ಕಾಂಗ್ರೆಸ್​​ನವರ ಆರೋಪ ನಿಜವಾದರೆ ನಾಮಪತ್ರ ವಾಪಸ್​ ಪಡೆಯುತ್ತೇನೆ; ಎಸ್​.ಟಿ.ಸೋಮಶೇಖರ್​

ನಾನು ಎಲ್ಲರಿಗೂ ಮನವಿ ಮಾಡಿದ್ದೇನೆ. ಬಲವಂತವಾಗಿ ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ. ಬಿಲ್ ಪೆಂಡಿಂಗ್ , ಕಾಂಟ್ರಾಕ್ಟ್ ಸೇರಿದಂತೆ ಯಾವುದನ್ನೂ ನಿಲ್ಲಿಸಿಲ್ಲ. ಒಂದೇ ಒಂದು ನಿದರ್ಶನ ತೋರಿಸಲಿ- ಸೋಮಶೇಖರ್ ಸವಾಲು

Latha CG | news18-kannada
Updated:November 21, 2019, 3:10 PM IST
ಕಾಂಗ್ರೆಸ್​​ನವರ ಆರೋಪ ನಿಜವಾದರೆ ನಾಮಪತ್ರ ವಾಪಸ್​ ಪಡೆಯುತ್ತೇನೆ; ಎಸ್​.ಟಿ.ಸೋಮಶೇಖರ್​
ಎಸ್​.ಟಿ. ಸೋಮಶೇಖರ್​
  • Share this:
ಬೆಂಗಳೂರು(ನ.21): ಬಿಜೆಪಿ ಅಭ್ಯರ್ಥಿಯಾಗಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅನರ್ಹ ಶಾಸಕ ಎಸ್​.ಟಿ.ಸೋಮಶೇಖರ್​ ಮೇಲೆ ಕಾಂಗ್ರೆಸ್​ ಗಂಭೀರ ಆರೋಪ ಮಾಡಿದೆ. ಆರೋಪಕ್ಕೆ ತಿರುಗೇಟು ನೀಡಿರುವ ಅನರ್ಹ ಶಾಸಕ ಎಸ್​.ಟಿ.ಸೋಮಶೇಖರ್​ ಕಾಂಗ್ರೆಸ್​ ನಾಯಕರಿಗೆ ಸವಾಲು ಹಾಕಿದ್ದಾರೆ. "ನಾನು ಬ್ಲಾಕ್ ಮೇಲ್ ಮಾಡಿ ಮತಯಾಚನೆ ಮಾಡುತ್ತಿದ್ದೇನೆ ಎನ್ನುವ ಕಾಂಗ್ರೆಸ್​ನವರ ಆರೋಪ ನಿಜವಾದರೆ ಇಂದೇ ನಾಮಪತ್ರ ವಾಪಸ್ ಪಡೆಯುತ್ತೇನೆ," ಎಂದು ಸವಾಲು ಹಾಕಿದ್ದಾರೆ.

"ನಾನು ಎಲ್ಲರಿಗೂ ಮನವಿ ಮಾಡಿದ್ದೇನೆ. ಬಲವಂತವಾಗಿ ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ. ಬಿಲ್ ಪೆಂಡಿಂಗ್ , ಕಾಂಟ್ರಾಕ್ಟ್ ಸೇರಿದಂತೆ ಯಾವುದನ್ನೂ ನಿಲ್ಲಿಸಿಲ್ಲ. ಒಂದೇ ಒಂದು ನಿದರ್ಶನ ತೋರಿಸಲಿ," ಎಂದು ಕಾಂಗ್ರೆಸ್​​ಗೆ ಅನರ್ಹಹ ಶಾಸಕ ಎಸ್.ಟಿ ಸೋಮಶೇಖರ್ ಸವಾಲು ಎಸೆದಿದ್ದಾರೆ.

ಬ್ರಿಟಿಷ್ ಪೆಟ್ರೋಲಿಯಂ ಹಿಂದಿಕ್ಕಿ ವಿಶ್ವದ 6ನೇ ಅತಿದೊಡ್ಡ ಆಯಿಲ್ ಕಂಪನಿ ಪಟ್ಟಕ್ಕೇರಿದ ರಿಲಯನ್ಸ್​ ಇಂಡಸ್ಟ್ರೀಸ್

ಇದೇ ವೇಳೆ ಮಾತನಾಡಿದ ಚಿತ್ರನಟ, ಬಿಜೆಪಿ ನಾಯಕ ಜಗ್ಗೇಶ್​​​, "17 ಜನರ ತ್ಯಾಗಕ್ಕಾಗಿ ಪಾದಗಳಿಗೆ ನಮಸ್ಕಾರ ಮಾಡಬೇಕಿದೆ. ಈಗ ಮೋದಿ ನಾಯಕತ್ವವಿದೆ. ಹೀಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಮೇಲೊಂದು, ಒಳಗೊಂದು ಆಲೋಚನೆ ಬೇಡ. ಎಲ್ಲರೂ ಯಡಿಯೂರಪ್ಪ ನೇತೃತ್ವದಲ್ಲಿ ಕೆಲಸ ಮಾಡಬೇಕಿದೆ. ಇವರನ್ನೆಲ್ಲ ನಮ್ಮವರು ಎಂದು ಒಪ್ಪಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕರ್ತರು ನಿಜವಾದ ಸ್ಟಾರ್ ಕ್ಯಾಂಪೇನರ್. ಪಟ್ಟಿ ಹಾಕಿಕೊಳ್ಳುವ ನಾವು ಸ್ಟಾರ್ ನಾವಲ್ಲ. ನನಗೆ ಆಸೆ ಇಲ್ಲ , ಅಧಿಕಾರ ಬೇಕು ಎನ್ನುವ ಹಪಾಹಪಿ ಇಲ್ಲ. ಕಲಾಭಿಮಾನಿಗಳು ಕೈ ಬಿಟ್ಟಾಗ ಮಾತ್ರ ನನಗೆ ನೋವಾಗುತ್ತದೆ. ಎಸ್​.ಟಿ.ಸೋಮಶೇಖರ್ ಬಿಜೆಪಿಗೆ ಬಂದಿದ್ದಾರೆ.   ಇನ್ನು ಈ ಕ್ಷೇತ್ರದಲ್ಲಿ ಸೋಲು ಇರುವುದಿಲ್ಲ. ಸೋಮಶೇಖರ್ ಗೆಲುವಿಗಾಗಿ  ಆತ್ಮಸಾಕ್ಷಿಯಾಗಿ ರಾಯರ ಬಳಿ ಪ್ರಾರ್ಥನೆ ಮಾಡಿದ್ದೇನೆ. ನನಗೆ ಯಾವುದೇ ಸ್ಥಾನಮಾನ ಬೇಡ ದೊರೆ. ಕರ್ನಾಟಕ ಜನ 'ನವರಸ ನಾಯಕ' ಎಂದು ಬಿರುದು ಕೊಟ್ಟಿದ್ದಾರೆ. ಅದೇ ನನಗೆ ಸಾಕು. ಪಕ್ಷದಲ್ಲಿ ಬದಲಿ ಸ್ಥಾನ ಬಗ್ಗೆ ಏನು ಹೇಳಿಲ್ಲ. ಸೋಮಶೇಖರ್​ ಅವರನ್ನು ಗೆಲ್ಲಿಸಿ, ಶಾಸಕರಾಗಿ ಬಳಿಕ ಮಂತ್ರಿ ಆಗುತ್ತಾರೆ ಎಂದರು.

‘ಕರ್ನಾಟಕ ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ಒಂಟಿ ಸಲಗ‘: ಸಚಿವ ವಿ. ಸೋಮಣ್ಣ

First published: November 21, 2019, 3:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading