Kannada Cheque: ಕನ್ನಡದಲ್ಲಿದ್ದ 6 ಸಾವಿರದ ಚೆಕ್ ತಿರಸ್ಕರಿಸಿದ್ದ ಬ್ಯಾಂಕ್​ಗೆ 85 ಸಾವಿರ ದಂಡ!

ಕನ್ನಡದಲ್ಲಿ ಬರೆದು  ಚೆಕ್ ನೀಡಿದ ಗ್ರಾಹಕನ ಚೆಕ್ ತಿರಸ್ಕಾರ ಮಾಡಿದ ಅಧಿಕಾರಿಗೆ 85 ಸಾವಿರ ದಂಡ ವಿಧಿಸಿದ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಧಾರವಾಡ : ಕನ್ನಡ ಭಾಷೆಗೆ ತನ್ನದೇ ಆದ ಸ್ಥಾನಮಾನ ಇದೆ. ಅಲ್ಲದೇ ಕನ್ನಡ ಭಾಷೆಯನ್ನು ಸ್ಥಳೀಯ ವ್ಯವಹಾರಕ್ಕೆ ಬಳಕೆ ಮಾಡ ಬಹುದಾಗಿದೆ. ಅಲ್ಲದೇ ಕೋರ್ಟ್​ನಲ್ಲಿ ವಾದ ಮಂಡನೇ ಹಾಗೂ ನ್ಯಾಯಾಧೀಶರು ಕನ್ನಡದಲ್ಲಿ (Kannada) ಆದೇಶ ಮಾಡಿದ ಹಲವಾರು ಉದಾಹರಣೆಗಳಿವೆ. ಆದ್ರೆ ಬ್ಯಾಂಕ್ ನಲ್ಲಿ ಗ್ರಾಹಕರೊಬ್ಬರು ತಮ್ಮ ಖಾತೆಯಲ್ಲಿನ ಹಣವನ್ನು ಡ್ರಾ ಮಾಡಿಸಲು ಕನ್ನಡದಲ್ಲಿ ಬರೆದು ಚೆಕ್ ನೀಡದ್ದರು, ಆದ್ರೆ ಈ ಚೆಕ್ ನ್ನು ಬ್ಯಾಂಕ್ ಸಿಬ್ಬಂದಿ ತಿರಸ್ಕಾರ ಮಾಡಿದ್ದರು. ಇದು ಕನ್ನಡ ಭಾಷೆಗೆ ಅವಮಾನ ಮಾಡಿದ ಹಾಗೆ ಎಂದು ಗ್ರಾಹಕ ಇಷ್ಟಕ್ಕೆ ಬಿಡದೆ ಧಾರವಾಡ (Dharwad) ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಇದರ ಪರಿಣಾಮ ಗ್ರಾಹಕರಿಗೆ ಜಯ ಸಿಗುವುದರ ಜೊತೆ ಬ್ಯಾಂಕ್ ಸಿಬ್ಬಂದಿಗೆ ದಂಡ ಹಾಕಲಾಗಿದೆ.

ಇಂಗ್ಲೀಷ್ ಪ್ರಾಧ್ಯಾಪಕರಾಗಿರುವ ವಾದಿರಾಜಾಚಾರ್ಯ ಇನಾಮದಾರ ಎಂಬುವರು ಹಳಿಯಾಳದ ಎಸ್‌ಬಿಐ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರು. ತಮ್ಮ ಉಳಿತಾಯ ಖಾತೆಯಲ್ಲಿ   9 ಲಕ್ಷ ರೂ.ಕ್ಕಿಂತ ಹೆಚ್ಚು ಹಣ ಇತ್ತು.  ಇದರಲ್ಲಿ ಕೇವಲ 6 ಸಾವಿರ ರೂಪಾಯಿ ಡ್ರಾ ಮಾಡಲು ಕನ್ನಡ ಭಾಷೆಯಲ್ಲಿ ಬರೆದುದಕ್ಕಾಗಿ ಬ್ಯಾಂಕ್ ಸಿಬ್ಬಂದಿ ಅಮಾನ್ಯ ಮಾಡಿದ್ದರು.

ಕನ್ನಡ ಚೆಕ್


ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದ ಗ್ರಾಹಕ
ಇದರನ್ನು ಪ್ರಶ್ನಿಸಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. ದೂರು ಪಡೆದ ಆಯೋಗ, ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ವಿಚಾರಣೆ ನಡೆಸಿದ್ದರು.

ಆದೇಶದಲ್ಲಿ ಏನಿದೆ? ಏಕೆ ದಂಡ?
ಆಯೋಗವು ದೂರುದಾರರ ಉಳಿತಾಯ ಖಾತೆಯಲ್ಲಿ   9 ಲಕ್ಷ ರೂ.ಕ್ಕಿಂತ ಹೆಚ್ಚು ಹಣ ಇದ್ದರೂ ಕೂಡ ಕೇವಲ 6 ಸಾವಿರ ರೂ. ಮೌಲ್ಯದ ಚೆಕ್ಕನ್ನು ಕನ್ನಡ ಭಾಷೆಯಲ್ಲಿ ಬರೆದುದಕ್ಕಾಗಿ ಅಮಾನ್ಯ ಮಾಡಿರುವುದನ್ನು, ಸೇವಾ ನ್ಯೂನ್ಯತೆ ಎಂದು  ಪರಿಗಣಿಸಿ ಹಳಿಯಾಳ ಎಸ್‌ಬಿಐ  ಬ್ಯಾಂಕ್ ಶಾಖೆಯು  ಫಿರ್ಯಾದಿಗೆ ಪರಿಹಾರ ಮತ್ತು ದಂಡ ರೂಪದಲ್ಲಿ ಒಟ್ಟು 85,177  ರೂಪಾಯಿಗಳನ್ನು ಪಾವತಿಸುವಂತೆ  ಆದೇಶಿಸಿದೆ. ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ  ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು  ಪಿ.ಸಿ.ಹಿರೇಮಠ  ಈ ತೀರ್ಪು ನೀಡಿದ್ದಾರೆ .

ಇದನ್ನೂ ಓದಿ: Sirsi Red Fort: ಶಿರಸಿಯಲ್ಲೇ ಇದೆ ಕೆಂಪುಕೋಟೆ! ಒಳಗಿದ್ದಾನೆ ಗಣಪ!

ತ್ರಿಭಾಷಾ ಸೂತ್ರ ಪಾಲಿಸಬೇಕಿದೆ
ಬ್ಯಾಂಕುಗಳಲ್ಲಿ ತ್ರಿಭಾಷಾ ಸೂತ್ರದ ಬಳಕೆ ನಿಯಮಾನುಸಾರ ಸ್ಥಳೀಯ ಭಾಷಾ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ನೀಡಿರುವ ತೀರ್ಪು ವಿಶೇಷ ಹಾಗೂ ಮಹತ್ವದ್ದೆನಿಸಿದೆ.

ಇದನ್ನೂ ಓದಿ: Coconut Shell: ಕೈಗೆ ಚಿಪ್ಪು ಕೊಟ್ರೆ ಮ್ಯಾಜಿಕ್ ಮಾಡ್ತಾರೆ! ತೆಂಗಿನ ಚಿಪ್ಪು ಎಸೆಯೋ ಮುನ್ನ ಇಲ್ನೋಡಿ

ಒಟ್ಟಾರೆಯಾಗಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ನೀಡಿ ತೀರ್ಪು ಕನ್ನಡದ ಮೇಲಿನ ಭಾಷಾ ಪ್ರೀತಿ ಮತ್ತಷ್ಟು ಹೆಚ್ಚಿಸುತ್ತಿದೆ ಎಂದರೆ ತಪ್ಪಾಗಲಾರದು.
Published by:ಗುರುಗಣೇಶ ಡಬ್ಗುಳಿ
First published: