• Home
  • »
  • News
  • »
  • state
  • »
  • Crime News: ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತು; ವಿಷ ಸೇವಿಸಿ ಸಾವಿಗೆ ಶರಣಾದ ಎಸ್​ಎಸ್​​ಎಲ್​ಸಿ ವಿದ್ಯಾರ್ಥಿ

Crime News: ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತು; ವಿಷ ಸೇವಿಸಿ ಸಾವಿಗೆ ಶರಣಾದ ಎಸ್​ಎಸ್​​ಎಲ್​ಸಿ ವಿದ್ಯಾರ್ಥಿ

ಮೃತ ಉದಯ್​ ಕುಮಾರ್

ಮೃತ ಉದಯ್​ ಕುಮಾರ್

ಹೊಸಬಟ್ಟೆ ಕೊಳ್ಳಲಿಲ್ಲ, ಬೈಕ್ ಕೊಳ್ಳಲಿಲ್ಲ, ಗೆಳತಿ ಪ್ರೀತಿಯನ್ನು ತಿರಸ್ಕರಿಸಿದಳು ಎಂಬ ಮೂರ್ಖ ಕಾರಣಗಳಿಂದ ನೂರಾರು ವರ್ಷಗಳ ಬದುಕನ್ನು ಕೊನೆಗೊಳಿಸಿಕೊಳ್ಳುತ್ತಿದ್ದಾರೆ.

  • Share this:

ಕೋಲಾರ: ಈಗಿನ ಯುವ ಜನಾಂಗದ ಮಕ್ಕಳು, ಯುವ ಸಮುದಾಯ (Young Generation) ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಿದೆ. ಮನೆಯವರು ಸ್ವಾತಂತ್ರ್ಯ ಕೊಡಲಿಲ್ಲ ಎಂದು ಅವರ ಮೇಲೆ ಸಿಟ್ಟು ಮಾಡಿಕೊಳ್ಳುವುದು. ಏನೇ ಮಾಡಿದರೂ ಎಲ್ಲವನ್ನೂ ಪ್ರಶ್ನಿಸುತ್ತಿದ್ದಾರೆ ಎಂದು ಅಸಮಾಧಾನಗೊಳ್ಳುವುದು. ಸೇರಿದಂತೆ ಸಣ್ಣ ಪುಟ್ಟ ವಿಷಯಗಳಿಗೂ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹೊಸಬಟ್ಟೆ ಕೊಳ್ಳಲಿಲ್ಲ, ಬೈಕ್ ಕೊಳ್ಳಲಿಲ್ಲ, ಗೆಳತಿ ಪ್ರೀತಿಯನ್ನು ತಿರಸ್ಕರಿಸಿದಳು ಎಂಬ ಮೂರ್ಖ ಕಾರಣಗಳಿಂದ ನೂರಾರು ವರ್ಷಗಳ ಬದುಕನ್ನು ಕೊನೆಗೊಳಿಸಿಕೊಳ್ಳುತ್ತಿದ್ದಾರೆ. ಇಂತಹದ್ದೇ ಸಣ್ಣ ವಿಚಾರಕ್ಕೆ ಎಸ್​​ಎಸ್​ಎಲ್​​ಸಿ ಓದುತ್ತಿದ್ದ (SSLC Student)ವಿದ್ಯಾರ್ಥಿಯೋರ್ವ ಸಾವಿಗೆ ಶರಣಾಗಿರುವ ಘಟನೆ ಕೋಲಾರ (Kolar) ಜಿಲ್ಲೆಯಲ್ಲಿ ನಡೆದಿದೆ.


ಉದಯ್​ ಕುಮಾರ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಘಟನೆ ನಡೆದಿದೆ. ಪೋಷಕರು ಮಗನಿಗೆ ಬುದ್ದಿವಾದ ಹೇಳಿದ ಹಿನ್ನೆಲೆ ವಿಷ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾತಿಕಲ್ ಬಳಿ ಇರುವ ಸರ್ಕಾರಿ ಆದರ್ಶ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉದಯ್​ ಕುಮಾರ್​, ಸೋಮವಾರ ವಡ್ಡಹಳ್ಳಿ ಸಮೀಪ ವಿಷ ಸೇವಿಸಿದ್ದನಂತೆ.


ಬಳಿಕ ಅಲ್ಲಿಂದ ಮನೆಗೆ ಬಂದು ವಾಂತಿ ಮಾಡಿಕೊಂಡ ವೇಳೆ ವಿಷ ಸೇವನೆ ಮಾಡಿರೋದು ಗೊತ್ತಾಗಿದೆ. ಕೂಡಲೇ ಪೋಷಕರು ಬಾಲಕನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಈ ಸಂಬಂಧ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: Bengaluru Student Death: ಕಾಲೇಜು ವಿದ್ಯಾರ್ಥಿನಿ ಕೊಲೆ ಕೇಸ್​​ಗೆ ಟ್ವಿಸ್ಟ್; ಕೊಲೆಗೆ ಸ್ಕೆಚ್​​ ಹಾಕಿ ಕಾಲೇಜಿಗೆ ಎಂಟ್ರಿ ಕೊಟ್ಟಿದ್ದ ಪವನ್ ಕಲ್ಯಾಣ್


ಆ್ಯಂಬುಲೆನ್ಸ್ ಪಲ್ಟಿ


ರೋಗಿಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿ; ಓರ್ವ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ


ರೋಗಿಯನ್ನು ಆಸ್ಪತ್ರೆ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿಯಾದ ಹಿನ್ನೆಲೆಯಲ್ಲಿ ವಾಹನದಲ್ಲಿದ್ದ ರೋಗಿ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಕುಮಟ ತಾಲೂಕಿನ ಬೆಟ್ಕುಳಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ ನಡೆದಿದೆ. ಇನ್ನು ಆ್ಯಂಬುಲೆನ್ಸ್​ನಲ್ಲಿದ್ದ (Ambulance) ಮೂವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.


ಮೃತ ವ್ಯಕ್ತಿಯನ್ನು ಮನೋಜ ದತ್ತಾತ್ರೇಯ ಗುರವ್ (50) ಎಂದು ಗುರುತಿಸಲಾಗಿದ್ದು, ಕಾರವಾರ ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ದುರ್ಘಟನೆ ನಡೆದಿದೆ. ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯಲು ಮಂಗಳೂರಿನ ಕೆಎಸ್​​ ಹೆಗಡೆ ಆಸ್ಪತ್ರೆಗೆ ದಾಖಲಿಸುವ ಹೋಗುತ್ತಿದ್ದ ವೇಳೆ ಘಟನೆ ನಡೆದಿದ್ದು, ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅಪಘಾತದ ದೃಶ್ಯ


ರಾ.ಹೆ 7ರಲ್ಲಿ ಸರಣಿ ಅಪಘಾತ; ಏಳು ಕಾರುಗಳು ಜಖಂ


ರಾಷ್ಟ್ರೀಯ ಹೆದ್ದಾರಿ 7 ರಲ್ಲಿ (National Highway 07) ಸರಣಿ ಅಪಘಾತ ಸಂಭವಿಸಿ 7 ಕಾರುಗಳು ಜಖಂಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ನಡೆದಿದೆ. ಟಿಪ್ಪರ್ ಲಾರಿ ಚಾಲಕ 7 ವಾಹನಗಳಿಗೆ ಡಿಕ್ಕಿ ಹೊಡೆಸಿದ್ದು, ಬಿಎಂಡಬ್ಲ್ಯೂ, ಥಾರ್, ಇಟಿಯೋಸ್ ಲಿವಾ, ಸ್ಯಾಂಟ್ರೋ, ಇಂಡಿಕಾ, ಸ್ವಿಫ್ಟ್ ಕಾರುಗಳು ಜಖಂಗೊಂಡಿದೆ.


ಇದನ್ನೂ ಓದಿ: Janardhana Reddy: ಜನಾರ್ದನ ರೆಡ್ಡಿ ಪಕ್ಷದ ಕಾರ್ಯಕರ್ತರಿಗೆ ಫ್ರೀ ಪೆಟ್ರೋಲ್! ಸಿಂಧನೂರಿನಲ್ಲಿ ಭರ್ಜರಿ ಸ್ವಾಗತ ಕೋರಿದ ಕಾರ್ಯಕರ್ತರು


ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಅಪಘಾತವಾಗುತ್ತಿದ್ದಂತೆ ಟಿಪ್ಪರ್ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಟಿಪ್ಪರ್ ಲಾರಿ ವಾಹನವನ್ನು ವಶಕ್ಕೆ ಪಡೆದ‌ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುರ್ಘಟನೆಯಲ್ಲಿ ಅದೃಷ್ಟವಶಾತ್ 7 ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು