Crime News: ಹುಬ್ಬಳ್ಳಿಯಲ್ಲಿ ನಿಲ್ಲದ ಚಾಕು ಇರಿತ ಪ್ರಕರಣಗಳು; ಸಹೋದರರಿಗೆ ಚಾಕು ಹಾಕಿದವರ ಬಂಧನ

ಒಂದು ವಾರದ ಹಿಂದೆಯಷ್ಟೇ ಆನಂದ್ ನಗರದಲ್ಲಿ ಸಹೋದರರಿಗೆ ಚಾಕುವಿನಿಂದ ಇರಿಯಲಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು.

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

  • Share this:
ಹುಬ್ಬಳ್ಳಿ : ವಾಣಿಜ್ಯ ನಗರಿ ಇದೀಗ ಅಪರಾಧಿಗಳ ನಗರಿ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಲೆ, ಕಳ್ಳತನ, ಚಾಕು ಇರಿತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲಿಯೂ ಹಳೆ ಹುಬ್ಬಳ್ಳಿ (Hale Hubballi) ಪ್ರದೇಶದಲ್ಲಿ ಅಪರಾಧ ಕೃತ್ಯಗಳ (Crime News) ಪ್ರಮಾಣ ದಿಢೀರ್ ಏರಿಕೆಯಾಗಿದೆ. ಹುಬ್ಬಳ್ಳಿ ಗಲಭೆ ಪ್ರಕರಣದ ನಂತರ ಈ ಪ್ರದೇಶದಲ್ಲಿ ಏಕಾಏಕಿ ಅಪರಾಧ ಕೃತ್ಯಗಳು ಹೆಚ್ಚಾಗಿದ್ದು, ಪೊಲೀಸರಿಗೆ (Police) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹುಬ್ಬಳ್ಳಿಯಲ್ಲಿ (Hubballi) ಮತ್ತೊಂದು ಚಾಕು ಇರಿತ ಪ್ರಕರಣ ಬೆಳಕಿಗೆ ಬಂದಿದೆ. ಹಳೆ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಹೋದರರಿಗೆ ಚಾಕುವಿನಿಂದ ಇರಿಯಲಾಗಿದೆ.

ಮದರ್ಷಾ ಹಾಗೂ ಆತನ ಸಹೋದರ ಮುನಾವರ್ ಚಾಕು ಇರಿತಕ್ಕೊಳಗಾದ ಸಹೋದರರಾಗಿದ್ದಾರೆ. ಮೂರು - ನಾಲ್ಕು ಜನರ ಗುಂಪಿನಿಂದ ಕೃತ್ಯ ನಡೆದಿದೆ ಎಂದು ಸಹೋದದರು ಮಾಹಿತಿ ನೀಡಿದ್ದಾರೆ. ಬೈಕ್ ವಿಚಾರಕ್ಕೆ ಆರಂಭಗೊಂಡ ಜಗಳ ವಿಕೋಪಕ್ಕೆ ಹೋಗಿ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.

ಚಾಕುವಿನಿಂದ ಇರಿದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು. ಗಾಯಾಳುಗಳು ನೀಡಿದ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡ ಕೆಲ ಗಂಟೆಗಳಲ್ಲಿಯೂ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಕಸಬಾಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:  Selfie Suicide: ಹುಡುಗಿ ಕೈಕೊಟ್ಟಳು ಅಂತ ವಿಷ ಕುಡಿದ ಯುವಕ! ಸೆಲ್ಫಿ ವಿಡಿಯೋ ಮಾಡಿ ಸೂಸೈಡ್‌

ಚಾಕು ಇರಿದ ಆರೋಪಿಗಳ ಬಂಧನ

ಸಾಧಿಕ್ ಅನ್ವರ್ ಹಾಗೂ ಅಲ್ತಾಫ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಚಾಕು ಇರಿದು ಅಟ್ಟಹಾಸ ಮೆರೆದಿದ್ದ ಆರೋಪಿಗಳನ್ನು ಬಂಧಿಸಿ, ಘಟನಾ ಸ್ಥಳಕ್ಕೆ ಕರೆತಂದು ಪಂಚನಾಮೆಯನ್ನೂ ಮಾಡಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆತಂಕದಲ್ಲಿ ಹುಬ್ಬಳ್ಳಿ ಜನತೆ

ಒಂದು ವಾರದ ಹಿಂದೆಯಷ್ಟೇ ಆನಂದ್ ನಗರದಲ್ಲಿ ಸಹೋದರರಿಗೆ ಚಾಕುವಿನಿಂದ ಇರಿಯಲಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು. ಇದಾದ ನಂತರ ಮೊನ್ನೆಯಷ್ಟೇ ಯುವತಿಯನ್ನು ಚುಡಾಯಿಸಿದನೆಂದು ಆಟೋ ಚಾಲಕನಿಗೆ ಸಹೋದರರು ಚಾಕುವಿನಿಂದ ಇರಿದ ಘಟನೆ ನಡೆದಿತ್ತು.

ಎರಡೂ ಪ್ರಕರಣಗಳು ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದವು. ಚಾಕುವಿನಿಂದ ಇರಿತಕ್ಕೊಳಗಾಗಿದ್ದ ಆಟೋ ಚಾಲಕ ಸಾವನ್ನಪ್ಪಿರೋ ಘಟನೆ ಹಸಿರಾಗಿರುವಾಗಲೇ ಈ ಘಟನೆ ನಡೆದಿದೆ. ಇದರಿಂದಾಗಿ ಹುಬ್ಬಳ್ಳಿ ಜನತೆಯಲ್ಲಿ ಆತಂಕ ಉಂಟಾಗಿದ್ದು, ಕಾನೂನು ಸುವ್ಯವಸ್ಥೆ ನಿಯಂತ್ರಿಸೋಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಕಿಡ್ನ್ಯಾಪ್ ಆಗಿದ್ದ ಗೃಹಿಣಿಯನ್ನು ಪತಿ ಜೊತೆ ಕಳಿಸಿದ ಪೊಲೀಸರು

ಪೋಷಕರಿಂದಲೇ ಯುವತಿ ಕಿಡ್ನಾಪ್ ಪ್ರಕರಣದ ಬೆನ್ನು ಹುತ್ತಿದ ಹುಬ್ಬಳ್ಳಿ ಪೊಲೀಸರು ಕೊನೆಗೂ ಯುವತಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಗೋವಾದಲ್ಲಿ ಯುವತಿಯನ್ನು ಪತ್ತೆ ಮಾಡಿರೋ ಗೋಕುಲ ರೋಡ್ ಠಾಣೆ ಪೊಲೀಸರು, ನಗರಕ್ಕೆ ಕರೆತಂದಿದ್ದಾರೆ.

ಪೋಷಕರ ಜೊತೆ ಗೋವಾದ ಮನೆ ಒಂದರಲ್ಲಿ ಯುವತಿ ಪತ್ತೆಯಾಗಿದ್ದಾಳೆ. ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರು ಸೇರಿದಂತೆ ಮೂವರ ಮೇಲೆ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಚೇತನ್ ಹಿರೇಕೆರೂರನನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ವಿಚಾರಣೆ ನಡೆಸುವ ಸಂದರ್ಭದಲ್ಲಿ ಸದಸ್ಯನ ಬೆಂಬಲಿಗರು ಪೊಲೀಸ್ ಠಾಣೆ ಎದುರು ಹೈಡ್ರಾಮಾ ಮಾಡಿದ್ದರು. ವಿಚಾರಣೆ ನಂತರ ಚೇತನ್ ಹಿರೇಕೆರೂರನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರು.

ಇದನ್ನೂ ಓದಿ: Belagavi: ನಮ್ಮೂರಿನ ಸ್ಮಶಾನಕ್ಕಿಲ್ಲ ದಾರಿ; ಡಿಸಿ ಕಚೇರಿಯಲ್ಲೇ ಮೃತದೇಹ ಅಂತ್ಯಕ್ರಿಯೆಗೆ ಯತ್ನ

ಗೋಕುಲ್ ರೋಡ್ ಠಾಣೆಗೆ ಯುವತಿ ಸಹನಾಳನ್ನು ಕರೆ ತಂದ ಪೊಲೀಸರು ಆಕೆಯ ವಿಚಾರಣೆ ನಡೆಸಿದ ನಂತರ ಪತಿ ನಿಖಿಲ್ ದಾಂಡೇಲಿ ಜೊತೆ ಕಳುಹಿಸಿಕೊಟ್ಟಿದ್ದಾರೆ. ನಿಖಿಲ್ ದಾಂಡೇಲಿ ಮತ್ತು ಸಹನಾಳ ಅರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದಕ್ಕೂ ಮುಂಚಿತವಾಗಿ ಪೋಷಕರಿಗೆ ಆಹ್ವಾನ ಪತ್ರ ನೀಡಲು ಹೋದಾಗ ಸಹನಾ ನಾಪತ್ತೆಯಾಗಿದ್ದಳು.

ಸಹನಾಳ ಪತಿ ನಿಖಿಲ್ ದಾಂಡೇಲಿ ಪೋಷಕರು ಮತ್ತು ಕಾರ್ಪೊರೇಟರ್ ವಿರುದ್ಧ ದೂರು ನೀಡಿದ್ದ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
Published by:Mahmadrafik K
First published: