• Home
  • »
  • News
  • »
  • state
  • »
  • Bengaluru: ಕಾಪಿ ಮಾಡಿದ್ದಕ್ಕೆ ಹೊರಗೆ ಹಾಕಿದ ಶಿಕ್ಷಕರು; 13ನೇ ಮಹಡಿಯಿಂದ ಹಾರಿದ SSLC ವಿದ್ಯಾರ್ಥಿ

Bengaluru: ಕಾಪಿ ಮಾಡಿದ್ದಕ್ಕೆ ಹೊರಗೆ ಹಾಕಿದ ಶಿಕ್ಷಕರು; 13ನೇ ಮಹಡಿಯಿಂದ ಹಾರಿದ SSLC ವಿದ್ಯಾರ್ಥಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೋಹಿನ್ ನಕಲು ಮಾಡುತ್ತಿರುವಾಗ ಸಿಕ್ಕಿದ್ದಾನೆ. ಶಿಕ್ಷಕರು ಮೋಹಿನ್​ನನ್ನು ಕ್ಲಾಸ್​​ ರೂಮ್​ನಿಂದ ಹೊರಗೆ ಕಳುಹಿಸಿದ್ದಾರೆ. ಇದರಿಂದ ನೊಂದ ಮೋಹಿನ್ ಬೆಳಗ್ಗೆ 11 ಗಂಟೆಗೆ ಶಾಲೆಯಿಂದ ಹೊರಗೆ ಬಂದಿದ್ದಾನೆ.

  • Share this:

ಪರೀಕ್ಷೆಯಲ್ಲಿ (Exams) ನಕಲು ಮಾಡ್ತಿದ್ದಕ್ಕೆ ಕ್ಲಾಸ್​ ರೂಮಿನಿಂದ (Class room) ಶಿಕ್ಷಕರು (Teacher) ಹೊರಗೆ ಹಾಕಿದ್ದಕ್ಕೆ 10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ (SSLC Student) 13ನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಮೋಹಿನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮೋಹಿನ್ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಓದುತ್ತಿದ್ದನು. ಬೆಂಗಳೂರಿನ ನಾಗವಾರ ಬಳಿಯ ಆರ್ ಆರ್ ಸಿಗ್ನೇಚರ್ ಅಪಾರ್ಟ್ಮೆಂಟ್​​​ನ (RR Signature Apartment) 13ನೇ ಮಹಡಿಯಿಂದ ಮೋಹಿನ್ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.


ಮಂಗಳವಾರ ಶಾಲೆಯಲ್ಲಿ ಮಧ್ಯಂತರ ಪರೀಕ್ಷೆಗಳು ನಡೆಯುತ್ತಿದ್ದವು. ಈ ವೇಳೆ ಮೋಹಿನ್ ನಕಲು ಮಾಡುತ್ತಿರುವಾಗ ಸಿಕ್ಕಿದ್ದಾನೆ. ಶಿಕ್ಷಕರು ಮೋಹಿನ್​ನನ್ನು ಕ್ಲಾಸ್​​ ರೂಮ್​ನಿಂದ ಹೊರಗೆ ಕಳುಹಿಸಿದ್ದಾರೆ. ಇದರಿಂದ ನೊಂದ ಮೋಹಿನ್ ಬೆಳಗ್ಗೆ 11 ಗಂಟೆಗೆ ಶಾಲೆಯಿಂದ ಹೊರಗೆ ಬಂದಿದ್ದಾನೆ. ತನ್ನ ಮನೆ ಎದುರಿನ ಅಪಾರ್ಟ್​ಮೆಂಟ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.


ಆತ್ಮಹತ್ಯೆಯ ದೃಶ್ಯ ಮೊಬೈಲ್​​ನಲ್ಲಿ ಸೆರೆ


ಮೋಹಿನ್ ಕಟ್ಟಡದ ಮೇಲಿನಿಂದ ಜಿಗಿಯುವ ದೃಶ್ಯಗಳ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ದೃಶ್ಯ ಸೆರೆ ಹಿಡಿಯುತ್ತಿದ್ದ ವ್ಯಕ್ತಿ ತುಂಬಾ ದೂರದಲ್ಲಿರುವ ಕಾರಣ ಅವರಿಂದ ಏನು ಮಾಡಲು ಸಾಧ್ಯವಾಗಿಲ್ಲ.


ಆರ್ ಆರ್ ಸಿಗ್ನೇಚರ್ ಅಪಾರ್ಟ್ಮೆಂಟ್ ಒಳಗೆ ಅಪರಿಚಿತರಿಗೆ ಪ್ರವೇಶ ನೀಡಲ್ಲ. ಆದ್ರೆ ಬಾಲಕ ಮೋಹಿನ್ ಒಳಗೆ ಹೋಗಿದ್ದು ಹೇಗೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಮೋಹಿನ್ ಮಹಮ್ಮದ್ ನೂರ್, ನೋಹೇರಾ ದಂಪತಿಯ ಒಬ್ಬನೇ ಮಗನಾಗಿದ್ದಾನೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಶಾಲಾ ಆಡಳಿತ ಮಂಡಳಿಯಿಂದ ಫೋನ್


ನಮಗೆ ಮೋಹಿನ್ ಒಬ್ಬನೇ ಮಗ. ಬೆಳಗ್ಗೆ 10:30ಗೆ ಶಾಲೆಯಿಂದ ಹೊರಗಡೆಗೆ ಬಂದಿದ್ದಾನೆ. ನಂತರದಲ್ಲಿ ಶಾಲೆ ಆಡಳಿತ ಮಂಡಳಿ ನಮಗೆ ಫೋನ್ ಬಂದಿದೆ. ಅದಾದ ಮೇಲೆ ತಿಳಿಯಿತು ನನ್ನ ಮಗ ಅಲ್ಲಿಂದ ಹೊರಗಡೆ ಹೋಗಿದ್ದಾನೆ. ನಾವು ಸಹ ಎಲ್ಲಾ ಕಡೆ ಹುಡುಕಿದ್ದೀವಿ. ಆದ್ರೆ ಎಲ್ಲಿಯೂ ಆತ ಪತ್ತೆಯಾಗಿಲ್ಲ. ನಂತರ ನನ್ನ ಮಗ ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದಿದ್ದಾನೆ ಎಂದು ನೋರಾ ಹೇಳಿದ್ದಾರೆ.


ತಾಯಿಯಿಂದಲೇ ಮಗಳ ಕೊಲೆ


ದೇಶದಲ್ಲೇ ಸಂಚಲನ ಮೂಡಿಸಿದ್ದ 4 ನೇ ಮಹಡಿಯಿಂದ ತನ್ನ ಮಗುವನ್ನು ಎಸೆದು ಕೊಂದ ಬೆಂಗಳೂರಿನ ಸಂಪಂಗಿರಾಮನಗರದ ಸುಶ್ಮಾ ಎಂಬಾಕೆಯ ಪ್ರಕರಣ ರೋಚಕ ಬೆಳವಣಿಗೆ ಘಟಿಸಿದೆ. ಸದ್ಯ ಈ ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.


ಇದನ್ನೂ ಓದಿ:  Instagram Reels: 24 ಗಂಟೆ ರೀಲ್ಸ್‌ನಲ್ಲೇ ಕಾಲ ಕಳಿತಾಳೆ ಅಂತ ಹೆಂಡ್ತಿಗೆ ಹೊಡೆದ ಗಂಡ! ರೀಲ್ ಅಲ್ಲ ರಿಯಲ್ ಆಗೇ ನಡೀತು ಮರ್ಡರ್!


ಆಟಿಸಂ ಇತ್ತೆಂದು ಸ್ವತಃ ತನ್ನ ಮಗಳನ್ನೇ ಆರೋಪಿತೆ ಸುಶ್ಮಾ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಾಳೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.


ಮಗು ಕುರಿತು ಶುರುವಾಗಿತ್ತು ಅಸಡ್ಡೆ


ಆಟಿಸಂ ಇತ್ತೆಂದು ಸ್ವತಃ ತನ್ನ ಮಗಳನ್ನೇ ಆರೋಪಿತೆ ಸುಶ್ಮಾ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಾಳೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.


ತನ್ನ ಮಗು ಕುರಿತೇ ತನಗೆ ಅಸಡ್ಡೆ ಶುರುವಾಗಿತ್ತು ಎಂದು ಆರೋಪಿ ಸುಶ್ಮಾ ಒಪ್ಪಿಕೊಂಡಿರುವುದಾಗಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ:  Moola Nakshatra: ಮೂಲ ನಕ್ಷತ್ರದ ಮಗುವಿಂದ ಮನೆಗೆ ಕೇಡು ಎಂದ ಜ್ಯೋತಿಷಿ! ಹೆಂಡತಿ ಜೊತೆ ಕಂದನನ್ನೂ ಹೊರಹಾಕಿದ ತಂದೆ!


ತಪ್ಪೊಪ್ಪಿಕೊಂಡಿರುವ ಹಂತಕಿ ತಾಯಿ


ಮಗಳಿಗೆ ಆಟಿಸಂ ಸಮಸ್ಯೆ ಇರುವುದರಿಂದ ಕಿರಿಕಿರಿ ಅನುಭವಿಸಿದ್ದ ತಾಯಿ ಸುಶ್ಮಾ ಮಗುವನ್ನು ಮಹಡಿಯಿಂದ ಎಸೆದಿರುವುದಾಗಿ ತಾಯಿ ಸುಶ್ಮಾ ಒಪ್ಪಿಕೊಂಡಿದ್ದಾಳೆ.

Published by:Mahmadrafik K
First published: