ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಕೋಲಾರದಿಂದ (Kolar) ಸ್ಪರ್ಧೆ ಮಾಡುವ ವಿಚಾರವಾಗಿ ಸಚಿವ ಎಸ್.ಟಿ.ಸೋಮಶೇಖರ್ (Minister ST Somashekhar) ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯರವರು ಈಗಲೂ ಕೂಡ ಹೈಕಮಾಂಡ್ (High command) ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿದ್ರೆ ಹೈಕಮಾಂಡ್ ಅವರ ಮಾತು ಕೇಳುತ್ತದೆ. ಅದ್ರೂ ಅವರು ಬಚಾವ್ ಅಗೋಕೆ ಈ ರೀತಿಯಾಗಿ ಹೇಳ್ತಿದ್ದಾರೆ ಎಂದು ಟಾಂಗ್ ನೀಡಿದರು.ಮೊದಲು ಚಾಮರಾಜಪೇಟೆ (Chamarajapet), ಆ ಮೇಲೆ ವರುಣ (Varuna) ಅಂದರು. ಈಗ ಕೋಲಾರ ಅಂತಿದ್ದಾರೆ. ಸಚಿವ ಸುಧಾಕರ್ (Minister Sudhakar) ಅವರ ನಡೆ ಮೇಲೆ ಸಿದ್ದರಾಮಯ್ಯ ಅವರ ಸೋಲು ಗೆಲವು ನಿಂತಿದೆ ಎಂದು ಹೇಳಿದರು.
ಸುಧಾಕರ್ ಅವರ ರಿಯಾಕ್ಷನ್ ಆಧರಿಸಿ ಸಿದ್ದರಾಮಯ್ಯ ಅವರ ನಡೆ ಇರುತ್ತದೆ. ಸುಧಾಕರ್ ಮನಸ್ಸು ಮಾಡಿದ್ರೆ ಕೋಲಾರದಲ್ಲೂ ಸಿದ್ದರಾಮಯ್ಯ ಅವರಿಗೆ ಸೋಲು ಖಚಿತ ಎಂದು ಹೇಳಿದರು.
ಸ್ಯಾಂಟ್ರೋ ರವಿ ಗೊತ್ತಿಲ್ಲ
ಸ್ಯಾಂಟ್ರೋ ರವಿ ಯಾರು ಅನ್ನೋದು ಗೊತ್ತಿಲ್ಲ. ನಮ್ಮ ಜೊತೆ ಸಾಕಷ್ಟು ಜನ ಫೋಟೋ ತೆಗೆದುಕೊಳ್ಳುತ್ತಾರೆ. ಅವರೆಲ್ಲರ ಪೂರ್ವಪರ ವಿಚಾರಿಸೋಕೆ ಅಗೊಲ್ಲ ಇಲ್ಲೂ ಸಾಕಷ್ಟು ಜನ ಫೋಟೋ ತೆಗೆದುಕೊಂಡರು. ನಾವು ಪೊಟೋ ಕೊಟ್ಟಿಲ್ಲ ಅಂದ್ರೆ ಸಚಿವರಿಗೆ ಅಹಂಕಾರ ಎಂದು ಹೇಳಿ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನನ್ನ ಮತ್ತು ಸುಧಾಕರ್ ಅವರನ್ನ ಮೊದಲೇ ಟಾರ್ಗೆಟ್ ಮಾಡಿದ್ದಾರೆ. ಅವರು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಬೆಳೆಯುವ ನಾಯಕರನ್ನ ಟಾರ್ಗೆಟ್ ಮಾಡ್ತಾರೆ. ಅವರು ಟಾರ್ಗೆಟ್ ಮಾಡಿದಷ್ಟು ನಾವು ಬೆಳೆಯುತ್ತೇವೆ. ಸುಮಾರು ವರ್ಷದಿಂದ ಅವರು ನಮ್ಮನ್ನ ಟಾರ್ಗೆಟ್ ಮಾಡಿಕೊಂಡು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸುಧಾಕರ್ ಬಗ್ಗೆ ಮೆಚ್ಚುಗೆ ಮಾತು
ತೋಟಗಾರಿಕೆ ಇಲಾಖೆಯ ಮಾಹಿತಿ ಕೇಂದ್ರ ಮತ್ತು ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ನರೇಗಾ ಕಾರ್ಯಕ್ರಮದ ಎಲ್ಲಾ ಯೋಜನೆಗಳನ್ನ ಸಂಪೂರ್ಣವಾಗಿ ತಿಳಿಸಿದ್ದಾರೆ. ನರೇಗಾ ಯೋಜನೆಯನ್ನ ತಮ್ಮ ಕ್ಷೇತ್ರದಲ್ಲಿ ಅಚ್ಚುಕಟ್ಟಾಗಿ ಜಾರಿಗೆ ತಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನ ಕೂಡ ತಮ್ಮ ಕ್ಷೇತ್ರದಲ್ಲಿ ಅನುಷ್ಠಾನ ಮಾಡಿದ್ದಾರೆ ಎಂದರು.
ಕೋವಿಡ್ ಸಮಯದಲ್ಲಿ ರಾಜ್ಯವನ್ನ ಸುತ್ತಾಟ ಮಾಡಿದ್ರೂ ಕೂಡ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ರೀತಿಯ ಉತ್ಸವವನ್ನ ನಡೆಸೋದು ತಮಾಷೆಯ ಮಾತಲ್ಲ. ಸುಧಾಕರ್ ಅವರ ಸಂಘಟನಾ ಚತುರತೆಗೆ ಹಿಡಿದ ಕೈಗನ್ನಡಿ ಎಂದು ಹೇಳಿದರು.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಮಾಜಿ ಸಿಎಂ ಹೆಚ್ಡಿಕೆ ಪ್ರತಿಕ್ರಿಯಿಸಿದ್ದಾರೆ. ಅಟ್ಲೀಸ್ಟ್ ಕೊನೆಗೂ ಸಿದ್ದರಾಮಯ್ಯ ಒಂದು ಕ್ಷೇತ್ರದಲ್ಲಿ ನಿಲ್ಲೋದಾಗಿ ಘೋಷಿಸಿದ್ದಾರೆ. ಒಬ್ಬ ಮಾಜಿ ಸಿಎಂ ಬಗ್ಗೆ ಬಿಜೆಪಿಯವರು ಮಾತಾಡೋದು ಈಗ ತಪ್ಪುತ್ತೆ ಅಂದು ವ್ಯಂಗ್ಯ ಮಾಡಿದರು. ಇನ್ನು ನಮ್ಮ ಅಭ್ಯರ್ಥಿ ಕೂಡ ಕೋಲಾರದಲ್ಲಿ ಸ್ಪರ್ಧಿಸುತ್ತಾರೆ. ರಾಜ್ಯದಲ್ಲಿ 123 ಸೀಟ್ ಗೆಲ್ಲುವ ಗುರಿ ಕೋಲಾರದಿಂದಲೇ ಆರಂಭ ಮಾಡ್ತೇವೆ ಅಂತಾ ತಿಳಿಸಿದರು.
ಇದನ್ನೂ ಓದಿ: PM Modi: ಬಿಜೆಪಿಯ ಲಕ್ಕಿ ಗ್ರೌಂಡ್ನಲ್ಲಿ ಮೋದಿ ಕಾರ್ಯಕ್ರಮ; ವಾಜಪೇಯಿ ಪಿಎಂ ಆಗಿದ್ದಾಗಲೂ ಇಲ್ಲಿಗೆ ಬಂದಿದ್ರು!
ಸಿದ್ದು ವಿರುದ್ಧ ನಾನೇ ಗೆಲ್ಲೋದು: ವರ್ತೂರು ಪ್ರಕಾಶ್
ಕೋಲಾರದಲ್ಲಿ ನಮ್ಮ ಪ್ರಚಾರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ನನ್ನ ಗೆಲುವು ನಿಶ್ಚಿತ ಅಂತಾ ಬಿಜೆಪಿ ಟಿಕೆಟ್ ಆಕಾಂಕ್ಷಿ ವರ್ತೂರು ಪ್ರಕಾಶ್ ಹೇಳಿದ್ದಾರೆ. ಇನ್ನು, ಸಿದ್ದರಾಮಯ್ಯ ಸ್ಪರ್ಧೆ ವಿರುದ್ಧ, ಮುಂದಿನ ರೂಪುರೇಷೆಯನ್ನ ಬಿಜೆಪಿ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚಿಸುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ