ಶಿವಮೊಗ್ಗದತ್ತ ರಾಜ್ಯ, ರಾಷ್ಟ್ರ ನಾಯಕರ ಚಿತ್ತ; ಮಲೆನಾಡಿನಲ್ಲಿ ಕಾವೇರುತ್ತಿದೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರ ಸೆಣಸಾಣ

lok sabha elections 2019: ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಮಗ ಮಧು ಬಂಗಾರಪ್ಪ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದರೆ, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎರಡೂ ಪಕ್ಷಗಳಿಗೂ ಮಲೆನಾಡು ಶಿವಮೊಗ್ಗ ಪ್ರತಿಷ್ಠೆಯ ಕಣವಾಗಿ ಬದಲಾಗಿದೆ. ಪರಿಣಾಮ ರಾಜ್ಯ ರಾಷ್ಟ್ರ ನಾಯಕರು ಅಬ್ಬರದ ಪ್ರಚಾರಕ್ಕೆ ಮಲೆನಾಡು ಸಾಕ್ಷಿಯಾಗುತ್ತಿದೆ.

MAshok Kumar | news18
Updated:April 20, 2019, 10:12 AM IST
ಶಿವಮೊಗ್ಗದತ್ತ ರಾಜ್ಯ, ರಾಷ್ಟ್ರ ನಾಯಕರ ಚಿತ್ತ; ಮಲೆನಾಡಿನಲ್ಲಿ ಕಾವೇರುತ್ತಿದೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರ ಸೆಣಸಾಣ
ಸಾಂದರ್ಭಿಕ ಚಿತ್ರ.
MAshok Kumar | news18
Updated: April 20, 2019, 10:12 AM IST
ಶಿವಮೊಗ್ಗ (ಫೆ.20) : ರಾಜ್ಯದ ಹೈಪ್ರೊಫೈಲ್ ಕಣ ಎಂದೇ ಬಿಂಬಿಸಲಾಗಿರುವ ಶಿವಮೊಗ್ಗದಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಪುತ್ರರು ಸೆಣಸುತ್ತಿದ್ದು, ಮೂರೂ ಪಕ್ಷಗಳ ರಾಜ್ಯ ನಾಯಕರು ಇದೀಗ ಶಿವಮೊಗ್ಗಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಬಿಜೆಪಿ ಅಭ್ಯರ್ಥಿ ಪರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಭದ್ರಾವತಿಯಲ್ಲಿ ಮೊದಲ ಬಾರಿಗೆ ರೋಡ್ ಶೋ ನಡೆಸುತ್ತಿರುವುದು ಗಮನಾರ್ಹ.

ಏಪ್ರಿಲ್ 18 ರಂದು ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿತ್ತು. ನಟಿ ಸುಮಲತಾ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ನಿಖಿಲ್ ಸ್ಪರ್ಧೆಯಿಂದಾಗಿ ಈ ಕ್ಷೇತ್ರದ ಜಿದ್ದಾಜಿದ್ದಿ ಕಣಕ್ಕೆ ಸಾಕ್ಷಿಯಾಗಿತ್ತು. ಪರಿಣಾಮ ಚುನಾವಣೆ ಮುಗಿಯುವವರೆಗೆ ಬಹುತೇಕ ರಾಜ್ಯ ನಾಯಕರು ಮಂಡ್ಯದಲ್ಲೇ ವಾಸ್ತವ್ಯ ಹೂಡಿದ್ದರು. ಆದರೆ, ಎರಡನೇ ಹಂತದ ಮತದಾನದಲ್ಲಿ ಶಿವಮೊಗ್ಗ ಕ್ಷೇತ್ರ ಅಂತಹ ಒಂದು ಹೈ ಪ್ರೊಫೈಲ್ ಕೇಂದ್ರವೆಂಬಂತೆ ಬಿಂಬಿಸಲಾಗುತ್ತಿದೆ.

ಇದನ್ನೂ ಓದಿ : ಶಿವಮೊಗ್ಗ ರಾಜಕಾರಣಕ್ಕೆ ಡಿಕೆಶಿ ಎಂಟ್ರಿ; ಬಿಜೆಪಿ ಪಾಳಯದಲ್ಲಿ ನಡುಕ; ಗೆದ್ದು ಬರುತ್ತಾರಾ ಮಧು ಬಂಗಾರಪ್ಪ?

ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಮಗ ಮಧು ಬಂಗಾರಪ್ಪ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದರೆ, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎರಡೂ ಪಕ್ಷಗಳಿಗೂ ಮಲೆನಾಡು ಶಿವಮೊಗ್ಗ ಪ್ರತಿಷ್ಠೆಯ ಕಣವಾಗಿ ಬದಲಾಗಿದೆ. ಪರಿಣಾಮ ರಾಜ್ಯ ರಾಷ್ಟ್ರ ನಾಯಕರು ಅಬ್ಬರದ ಪ್ರಚಾರಕ್ಕೆ ಮಲೆನಾಡು ಸಾಕ್ಷಿಯಾಗುತ್ತಿದೆ.

ಅಮಿತ್ ಶಾ ರೋಡ್ ಶೋ : ಕೈಗಾರಿಕೆಗಳ ನಗರಿ ಎಂದೇ ಖ್ಯಾತಿ ಪಡೆದಿರುವ ಶಿವಮೊಗ್ಗದ ಭದ್ರಾವತಿ ತಾಲೂಕಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಬೆಳಗ್ಗೆ 11 ಗಂಟೆಗೆ ರೋಡ್​ ಶೋ ನಡೆಸಲಿದ್ದಾರೆ.

ರಂಗಪ್ಪ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಬೃಹತ್ ರೋಡ್ ಶೋ ನಡೆಸಲಿರುವ  ಅಮಿತ್ ಶಾ, ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಮಖ್ಯಮಂತ್ರಿ ಯಡಿಯೂರಪ್ಪ, ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಹಾಗೂ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಜತೆಗಿರಲಿದ್ದಾರೆ.ಅಲ್ಲದೆ ತೀರ್ಥಹಳ್ಳಿಯ ಟಿ.ಎ.ಪಿ.ಎಂ.ಎಸ್. ಪ್ರಾಂಗಣದಲ್ಲಿ ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆ ಆಯೋಜನೆ ಮಾಡಲಾಗಿದ್ದು, ಸಭೆಯನ್ನುದ್ದೇಶಿಸಿ ಭಾಷಣ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಮಾತನಾಡಲಿದ್ದಾರೆ.

ಆದರೆ,  ಅಮಿತ್ ಷಾ ಆಗಮನಕ್ಕಾಗಿ ರಂಗಪ್ಪ ವೃತ್ತ, ಅಂಬೇಡ್ಕರ್ ವೃತ್ತದಲ್ಲಿ ಕಟ್ಟಲಾಗಿದ್ದ ಬಿಜೆಪಿ ಬಾವುಟಗನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿರುವುದು ಬಿಜೆಪಿಗೆ ರೋಡ್ ಶೋ ಆರಂಭಕ್ಕೂ ಮುನ್ನವೇ ಶಾಕ್ ನೀಡಿದಂತಾಗಿದೆ..

ಇದನ್ನೂ ಓದಿ : 'ಯಡಿಯೂರಪ್ಪನವರಿಗೆ ಇನ್ನಾದರೂ ಸ್ವಲ್ಪ ವಿಶ್ರಾಂತಿ ಕೊಡಿ'; ಶಿವಮೊಗ್ಗ ಜನರಲ್ಲಿ ಮನವಿ ಮಾಡಿದ ಸಚಿವ ಡಿಕೆಶಿ!

ಶಿವಮೊಗ್ಗದಲ್ಲಿ ದೇವೇಗೌಡ ಮತಭೇಟೆ : ಶಿವಮೊಗ್ಗದ ಭದ್ರಾವತಿ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ರಾಷ್ಟ್ರ ರಾಜ್ಯ ನಾಯಕರು ಚುನಾವಣಾ ಪ್ರಚಾರ ನಡೆಸಿದರೆ ಮತ್ತೊಂದೆಡೆ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪನವರ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಶಿವಮೊಗ್ಗದ ಉಂಬ್ಲೆಬೈಲಿನಲ್ಲಿ  ಬೆಳಗ್ಗೆಯೆ ರೋಡ್ ಶೋ ನಡೆಸಲಿದ್ದಾರೆ.

ಈಗಾಗಲೇ ವಿಜಯಪುರದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸುವ ಸಲುವಾಗಿ ಉತ್ತರ ಕರ್ನಾಟಕದಲ್ಲಿ ಠಿಕಾಣಿ ಹೂಡಿರುವ ದೇವೇಗೌಡ ಹಾಗೂ ಕುಮಾರಸ್ವಾಮಿ ಅಲ್ಲಿಂದ ಬೆಳಗ್ಗೆಯೇ ತೆರಳಿ ನೇರವಾಗಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಅಲ್ಲದೆ ರೋಡ್ ಶೋ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇನ್ನೂ ಕಾಂಗ್ರೆಸ್​ನ ಮತ್ತೋರ್ವ ರೆಬಲ್ ಲೀಡರ್ ಡಿ.ಕೆ. ಶಿವಕುಮಾರ್ ಸಾಗರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

First published:April 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ