• Home
  • »
  • News
  • »
  • state
  • »
  • Veterinary Ambulance: ಪಶು ಸಂಚಾರಿ ಚಿಕಿತ್ಸಾಲಯ ಸೇವೆಗೆ ಚಾಲನೆ, ಜಾನುವಾರುಗಳ ಚಿಕಿತ್ಸೆಗೆ ರೈತರ ಮನೆಗೆ ಬರುತ್ತೆ ಆಂಬ್ಯುಲೆನ್ಸ್

Veterinary Ambulance: ಪಶು ಸಂಚಾರಿ ಚಿಕಿತ್ಸಾಲಯ ಸೇವೆಗೆ ಚಾಲನೆ, ಜಾನುವಾರುಗಳ ಚಿಕಿತ್ಸೆಗೆ ರೈತರ ಮನೆಗೆ ಬರುತ್ತೆ ಆಂಬ್ಯುಲೆನ್ಸ್

ಪಶು ಸಂಚಾರಿ ಚಿಕಿತ್ಸಾಲಯ ಸೇವೆ ಶುರು

ಪಶು ಸಂಚಾರಿ ಚಿಕಿತ್ಸಾಲಯ ಸೇವೆ ಶುರು

ವಿಧಾನಸೌಧದ ಮುಂಭಾಗ ಸಂಚಾರಿ ಆಂಬ್ಯುಲೆನ್ಸ್ ಪಶು ಚಿಕಿತ್ಸಾಲಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ರು. ಪ್ರತಿ ಚಿಕಿತ್ಸಾ ವಾಹನದಲ್ಲಿ ಪಶು ವೈದ್ಯರು, ಪಶು ವೈದ್ಯ ಸಹಾಯಕರು ಹಾಗೂ ಚಾಲಕ ಕಂ ಡಿ ದರ್ಜೆ ನೌಕರರು ಇದ್ದು, ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಆರೋಗ್ಯ ಸೇವೆ ನೀಡುವರು.

ಮುಂದೆ ಓದಿ ...
  • Share this:

ಬೆಂಗಳೂರು (ಮೇ 7): ನಾಡಿನ ಜಾನುವಾರುಗಳ (Livestock) ಆರೋಗ್ಯ ಸೇವೆಗಾಗಿ ಸಂಚಾರಿ ಪಶುಚಿಕಿತ್ಸಾಲಯ (Ambulance) ಗಳನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಕೇಂದ್ರ ಪಶುಸಂಗೋಪನಾ ಸಚಿವ ಪುರುಷೋತ್ತಮ್ ರೂಪಾಲ್ ಲೋಕಾರ್ಪಣೆ ಮಾಡಿದರು. ವಿಧಾನ ಸೌಧದ (Vidhana Soudha) ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ70 ಪಶು ಚಿಕಿತ್ಸಾ ಆಂಬ್ಯುಲೆನ್ಸ್​ಗಳನ್ನು  ಲೋಕಾರ್ಪಣೆಗೊಳಿಸಲಾಯಿತು. ರಾಜ್ಯದಲ್ಲಿ 275 ಪಶು ಸಂಚಾರಿ (ಆಂಬ್ಯುಲೆನ್ಸ್) ಪಶುಚಿಕಿತ್ಸಾಲಯಗಳನ್ನು ಆರಂಭಿಸಲಾಗುತ್ತಿದ್ದು, ಆ ಪೈಕಿ ಇಂದು 70 ಪಶು ಚಿಕಿತ್ಸಾ(Veterinary Clinics) ಆಂಬ್ಯುಲೆನ್ಸ್‌ಗಳ ಲೋಕಾರ್ಪಣೆ ನಡೆಯಿತು.


ಬಸವರಾಜ ಬೊಮ್ಮಾಯಿ ಅವ್ರಿಂದ ಚಾಲನೆ


ವಿಧಾನಸೌಧದ ಮುಂಭಾಗ ಸಂಚಾರಿ ಆಂಬ್ಯುಲೆನ್ಸ್ ಪಶು ಚಿಕಿತ್ಸಾಲಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ರು, ನಂತರ ಗೋವುಗಳಿಗೆ ಮುತ್ತುಕ್ಕಿದರು. ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಇದ್ದಾರೆ.  ಸಂಚಾರಿಪಶು ಚಿಕಿತ್ಸಾ ಆಂಬ್ಯೂಲೆನ್ಸ್‌ಗಳ ನಿಗಾ ವ್ಯವಸ್ಥೆಗೆ ಪ್ರತ್ಯೇಕ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದ್ದು, ರೈತರು 1962 ಟೋಲ್ ಫ್ರೀ ಸಂಖ್ಯೆಗೆ ದೂರವಾಣಿ ಮಾಡಿದ ತಕ್ಷಣ ಆಂಬ್ಯೂಲೆನ್ಸ್ ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಿದೆ ಎಂದು ಪಶುಸಂಗೋಪನಾ ಸಚಿವ ಪ್ರಭುಚೌಹಾಣ್ ಇದೇ ಸಂದರ್ಭದಲ್ಲಿ ಹೇಳಿದರು.


ರೈತರ ಮನೆ ಬಾಗಿಲಿಗೆ ಬಂದು ಚಿಕಿತ್ಸೆ


ಪ್ರತಿ ಚಿಕಿತ್ಸಾ ವಾಹನದಲ್ಲಿ ಪಶು ವೈದ್ಯರು, ಪಶು ವೈದ್ಯ ಸಹಾಯಕರು ಹಾಗೂ ಚಾಲಕ ಕಂ ಡಿ ದರ್ಜೆ ನೌಕರರು ಇದ್ದು, ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಆರೋಗ್ಯ ಸೇವೆ ನೀಡುವರು ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್, ವಿ. ಸೋಮಣ್ಣ, ಎಸ್.ಟಿ ಸೋಮಶೇಖರ್, ಸಂಸದ ಪಿ.ಸಿ ಮೋಹನ್, ಇಲಾಖಾ ಕಾರ್ಯದರ್ಶಿ ಸಲ್ಮಾಪಾಹಿಂ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.


Karnataka Politics: ಬಿಜೆಪಿ ಮುಖ್ಯಮಂತ್ರಿ ಸ್ಥಾನ 'ಪೇಮೆಂಟ್ ಸೀಟಾ?'- ಸಿದ್ದರಾಮಯ್ಯ ಪ್ರಶ್ನೆ


ಬಸವ ಜಯಂತಿ ಸಮಾರಂಭದಲ್ಲಿ ಸಿಎಂ ಭಾಗಿ


ಬೆಂಗಳೂರು:  ಬಸವ ವೇದಿಕೆ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭ ಹಾಗೂ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಹಾಗೂ ರಜತ ಮಹೋತ್ಸವ-2022”ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಯಕದಲ್ಲಿಯೇ ಸ್ವರ್ಗವನ್ನು ಕಾಣುವ, ಸಮಾನತೆ, ಸಮಾನ ಅವಕಾಶಗಳನ್ನು ಒದಗಿಸುವ ಹಾಗೂ ಸೈದ್ಧಾಂತಿಕ ಮತ್ತು ವೈಜ್ಞಾನಿಕ ಚಿಂತನೆ ಮಾಡುವ ಸಮಾಜ ನಿರ್ಮಾಣವನ್ನು ಬಸವಣ್ಣನವರು ಬಯಸಿದ್ದರು ಹಾಗೂ ಮಾಡಿದ್ದರು. ಹೀಗಾಗಿ ಬಸವಪಥದಲ್ಲಿಯೇ ನಮ್ಮ ಸರ್ಕಾರ ಮುನ್ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


ಸರ್ಕಾರ ದುಡಿಯುವ ಅವಕಾಶವಿಲ್ಲದವರಿಗೆ ಅವಕಾಶ ಗಳನ್ನು ಕಲ್ಪಿಸುತ್ತಿದೆ. ಆರ್ಥಿಕತೆ ಎಂದರೆ ದುಡ್ಡಲ್ಲ. ಅದು ಜನರ ದುಡಿಮೆ. ದುಡಿಮೆಯೇ ದೊಡ್ಡಪ್ಪ ಎಂದು ಬದಲಾಯಿಸುತ್ತಿದ್ದೇವೆ. ದೇಶವನ್ನು ರೈತರು ಮತ್ತು ಕಾರ್ಮಿಕರು ಕಟ್ಟುತ್ತಿದ್ದಾರೆ. ಕರ್ತವ್ಯ ಕ್ಕೂ ಕಾಯಕಕ್ಕೂ ವ್ಯತ್ಯಾಸವಿಲ್ಲ. ಕಾಯಕವನ್ನು ನಿಷ್ಠೆಯಿಂದ ಮಾಡಿದರೆ, ಅದೇ ಪೂಜೆ ಹಾಗೂ ಸ್ವರ್ಗ ಎನ್ನುವುದು ಬಸವಣ್ಣನ ಚಿಂತನೆ ಎಂದರು. ಮುಂದಿನ ವರ್ಷ ಬಸವ ಪ್ರಶಸ್ತಿ ಸಮಾರಂಭವನ್ನು ರಾಷ್ಟ್ರ ಮಟ್ಟದಲ್ಲಿ ದೆಹಲಿಯಲ್ಲಿ ಹಮ್ಮಿಕೊಳ್ಳಬೇಕು ಎಂದು ಮುಖ್ಯ ಮಂತ್ರಿ ಬೊಮ್ಮಾಯಿ ತಿಳಿಸಿದರು.


ಇದನ್ನೂ ಓದಿ: DK Shivakumar: "ಯತ್ನಾಳ್ ಏನು ಮೆಂಟಲ್ಲಾ? ಅವರನ್ನು ಮೊದಲು ವಿಚಾರಣೆ ಮಾಡಿ" - ಸರ್ಕಾರಕ್ಕೆ ಡಿಕೆಶಿ ಆಗ್ರಹ


ಬಸವಣ್ಣ ಅವರಿಂದ ಪ್ರಭಾವಿತರಾಗಿರುವ ಬಸವಣ್ಣ


ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಬಸವಣ್ಣ ನವರ ವಿಚಾರ ಹಾಗೂ ಕಾಯಕವೇ ಕೈಲಾಸ ಎಂಬ ಎರಡೂ ವಿಚಾರಗಳನ್ನು ಬೆರೆಸಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದ್ದಾರೆ. ಬಸವಣ್ಣ ಅವರ ಪ್ರಭಾವ ನಮ್ಮ ಪ್ರಧಾನಮಂತ್ರಿ ಗಳಿಗೆ ಇದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ

Published by:ಪಾವನ ಎಚ್ ಎಸ್
First published: