Male Mahadeshwara: ಮಾದಪ್ಪನ ಸನ್ನಿಧಿಯಲ್ಲಿ ಲಡ್ಡು ಜೊತೆ ಸಿಕ್ತು 2 ಲಕ್ಷ ಹಣ! ವಾಪಸ್ ಕೊಟ್ಟು ಪ್ರಾಮಾಣಿಕತೆ ಮೆರೆದ ಭಕ್ತ

ಮಲೆ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆಗೆ 2 ಲಕ್ಷ ರೂಪಾಯಿ ಭಕ್ತನ ಪಾಲಿಗಿದೆ. ಪ್ರಸಾದದ ಚೀಲದ ಜೊತೆಗೆ ಹಣವಿದ್ದ ಚೀಲವನ್ನು ಭಕ್ತನಿಗೆ ನೀಡಿ ಸಿಬ್ಬಂದಿ ಎಡವಟ್ಟು ಮಾಡಿದ್ದಾನೆ. ಇದಾದ ಬಳಿಕ ಭಕ್ತನೇ ವಾಪಸ್ ಹಣ ತಂದುಕೊಟ್ಟು ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.

ಮಲೆ ಮಹದೇಶ್ವರ ದೇಗುಲಕ್ಕೆ ಹಣ ಹಿಂತಿರುಗಿಸಿದ ಭಕ್ತ

ಮಲೆ ಮಹದೇಶ್ವರ ದೇಗುಲಕ್ಕೆ ಹಣ ಹಿಂತಿರುಗಿಸಿದ ಭಕ್ತ

  • Share this:
ಚಾಮರಾಜನಗರ (ಜು.29): ಮಲೆಮಹದೇಶ್ವರ ದೇಗುಲದಲ್ಲಿ (Mahadeshwara Betta Temple)  ನಿನ್ನೆ (ಗುರುವಾರ) ಭೀಮನ ಅಮವಾಸ್ಯೆ ಪ್ರಯುಕ್ತ ದೇಗುಲಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ರಾಜಗೋಪುರದ ಬಳಿ ವಿಶೇಷ ದರ್ಶನ ಕೌಂಟರ್​ನಲ್ಲಿ (Special Darshan Counter) ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ (Worker) ಕಣ್ತಪ್ಪಿನಿಂದ ಲಾಡು ಪ್ರಸಾದದ ಬ್ಯಾಗ್​ನ ಜೊತೆಗೆ 2.91 ಲಕ್ಷ ರೂ ಹಣವನ್ನೂ ಭಕ್ತನೋರ್ವನಿಗೆ (Devote) ಒಪ್ಪಿಸಿದ್ದಾರೆ. ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆಗೆ 2 ಲಕ್ಷ ರೂಪಾಯಿ ಭಕ್ತನ ಪಾಲಾಗಿದೆ. ಪ್ರಸಾದದ ಚೀಲದ ಜೊತೆಗೆ ಹಣವಿದ್ದ ಚೀಲವನ್ನು ಭಕ್ತನಿಗೆ ನೀಡಿ ಸಿಬ್ಬಂದಿ ಎಡವಟ್ಟು ಮಾಡಿದ್ದಾನೆ. ವಿಶೇಷ ದರ್ಶನಕ್ಕೆ ಟಿಕೆಟ್ ಹಾಗೂ ಪ್ರಸಾದ ನೀಡಲು ಕುಳಿತಿದ್ದ ಸಿಬ್ಬಂದಿ, ಲಾಡು ಪ್ರಸಾದದ ಚೀಲಗಳನ್ನು (Laddu Prasada Bag) ತುಂಬಿದ್ದ ಬಕೆಟ್‌ ಪಕ್ಕದಲ್ಲೇ ಹಣದ ಚೀಲಗಳನ್ನು ಇಟ್ಟಿದ್ದ ಈ ವೇಳೆ ಪ್ರಸಾದ ನೀಡೋ ಬರದಲ್ಲಿ ಹಣದ ಚೀಲವನ್ನು ಭಕ್ತನಿಗೆ ನೀಡಿದ್ದಾರೆ. ಇದಾದ ಎರಡು ದಿನಗಳ ಬಳಿಕ ಹಣ ವಾಪಸ್ ನೀಡಿ ಮಾದಪ್ಪನ ಭಕ್ತ ಪ್ರಾಮಾಣಿಕತೆ ಮೆರೆದಿದ್ದಾನೆ.

ಲಡ್ಡು ಜೊತೆ ಭಕ್ತನ ಕೈಸೇರಿದ ₹2.9 ಲಕ್ಷ ದುಡ್ಡು

4 ಅಭಿಷೇಕದ ಟಿಕೆಟ್ ಖರೀದಿಸಿದ್ದ ಭಕ್ತ, 4 ಪ್ರಸಾದ‌ ಚೀಲಗಳ ಪಡೆಯಲು ಬಂದಿದ್ದ. ಈ ವೇಳೆ ಮೂರು ಪ್ರಸಾದ ಹಾಗು ಒಂದು ಹಣದ ಚೀಲವನ್ನು ನೌಕರ ನಾಗಭೂಷಣ್ ಎತ್ತಿಕೊಟ್ಟಿದ್ದಾರೆ. ಇದಾದ ಬಹಳ ಹೊತ್ತಿನ ಬಳಿಕ ಹಣ ಕಾಣಿಸದಿದ್ದರಿಂದ ಹುಡುಕಾಟ ನಡೆಸಿ ಸಿಸಿಟಿವಿ ಪರಿಶೀಲಿಸಿದಾಗ ಸಿಬ್ಬಂದಿಯ ಕಣ್ತಪ್ಪಿನಿಂದ ದುಡ್ಡು ಲಾಡು ಜೊತೆ ಭಕ್ತನ ಕೈ ಸೇರಿರೋದು ಗೊತ್ತಾಗಿದೆ.

ಗಾಬರಿಯಲ್ಲಿ ಎಡವಟ್ಟು ಮಾಡಿಕೊಂಡ ಸಿಬ್ಬಂದಿ

ಪ್ರಾಧಿಕಾರದ ಬೊಕ್ಕಸಕ್ಕೆ 2.91 ರೂ ಲಕ್ಷ ನಷ್ಟವಾದ ಹಣವನ್ನು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದಲೇ ಜಮಾ ಮಾಡಿಸಲು ತಾಕೀತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜನದಟ್ಟಣೆ ಹೆಚ್ಚಾಗಿ ಹಾಗೂ ಪ್ರಸಾದ ನೀಡೋ ಗಾಬರಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Chamarajanagar: ಮಲೆಮಹದೇಶ್ವರ ಬೆಟ್ಟದಲ್ಲಿ ಲಡ್ಡು ಜೊತೆ ಭಕ್ತನಿಗೆ ಸಿಗ್ತು 2 ಲಕ್ಷ ಹಣ!

ಸಿಸಿಟಿವಿ ದೃಶ್ಯಗಳ ಪರಿಶೀಲನೆ

ಈ ಸಂಬಂಧ ಪೊಲೀಸ್​  ಠಾಣೆಗೆ ದೂರು ದಾಖಲಿಸಲಾಗಿದೆ. ಇದೀಗ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಪ್ರಸಾದ ಪಡೆಯುವಾಗ ಚೀಲದಲ್ಲಿ ಹಣವಿರುವುದನ್ನು ನೋಡಿದರೂ ವಾಪಸ್ ನೀಡದೆ ಭಕ್ತ ತೆಗೆದುಕೊಂಡು ಹೋಗಿದ್ದಾರೆ.

ಹಣ ವಾಪಸ್ ಕೊಟ್ಟು ಪ್ರಾಮಾಣಿಕತೆ ಮೆರೆದ ಭಕ್ತ

ಇದಾಗುತ್ತಿದ್ದಂತೆ ಶನಿವಾರ ದೇಗುಲಕ್ಕೆ ಪುನಃ ಬಂದ ಭಕ್ತ ಹಣದ ಬ್ಯಾಗ್ ವಾಪಸ್ ನೀಡಿ, ಪ್ರಾಮಾಣಿಕತೆ ಮೆರೆದಿದ್ದಾರೆ. ಬೆಂಗಳೂರು ಮೂಲದ ನರಸಿಂಹ ಎಂಬುವರೆ  ಮಾದಪ್ಪನ ಹಣವನ್ನು ತಂದು ವಾಪಸ್ಸು ನೀಡಿರುವ ಭಕ್ತ. ಹಣ ಕಳೆದಿದ್ದ ಸಂಬಂಧ ಮಲೆಮಹದೇಶ್ವರ ಬೆಟ್ಟ ಪೊಲೀಸರಿಗೆ ದೂರು ಕೊಡಲಾಗಿತ್ತು. ಜೊತೆಗೆ, ನಷ್ಟವಾದ ಹಣವನ್ನು ನೌಕರನೇ ತುಂಬುವಂತೆ ಪ್ರಾಧಿಕಾರದ ಅಧಿಕಾರಿಗಳು ತಾಕೀತು ಮಾಡಿದ್ದರು. ಇದಾದ ಬಳಿಕ ಈ ಬಗ್ಗೆ ಸುದ್ದಿ ತಿಳಿದ ನರಸಿಂಹ, ಪುನಃ ದೇಗುಲಕ್ಕೆ ವಾಪಸ್ ಬಂದು, ಮಾದಪ್ಪನ ಹಣವನ್ನು ವಾಪಸ್ ಮರಳಿಸಿದ್ದಾರೆ.

ಮಲೆಮಹದೇಶ್ವರ ಬೆಟ್ಟಕ್ಕೆ ಕೋಟಿ ಕೋಟಿ ಕಾಣಿಕೆ

ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಜೂನ್ 17 ರಂದು ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 2.30 ಕೋಟಿ ರೂ ಸಂಗ್ರಹವಾಗಿದೆ. ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸಾಲೂರು ಬೃಹನ್ಮಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್ತಿನಲ್ಲಿ ಎಣಿಕೆ ಕಾರ್ಯ ಪ್ರಾರಂಭ ಮಾಡಲಾಯಿತು. ಏಣಿಕೆ ಕಾರ್ಯವು 9:00 ಗಂಟೆ ವರೆಗೆ ನಡೆದಿದೆ.

ಇದನ್ನೂ ಓದಿ: Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

ಬೆಟ್ಟಕ್ಕೆ ಭಕ್ತರಿಂದ ಕಾಣಿಕೆ

ಈ ಬಾರಿ ಅಮವಾಸ್ಯೆ ಹಾಗೂ ಸರ್ಕಾರಿ ರಜಾದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಕಳೆದ 35 ದಿನಗಳ ಅವಧಿಯಲ್ಲಿ 2ಕೋಟಿ 3 ಲಕ್ಷದ 25,354 ರೂಪಾಯಿ ಹಾಗೂ 110 ಗ್ರಾಂ ಚಿನ್ನ ಹಾಗೂ 3,560 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ, ಉಪ ಕಾರ್ಯದರ್ಶಿ ಬಸವರಾಜು, ಲೆಕ್ಕಾದೀಕ್ಷಕ ಪ್ರವೀಣ್ ಪಾಟೀಲ್, ದ್ವಿತೀಯ ದರ್ಜೆ ಸಹಾಯಕ ಮಹದೇವಸ್ವಾಮಿ, ಸಿಬ್ಬಂದಿಗಳಾದ ಮಲ್ಲಿಕಾರ್ಜುನಪ್ಪ, ಮಾದೇಶ್ ಎಸ್ ಬಿ ಐ ಬ್ಯಾಂಕ್ ನೌಕರರು ಸೇರಿದಂತೆ ಇತರರು ಹಾಜರಿದ್ದರು.
Published by:Pavana HS
First published: