SSLC Result: ನಾಳೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರ್ಕಾರ ಅಧಿಕೃತ ವೆಬ್​ ಸೈಟ್​ https://karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿದ ಫೋನ್ ನಂಬರ್‌ಗಳಿಗೆ ಎಸ್ಎಂಎಸ್ ಮೂಲಕ ಫಲಿತಾಂಶದ ಸಂದೇಶ ಬರಲಿದೆ.

  • News18 Kannada
  • 5-MIN READ
  • Last Updated :
  • Karnataka
  • Share this:

ಬೆಂಗಳೂರು (ಜು.20): ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ (SSLC Supplementary Exam Result) ಪ್ರಕಟವಾಗಲಿದೆ . 2022ರ ಜೂನ್ 27ರಿಂದ ಜುಲೈ 4ರ ವರೆಗೆ ಎಸ್‌ಎಸ್ಎಲ್‌ಸಿ ಪೂರಕ ಪರೀಕ್ಷೆ ನಡೆದಿತ್ತು.  ಈ ಬಾರಿ 37,479 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (B.C Nagesh) ಮಾಹಿತಿ ನೀಡಿದ್ದಾರೆ. ಪೂರಕ ಪರೀಕ್ಷೆಗೆ 94,669 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅವರಲ್ಲಿ ಶೇ.39.59 ರಷ್ಟು ಉತ್ತೀರ್ಣರಾಗಿದ್ದಾರೆ. ನಾಳೆ ಮಧ್ಯಾಹ್ನ 12 ಗಂಟೆ ನಂತರ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಸರ್ಕಾರ ಅಧಿಕೃತ ವೆಬ್​ ಸೈಟ್​ https://karresults.nic.in/ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿದ ಫೋನ್ ನಂಬರ್‌ಗಳಿಗೆ ಎಸ್ಎಂಎಸ್ ಮೂಲಕ ಫಲಿತಾಂಶದ (Result) ಸಂದೇಶ ಬರಲಿದೆ.


ಫಲಿತಾಂಶ ನೋಡುವುದು ಹೇಗೆ?


karresults.nic.in ಈ ಅಧಿಕೃತ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಹಾಲ್‌ ಟಿಕೆಟ್‌ ನಂಬರ್‌ ನಮೂದಿಸಿದರೆ ಸಾಕು, ಫಲಿತಾಂಶದ ವಿವರ ಪ್ರಕಟವಾಗಲಿದೆ. ಕೆಲವೊಮ್ಮ ಒಂದೇ ಸಲ ಎಲ್ಲಾ ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡುವ ಕಾರಣಕ್ಕೆ, ಸರ್ವರ್‌ ಬ್ಯುಸಿ ಆಗಿ ಫಲಿತಾಂಶ ತೋರಿಸದಿದ್ದರೂ ವಿದ್ಯಾರ್ಥಿಗಳು ಭಯ ಪಡದೆ, ಮತ್ತೊಮ್ಮೆ ಪ್ರಯತ್ನಿಸಿ. ಇಲ್ಲವೇ ಮಧ್ಯಾಹ್ನ ವೇಳೆಗೆ ಫಲಿತಾಂಶದ ವಿವರಗಳನ್ನು ಎಲ್ಲಾ ಶಾಲೆಗಳಿಗೂ ರವಾನಿಸಲಾಗಿರುತ್ತದೆ. ನೀವು ನಿಮ್ಮ ಶಾಲೆಗೆ ತೆರಳಿ ಫಲಿತಾಂಶವನ್ನು ನೋಡಬಹುದು.


ಫಲಿತಾಂಶವನ್ನು ಈ ರೀತಿ ಚೆಕ್ ಮಾಡಿ


ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ karresults.nic.in ಗೆ ಭೇಟಿ ನೀಡಿ. ಬಳಿಕ ಓಪನ್‌ ಆದ ಪೇಜ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ಟೈಪ್‌ ಮಾಡಿ. ನಂತರ 'Submit' ಎಂಬಲ್ಲಿ ಕ್ಲಿಕ್ ಮಾಡಿ. ಅಲ್ಲಿ ಫಲಿತಾಂಶದ ಪೇಜ್‌ ಓಪನ್‌ ಆಗುತ್ತದೆ. ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿ ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಿ.


ಇದನ್ನೂ ಓದಿ: SSLC ಬಳಿಕ ಮುಂದ್ಯಾವ ಕೋರ್ಸ್? ಇಲ್ಲಿವೆ ಓದಿ ವಿದ್ಯಾರ್ಥಿಗಳಿಗೆ ಸಲಹೆ


ಶೇಕಡಾ 85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಮೇ 6 ರಂದು ಪ್ರಕಟಗೊಂಡಿದ್ದ  SSLC ಪರೀಕ್ಷೆಯಲ್ಲಿ ಶೇಕಡಾ 85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.  ಶೇ. 90.29ರಷ್ಟು ಬಾಲಕಿಯರು, ಶೇ. 81.30ರಷ್ಟು ಬಾಲಕರು ಪಾಸ್ ಆಗಿದ್ದಾರೆ. ಒಟ್ಟೂ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದರು
145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಮಾರ್ಕ್ಸ್ಒಟ್ಟು 145 ಮಂದಿ ಈ ಬಾರಿ 625ಕ್ಕೆ 625 ಅಂಕ ಪಡೆದು,  ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಬಾರಿಯೂ ಫಲಿತಾಂಶದಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು  ಮೆಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದ ಶೇಕಡಾ 91.32ರಷ್ಟು ವಿದ್ಯಾರ್ಥಿಗಳು ಹಾಗೂ ನಗರ ಪ್ರದೇಶದ  ಶೇಕಡಾ 86.64ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರು.


ಈ ಬಾರಿ ಪರಿಪೂರ್ಣ ಅಂಕ ಅಂದರೆ 625ಕ್ಕೆ 625 ಅಂಕಗಳನ್ನು 145 ಮಕ್ಕಳು ಪಡೆದಿದ್ದಾರೆ. ಈ ಪೈಕಿ 21 ಸರ್ಕಾರಿ ಶಾಲೆ, 8 ಅನುದಾನಿತ ಶಾಲೆ ಹಾಗೂ 116 ಖಾಸಗಿ ಶಾಲೆಗಳ ಮಕ್ಕಳು ಪೂರ್ಣ ಅಂಕ ಪಡೆದಿದ್ದಾರೆ.


ಇದನ್ನೂ ಓದಿ: PU Admission: ಪಿಯು ದಾಖಲಾತಿಗೆ ಬೇಡಿಕೆ ಹೆಚ್ಚಳ; ಬ್ಲಾಕ್ ನಲ್ಲಿ ಸೀಟ್ ಮಾರಾಟದ ಆರೋಪ?


ಈ ಬಾರಿ ಜಿಲ್ಲೆಗಳಿಗಿಲ್ಲ ಸ್ಥಾನ


ಈ ಬಾರಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಅಂತಿಮ ಅಂತ  ಜಿಲ್ಲೆಗಳಿಗೆ ಗ್ರೇಡ್ ನೀಡಲಾಗಿಲ್ಲ. ಬದಲಾಗಿ ಎ, ಬಿ, ಸಿ ಅಂತ ಗ್ರೇಡ್ ನೀಡಲಾಗಿದೆ. 32 ಶೈಕ್ಷಣಿಕ ಜಿಲ್ಲೆಗಳಿಗೆ A grade, 2 ಶೈಕ್ಷಣಿಕ ಜಿಲ್ಲೆಗೆ B Grade ನೀಡಲಾಗಿದೆ.


Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು