• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಂಪುಟ ಪುನಾರಚನೆ ಇಲ್ಲ, ನಾಯಕತ್ವ ಬದಲಾವಣೆ ಇಲ್ಲ: ಬಿಜೆಪಿ ಕಾರ್ಯಕಾರಿಣಿಯಲ್ಲಿ ಅರುಣ್ ಸಿಂಗ್ ಸ್ಪಷ್ಟನೆ

ಸಂಪುಟ ಪುನಾರಚನೆ ಇಲ್ಲ, ನಾಯಕತ್ವ ಬದಲಾವಣೆ ಇಲ್ಲ: ಬಿಜೆಪಿ ಕಾರ್ಯಕಾರಿಣಿಯಲ್ಲಿ ಅರುಣ್ ಸಿಂಗ್ ಸ್ಪಷ್ಟನೆ

ಅರುಣ್ ಸಿಂಗ್

ಅರುಣ್ ಸಿಂಗ್

ಶಿವಮೊಗ್ಗದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಣಿ ವಿಶೇಷ ಸಭೆಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಬರಲಿಲ್ಲ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಯಡಿಯೂರಪ್ಪ ಅವರೇ ಸುಪ್ರೀಂ. ಸಂಪುಟ ವಿಸ್ತರಣೆ ಬಗ್ಗೆ ಅವರೇ ತೀರ್ಮಾನ ತೆಗೆದುಕೊಳ್ತಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಶಿವಮೊಗ್ಗ: ಸಚಿವ ಸಂಪುಟ ಸರ್ಜರಿ ಸದ್ಯಕ್ಕಿಲ್ಲ, ಈ ಬಗ್ಗೆ ಚರ್ಚೆಯೇ ನಡೆದಿಲ್ಲ. ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು. ಅವರೇ ಸುಪ್ರೀಂ. ಅವರೇ ಸಂಪುಟ ಸರ್ಜರಿ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಣಿ ವಿಶೇಷ ಸಭೆ ಮುಕ್ತಾಯ ಬಳಿಕ ಮಾತಾನಾಡಿದ ಅವರು, ಸಿಎಂ ನಾಯಕತ್ವ ಬದಲಾವಣೆ ಕುರಿತ ಚರ್ಚೆಯೇ ಅನಗತ್ಯ. ಯಡಿಯೂರಪ್ಪ ಅವರೇ ರಾಜ್ಯದ ನಾಯಕರು. ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ. ಪಕ್ಷದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯೇ ನಡೆದಿಲ್ಲ ಎಂದರು.


ಇದೇ ವೇಳೆ ನಾಯಕತ್ವ ಬದಲಾವಣೆಯ ಯತ್ನಾಳ್ ಹೇಳಿಕೆಗೆ ಸಿಟ್ಟಾದ ಅರುಣ್ ಸಿಂಗ್, ವೂ ಈಸ್ ಯತ್ನಾಳ್ (ಯಾರು ಅವರು)? ಎಂದು ಪ್ರಶ್ನಿಸಿದರು. ಅವರ ಹೇಳಿಕೆ ಬಗ್ಗೆ ಕೇಂದ್ರ ಶಿಸ್ತು ಸಮಿತಿ ಗಮನ ಹರಿಸುತ್ತಿದೆ ಎಂದರು.


ಯತ್ನಾಳ್ ಹಾಗೂ ವಿರೋಧ ಪಕ್ಷದ ನಾಯಕರು ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆಗಳನ್ನು ಕೊಡುತ್ತಿದ್ದ ಕಾರಣ ಕಾರ್ಯಕಾರಿಣಿಯಲ್ಲಿ ಮಹತ್ವದ ಚರ್ಚೆಗಳು ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಅದ್ಯಾವುದಕ್ಕೂ ಆಸ್ಪದ ಕೊಡದ ಬಿಜೆಪಿ ನಾಯಕರು ಯಡಿಯೂರಪ್ಪನವರೇ ನಮ್ಮ ನಾಯಕರು, ಮುಂದಿನ ಎರಡೂವರೆ ವರ್ಷ ನಮ್ಮ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಸಾರಿ ಹೇಳಿದರು. ಇದಕ್ಕೆ ಪೂರಕವಾಗಿ ಶನಿವಾರ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಕೂಡ ಬಿಜೆಪಿಯಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಆ ವಿಚಾರ ಎಲ್ಲಿಯೂ ಚರ್ಚೆಗೆ ಬಂದಿಲ್ಲ ಎಂದಿದ್ದರು.


ಇದನ್ನೂ ಓದಿ: ತಂದೆ ತಾಯಿಗೆ ಊಟ ಹಾಕಲು ಯೋಗ್ಯತೆ ಇಲ್ಲದವರಿಂದ ಪಾಕಿಸ್ತಾನ ಪರ ಘೋಷಣೆ: ಮುನಿಸ್ವಾಮಿ ಕಿಡಿ


ಸ್ಥಳೀಯ ನಾಯಕರು, ವಿವಿಧ ಮೋರ್ಚಾ ಪ್ರಭಾರಿಗಳು, ಕಾರ್ಯಕರ್ತರು 15 ದಿನದಿಂದ ಕಾರ್ಯಕಾರಣಿ ಯಶಸ್ಸಿಗೆ ಶ್ರಮಿಸಿದ್ದರು. ಅತಿಥಿಗಳ, ಊಟ, ಉಪಚಾರ, ಬ್ಯಾನರ್, ಬಂಟಿಂಗ್ಸ್, ನಾಯಕರ ಕಟ್‌ಔಟ್‌ಗಳಲ್ಲಿ ಯಾವುದೇ ಕೊರತೆ ಬರದಂತೆ ಕಾರ್ಯಕ್ರಮ ರೂಪಿಸಿದ್ದು ವಿಶೇಷವಾಗಿತ್ತು.


ಮೌನಕ್ಕೆ ಶರಣಾದ ಸಿಎಂ:


ಎರಡು ದಿನಗಳಿಂದ ಸಿಎಂ ಶಿವಮೊಗ್ಗದಲ್ಲಿ ಇದ್ದರೂ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪ್ರತಿ ಬಾರಿಯೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡೇ ಬಂದಿದ್ದರು. ಭಾನುವಾರ ನಡೆದ ಸಭೆ ಬಳಿಕ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಸಹ ಪ್ರತಿಕ್ರಿಯ ನೀಡಲಿಲ್ಲ. ಸಭೆ ಮುಗಿದ ಬಳಿಕ ಇಬ್ಬರೂ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದರು.


ಇನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಸ್ವಸ್ಥಗೊಂಡಿದ್ದು ರಾಜ್ಯ ಬಿಜೆಪಿ ನಾಯಕರಲ್ಲಿ ಅತಂಕಕ್ಕೆ ಕಾರಣವಾಗಿತ್ತು. ಮೊದಲ ಅವಧಿಯ ಕಾರ್ಯಕಾರಿಣಿ ನಂತರ ಅವರು ಬೆಂಗಳೂರಿಗೆ ಪ್ರಯಾಣ ಮಾಡಿದ್ದರು. ಈ ವೇಳೆ ಚಿತ್ರದುರ್ಗದಲ್ಲಿ ಅಸ್ವಸ್ಥರಾಗಿದ್ದು ಬಿಜೆಪಿ ನಾಯಕರಿಗೆ ಚಿಂತೆಗೆ ದೂಡಿತ್ತು. ಎಲ್ಲರೂ ಆರೋಗ್ಯ ವಿಚಾರಿಸುವುದರಲ್ಲಿ ನಿರತರಾಗಿದ್ದರು. ಸಭೆ ಬಳಿಕ ಬಹುತೇಕರು ತಡಮಾಡದೆ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದರು. ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಣಿ ನಂತರ ಸಿಎಂ ಬಿಎಸ್‌ವೈ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದರು.


ಜೆಡಿಎಸ್​ಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ: ಆರ್ ಅಶೋಕ್


ಬಿಜೆಪಿಯವರ ಸಹವಾಸ ನನಗೆ ಬೇಡ ಎಂಬ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜೆಡಿಎಸ್​ಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಮುಂದೆಯೂ ಸಂಬಂಧ ಇರಲ್ಲ. ಯಾವುದೇ ಚುನಾವಣೆಯಲ್ಲಿ ಒಪ್ಪಂದ ಇಲ್ಲ. ಅವರೊಂದಿಗೆ ಸುತಾರಂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದರು.


ಇದನ್ನೂ ಓದಿ: DV Sadananda Gowda - ಚಿತ್ರದುರ್ಗದಲ್ಲಿ ಕುಸಿದುಬಿದ್ದಿದ್ದ ಡಿವಿ ಸದಾನಂದಗೌಡ ಆರೋಗ್ಯ ಈಗ ಸ್ಥಿರ


ಇನ್ನು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕರ್ತರು ಹೊಂದಾಣಿಕೆ ಮಾಡಿಕೊಳ್ಳಬಹುದು. ಆದ್ರೆ ನಾವು ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಜೆಡಿಎಸ್​ನವರ ಅವಶ್ಯಕತೆ ನಮಗಿಲ್ಲ ಎಂದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಷಾ ಜನವರಿ 16, 17 ಅವರ  ಕಾರ್ಯಕ್ರಮ ಇದ್ದು ಅದರ ಉಸ್ತುವಾರಿಯನ್ನ ತನಗೆ ವಹಿಸಲಾಗಿದೆ ಎಂದು ತಿಳಿಸಿದರು.


ಗೋ ಪೂಜೆ ಮಾಡಿದ ಸಿಎಂ ಬಿ ಎಸ್ ಯಡಿಯೂರಪ್ಪ:


ಗೋ ಹತ್ಯೆ ನಿಷೇದ ಕಾಯ್ದೆ ಜಾರಿಯಾದ ಹಿನ್ನೆಲೆ ರಾಜ್ಯ ಕಾರ್ಯಕಾರಣಿ ಸಭೆಗೂ ಮುನ್ನ ಸಿಎಂ ಬಿ.ಎಸ್.ಯಡಿಯೂರಪ್ಪ ಗೋಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಶಿವಮೊಗ್ಗ ನಗರದ ಪ್ರೇರಣಾ ಕನ್ವೆನ್ಷನ್ ಹಾಲ್ ಮುಂಭಾಗ ಗೋ ಪೂಜೆ, ಗೋವುಗಳಿಗೆ ಸಿಎಂ ಅಕ್ಕಿ ಬೆಲ್ಲ ತಿನ್ನಿಸಿದರು. ಈ ವೇಳೆ ಕಾಂಕ್ರೀಝ್ ತಳಿಯ ಆರ್ಭಟಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಬೆದರಿದರು. ಈಶ್ವರಪ್ಪ ಅಕ್ಕಿ ಬೆಲ್ಲ ತಿನ್ನಿಸುವ ವೇಳೆ ಗುಜರಾತಿನ ದೇಶಿ ತಳಿ ಕಾಂಕ್ರೀಝ್ ತಳಿಯ ಹಸು ಗುರ್ ಎಂದಾಗ ಈಶ್ವರಪ್ಪ ಕೊಂಚ ಗಲಿಬಿಲಿಯಾದರು.


ವರದಿ: ವೀರೇಶ್ ಹೆಚ್ ಜಿ

First published: