• Home
  • »
  • News
  • »
  • state
  • »
  • Siddaramaiah: ರಾಜ್ಯದಲ್ಲಿ ಹಳಸಿರುವ ಬಿಜೆಪಿಗೆ ಜನರ ಮುಂದೆ ಬರಲು ಮುಖವಿಲ್ಲ, ಮೋದಿ ಬಿಟ್ಟರೆ ಗತಿಯಿಲ್ಲ: ಸಿದ್ದರಾಮಯ್ಯ ವ್ಯಂಗ್ಯ

Siddaramaiah: ರಾಜ್ಯದಲ್ಲಿ ಹಳಸಿರುವ ಬಿಜೆಪಿಗೆ ಜನರ ಮುಂದೆ ಬರಲು ಮುಖವಿಲ್ಲ, ಮೋದಿ ಬಿಟ್ಟರೆ ಗತಿಯಿಲ್ಲ: ಸಿದ್ದರಾಮಯ್ಯ ವ್ಯಂಗ್ಯ

ಸಿದ್ದರಾಮಯ್ಯ

ಸಿದ್ದರಾಮಯ್ಯ

ಕಳೆದ ಚುನಾವಣೆಯಲ್ಲಿ ಬಿಜೆಪಿಗಿಂತ ನಮಗೆ ಕರ್ನಾಟಕ ಜನರ ಆಶೀರ್ವಾದವಿತ್ತು. ಯಡಿಯೂರಪ್ಪ ನವರು ಸಿಎಂ ಆದ ಬಳಿಕ ಸದನದಲ್ಲಿ ಬಹುಮತ ಇದೆ ಅಂತಾ ಸಾಬೀತು ಮಾಡೋಕೆ ಆಗಲಿಲ್ಲ. ಹಾಗಾಗಿ 3-4 ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು. ಆದರೆ ಅನೈತಿಕ ಮಾರ್ಗದಿಂದ ನಮ್ಮ ಸರ್ಕಾರವನ್ನು ಉರುಳಿಸಿ ಮತ್ತೆ ಸರ್ಕಾರ ರಚಿಸಿದರು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
  • Share this:

ಹಾವೇರಿ: ಕೋಮುವಾದಿ ಬಿಜೆಪಿ (BJP) ಅಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದ ನಾವು 80 ಶಾಸಕರಿದ್ದರೂ ಕೂಡ 37 ಸ್ಥಾನಗಳಿದ್ದ ಜೆಡಿಎಸ್ (JDS)​ ಜೊತೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿಯನ್ನು(HD Kumaraswamy) ಮುಖ್ಯಮಂತ್ರಿ ಮಾಡಿದ್ದೆವು . ಆದರೆ  1 ವರ್ಷ 2 ತಿಂಗಳು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ  ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರ ಅನೈತಿಕ ರಾಜಕಾರಣದಿಂದ ಅಧಿಕಾರ ಕಳೆದುಕೊಳ್ಳುವಂತಾಯಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.  ನಮ್ಮ ಉದ್ದೇಶ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂಸೆ, ಅಸಹಿಷ್ಣುತೆ, ಸೇಡಿನ ರಾಜಕಾರಣ ಆರಂಭವಾಗುತ್ತದೆ ಎಂಬುದಾಗಿತ್ತು. ಜಾತಿ ಧರ್ಮಗಳ ಆಧಾರದ ಮೇಲೆ ಜನರನ್ನು ಕೆರಳಿಸಿ, ಸಮಾಜ ಒಡೆಯುವ ಕೆಲಸ ಮಾಡುತ್ತಾರೆ ಈ ಕಾರಣದಿಂದ ಮೈತ್ತಿ ಸರ್ಕಾರ 


ಕಳೆದ ಚುನಾವಣೆಯಲ್ಲಿ ಬಿಜೆಪಿಗಿಂತ ನಮಗೆ ಕರ್ನಾಟಕ ಜನರ ಆಶೀರ್ವಾದವಿತ್ತು. 104 ಸ್ಥಾನಗಳಿಸಿದ್ದ ಯಡಿಯೂರಪ್ಪ  ಸಿಎಂ ಆದರೂ  ಸದನದಲ್ಲಿ ಬಹುಮತ  ಸಾಬೀತು ಮಾಡಲಾಗದೆ  3-4 ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು.  ನಾವು 37 ಸ್ಥಾನಗಳಿದ್ದ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದೆವು. ಆದರೆ ನಮ್ಮ ಪಕ್ಷದ 14 ಶಾಸಕರು ಜನರ ಅಭಿಪ್ರಾಯಕ್ಕೆ ಬೆಲೆ ಕೊಡದೆ ತಮ್ಮನ್ನು ತಾವು ಮಾರಿಕೊಂಡು, ಬಿಜೆಪಿ ಸೇರಿದರು. ಬಿಜೆಪಿ ಈ ಆಪರೇಷನ್‌ ಕಮಲಕ್ಕೆ  ಸುಮಾರು 1,000 ಕೋಟಿ ಹಣ ಖರ್ಚು ಮಾಡಿತ್ತು. ಇದು ನನ್ನ ಪ್ರಕಾರ ರಾಜಕೀಯ ವ್ಯಭಿಚಾರ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.
ಒಬ್ಬ ಶಾಸಕನಿಗೆ 30-35 ಕೋಟಿ ಕೊಟ್ಟು ಖರೀದಿ


ಆಪರೇಷನ್‌ ಕಮಲಕ್ಕೆ ಶಾಸಕರಿಗೆ 30 ರಿಂದ 35 ಕೋಟಿ ಹಣ ಕೊಟ್ಟಿದ್ದು ಯಡಿಯೂರಪ್ಪ ಅವರದ್ದು.  ಅದನ್ನು ವಾಪಸ್​ ಪಡೆದುಕೊಳ್ಳಲು ಯಡಿಯೂರಪ್ಪ ಅವರ ಮನೆಯಲ್ಲೇ ಯಾರಿಗೆ ಗುತ್ತಿಗೆ ಕೆಲಸ ಕೊಡಬೇಕು, ಯಾರಿಂದ ಎಷ್ಟು ವಸೂಲಿ ಮಾಡಬೇಕು ಎಂದು ತೀರ್ಮಾನವಾಗುತ್ತದೆ. ಇದನ್ನು ಹೇಳಿದ್ದು ಬಿಜೆಪಿಯ ಬಸನಗೌಡ‌ ಪಾಟೀಲ್ ಯತ್ನಾಳ್.  ಅವರೇ ತಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಆಗಲು 2000 ಕೋಟಿ ಮತ್ತು ಸಚಿವರಾಗಲು 100 ಕೋಟಿ ಹಣ ಕೊಡಬೇಕು ಎಂದು  ಹೇಳಿದ್ದಾರೆ. ಇದೆಲ್ಲ ನಿಮ್ಮ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿದ ಅವರು ಈ ರೀತಿ ಅನೈತಿಕ ಮಾರ್ಗದಲ್ಲಿ ಬಂದ ಸರ್ಕಾರ ಜನರಿಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಮೊದಲೇ ಹೇಳಿದ್ದೆ ಎಂದು ಸ್ಮರಿಸಿದರು.
ನರೇಂದ್ರ ಮೋದಿ ಅವರೇ ಬಿಜೆಪಿಯ ಬಂಡವಾಳ


ಕರ್ನಾಟಕದ ಬಿಜೆಪಿ ನಾಯಕರಿಗೆ ಜನರ ಮುಂದೆ ಬರುವುದಕ್ಕಾಗಿ ಮುಖವಿಲ್ಲ. ಈಗಾಗಲೇ 40 % ಕಮಿಷನ್ ಸರ್ಕಾರ ಎಂಬುದು ರಾಜ್ಯದ ಜನತೆಯ ಅರಿವಿಗೆ ಬಂದಿದೆ.  ಹಾಗಾಗಿ ಅವರಿಗೆ ಮುಂದಿನ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿಯವರೇ ಬಂಡವಾಳವಾಗಿದ್ದಾರೆ. ಯಾಕೆಂದರೆ ರಾಜ್ಯ ಬಿಜೆಪಿ ನಮ್ಮ ಜನರಿಗೆ ಹಳಸಿದ ಪಕ್ಷವಾಗಿದೆ. ಮೋದಿ ಅವರನ್ನಾದರೂ ನೋಡಿ ಜನ ತಮಗೆ ಮತ್ತೆ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಇದ್ದಾರೆ ಎಂದು ವ್ಯಂಗ್ಯವಾಡಿದರು.


ಧಮ್ ಇದ್ರೆ ನ್ಯಾಯಾಂಗ ತನಿಖೆ ಮಾಡಿಸಲಿ


'ನ ಖಾವೂಂಗ, ನ ಖಾನೆದೂಂಗ' ಎಂದಿದ್ದ ಮೋದಿ ಅವರು ರಾಜ್ಯ ಬಿಜೆಪಿ ನಾಯಕರಿಗೆ ಯಾಕೆ ಲಂಚ ತಿನ್ನಲು ಬಿಟ್ಟಿದ್ದಾರೆ? ಕೆಂಪಣ್ಣ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ. ಇವರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಹೈಕೋರ್ಟ್​ನ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ, ಅದಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಾನು ಕೊಡುತ್ತೇನೆ ಎಂದು ಕೆಂಪಣ್ಣ ಹೇಳಿದ್ದಾರೆ. ಬೇರೆಯವರ ಧಮ್‌, ತಾಕತ್‌ ಪ್ರಶ್ನೆ ಮಾಡುವ ಬೊಮ್ಮಾಯಿ ಅವರಿಗೆ ಧಮ್‌, ತಾಕತ್‌ ಇದ್ದರೆ ನ್ಯಾಯಾಂಗ ತನಿಖೆ ಮಾಡಿಸಲಿ ಎಂದು ಸವಾಲ್ ಹಾಕಿದರು.


We cooked food, BJP is just serving it, says Siddaramaiahಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ


ನುಡಿದಂತೆ ನಡೆಯುತ್ತೇವೆ


ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಸಾಮಾನ್ಯ ಜನ ಬದುಕುವುದು ಕಷ್ಟವಾಗಿದೆ. ಗ್ಯಾಸ್‌ ಹಾಗೂ ದಿನಸಿ ಕೊಳ್ಳಲು ಬಡವರಿಗೆ ಕಷ್ಟವಾಗುತ್ತದೆ ಎಂದು ನಾವು ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಯೋಜನೆಯನ್ನು ಘೋಷಣೆ ಮಾಡಿದ್ದೇವೆ, ನಾವು ನುಡಿದಂತೆ ನಡೆಯುವವರು. ಬಡವ ಬಲ್ಲಿದನೆನ್ನದೆ ಪ್ರತೀ ಮನೆಗೆ 200 ಯುನಿಟ್‌ ಉಚಿತವಾಗಿ ವಿದ್ಯುತ್‌ ನೀಡುವ ಯೋಜನೆ ಘೋಷಣೆ ಮಾಡಿದ್ದೇವೆ. ಈ ಎಲ್ಲಾ ಯೋಜನೆಗಳು ನಿಮಗೆ ಬೇಕು ಎನ್ನುವುದಾದರೆ ಜನಪರವಾದ ಕಾಂಗ್ರೆಸ್‌ ಪಕ್ಷಕ್ಕೆ ತಾವೆಲ್ಲ ಬೆಂಬಲ ನೀಡಿ, ಮುಂಬರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ ಎಂದರು.


ನಾವು ತಯಾರಿಸಿದ ಊಟವನ್ನು ಬಿಜೆಪಿ ಬಡಿಸುತ್ತಿದೆ


ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಪ್ರಕ್ರಿಯೆ 2013 ರಿಂದ 2018 ರವರೆಗಿನ ಅವರ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾಯಿತು. ಅಂದಿನ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ತಮ್ಮ ನೇತೃತ್ವದ ಸರ್ಕಾರದಲ್ಲಿ ಅರಣ್ಯ ಕಾಯ್ದೆ ಮತ್ತು ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಭೂಮಿ ಒಡೆಯ ಮಾದರಿಯಲ್ಲಿ ವಾಸಿಸುವವನೇ ಮನೆಯೊಡೆಯ ಕಾಯ್ದೆ ಜಾರಿಗೆ ತಂದಿದ್ದರು. ನಂತರ ಅಧಿಕಾರ ಕಳೆದುಕೊಂಡಿದ್ದರಿಂದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಸಾಧ್ಯವಾಗಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಏನನ್ನೂ ಮಾಡದ ಬಿಜೆಪಿಯವರು ಇದ್ದಕ್ಕಿದ್ದ ಹಾಗೆ ಎಲ್ಲವನ್ನೂ ತಾವೇ ಮಾಡಿದ್ದೇವೆ ಎಂದು ಹೇಳತೊಡಗಿದ್ದಾರೆ. ಮುಂಬರುವ ಚುನಾವಣೆ ಅಂಗವಾಗಿ ಬಿಜೆಪಿಯವರು ನಾವು ತಯಾರಿಸಿದ ಊಟವನ್ನು ಬಡಿಸುತ್ತಿದ್ದಾರೆ ಎಂದು ಹೇಳಿದರು.

Published by:Rajesha B
First published: