HOME » NEWS » State » STATE BJP GOVERNMENT MAY STOP THE FARMERS LOAN WAIVER SCHEME EX CM KUMARASWAMY CONDEMNED ON TWITTER MAK

ರೈತರ ಸಾಲಮನ್ನಾ ಯೋಜನೆಗೆ ಇತಿಶ್ರೀ ಹಾಡಲು ಮುಂದಾಗಿರುವ ಸರ್ಕಾರ; ಟ್ವಿಟ್​ನಲ್ಲಿ ಚಾಟಿ ಬೀಸಿದ ಹೆಚ್​ಡಿಕೆ

ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಟ್ವಿಟ್​ ಮಾಡಿರುವ ಕುಮಾರಸ್ವಾಮಿ, ರೈತರ ಸಾಲ ಮನ್ನಾ ಯೋಜನೆಗೆ ತಿಲಾಂಜಲಿ ಇಡಲು ಬಿಜೆಪಿ ಸರ್ಕಾರ ಅಡ್ಡ ದಾರಿ ತುಳಿಯುತ್ತಿರುವುದು ಖಂಡನೀಯ. ರೈತರ ಬಾಳಿಗೆ ರಾಜ್ಯ ಬಿಜೆಪಿ ಸರ್ಕಾರ ಕೊಳ್ಳಿ ಇಡಲು ಮುಂದಾಗಿದೆ ಎಂದು ಕಿಡಿಕಾರಿದ್ದಾರೆ.

MAshok Kumar | news18-kannada
Updated:February 28, 2020, 10:04 PM IST
ರೈತರ ಸಾಲಮನ್ನಾ ಯೋಜನೆಗೆ ಇತಿಶ್ರೀ ಹಾಡಲು ಮುಂದಾಗಿರುವ ಸರ್ಕಾರ; ಟ್ವಿಟ್​ನಲ್ಲಿ ಚಾಟಿ ಬೀಸಿದ ಹೆಚ್​ಡಿಕೆ
ಹೆಚ್​.ಡಿ. ಕುಮಾರಸ್ವಾಮಿ.
  • Share this:
ಬೆಂಗಳೂರು (ಫೆಬ್ರವರಿ 28); ರೈತರ ಸಾಲಮನ್ನಾ ಯೋಜನೆಯಿಂದ 1.10 ಲಕ್ಷ ರೈತರನ್ನು ಬಿಜೆಪಿ ಸರ್ಕಾರ ಹೊರಗಿಟ್ಟ ಮತ್ತು 2019-20 ಅರ್ಥಿಕ ವರ್ಷದಲ್ಲಿ ಸಾಲಮನ್ನಾ ಯೋಜನೆಗೆ ಇತಿಶ್ರೀ ಇಡುವ ಕುರಿತ ವರದಿಗಳು ಆರ್ಥಿಕ ಸಚಿವಾಲಯದಿಂದಲೇ ಹೊರ ಬೀಳುತ್ತಿರುವ ಬೆನ್ನಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವಿಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಟ್ವಿಟ್​ ಮಾಡಿರುವ ಕುಮಾರಸ್ವಾಮಿ, “ರೈತರ ಸಾಲ ಮನ್ನಾ' ಯೋಜನೆಗೆ ತಿಲಾಂಜಲಿ ಇಡಲು ಬಿಜೆಪಿ ಸರ್ಕಾರ ಅಡ್ಡ ದಾರಿ ತುಳಿಯುತ್ತಿರುವುದು ಖಂಡನೀಯ. ರೈತರ ಬಾಳಿಗೆ ರಾಜ್ಯ ಬಿಜೆಪಿ ಸರ್ಕಾರ ಕೊಳ್ಳಿ ಇಡಲು ಮುಂದಾಗಿದೆ. ದಾಖಲೆಗಳ ನೆಪವೊಡ್ಡಿ ಸಾಲ ಮನ್ನಾ ಯೋಜನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ರೈತರನ್ನು ಕೈ ಬಿಡುವ ಮೂಲಕ ಬಿಜೆಪಿ ಸರ್ಕಾರ ರೈತರಿಗೆ ದೋಖಾ ಮಾಡುತ್ತಿದೆ.


ಸಾಲ ಮನ್ನಾದ ಬಗ್ಗೆ ಬಿಜೆಪಿಯ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಮೀಸಲಿಟ್ಟಿದ್ದ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳ ಹಣವನ್ನು ಬಿಜೆಪಿ ಸರ್ಕಾರ ಬೇರೆಡೆಗೆ ವರ್ಗಾಯಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದಲೂ ರಾಜ್ಯದ ಒಂದು ಲಕ್ಷದ ಐವತ್ತ್ಮೂರು ಸಾವಿರ ರೈತರಿಗೆ ವಂಚಿಸಲಾಗಿದೆ. ಸಾಲ ಮನ್ನಾ ಬಗ್ಗೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ರೈತರ ಪರವಾಗಿ ನಿಲ್ಲುತ್ತೇನೆ” ಎಂದು ಕಿಡಿಕಾರಿದ್ದಾರೆ.ಕುಮಾರಸ್ವಾಮಿ ಅವರ ಟ್ವಿಟ್​ಗೆ ಪ್ರತಿಕ್ರಿಯಿಸಿರುವ ಚಿತ್ರನಟಿ ಹರಿಪ್ರಿಯಾ, "ಕರ್ನಾಟಕ ಜನ ನಂಬುವುದು ಇಂತ ನಂಬಿಕೆ ದ್ರೋಹಿಗಳನ್ನೆ ಕುಮಾರಣ್ಣ ಏನು ಮಾಡಲು ಸಾಧ್ಯವಿಲ್ಲ. ಎಲ್ಲ ರಾಜ್ಯದಲ್ಲು ಪಕ್ಷ ಬಿಟ್ಟು ಹೋದ ಅತೃಪ್ತರನ್ನು ಸೋಲಿಸಿದ ಉದಾಹರಣೆಗಳಿವೆ.. ಆದರೆ ನಮ್ಮ ಕನ್ನಡ ಜನ ಅಂತವರನ್ನು ಗೆಲ್ಲಿಸಿ ಮಂತ್ರಿ ಮಾಡಿದ್ದಾರೆ. ಕೇಂದ್ರ ಇಂತ ಜನರಿಗೆ ಸರಿಯಾಗಿ ದೋಖ ಮಾಡಿದೆ, ದೋಖ ಮಾಡುವವರಿಗೆ ದೋಖನೇ ಉತ್ತರ" ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಸಾಲಮನ್ನಾ ಯೋಜನೆಗೆ ಇತಿಶ್ರೀ ಹಾಡಲು ಮುಂದಾದ ಸರ್ಕಾರ; ಪ್ರಸ್ತುತ ವರ್ಷದಲ್ಲಿ 1.10 ಲಕ್ಷ ರೈತರಿಗೆ ಕೋಕ್
Youtube Video
First published: February 28, 2020, 10:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories