟಿ ನೀಡಿರುವ ಉಸ್ತುವಾರಿ ಅರುಣ್​ ಸಿಂಗ್​ ಇಂದು ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಈ ವೇಳೆ ಸಿಎಂ ಬಿಎಸ್​ವೈ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ಅವರನ್ನು ಭೇಟಿಯಾಗಿ , ರಾಜ್ಯದ ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಇನ್ನು ನಾಳೆ ಹಾಸನದಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಬಿಜೆಪಿ ಘಟಕವು  ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ.
Published by: Seema R
First published: February 17, 2021, 7:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories