HOME » NEWS » State » SSLC STUDENT COMMITS SUICIDE AFTER FAILING EXAM MAK

ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಮನನೊಂದು SSLC ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಮೃತ ವಿದ್ಯಾರ್ಥಿನಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನೆ ಮಾಡಿದ್ದು ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನು ಘಟನೆ ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಮನೆಯವರಿಂದಲೂ ಹೇಳಿಕೆ ಪಡೆದಿದ್ದಾರೆ.

news18-kannada
Updated:August 10, 2020, 10:11 PM IST
ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಮನನೊಂದು SSLC ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಆಗಸ್ಟ್‌ 10); ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

16 ವರ್ಷದ ಸಂದ್ಯಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ. ಮಹದೇವಪುರದ ಕಾವೇರಿನಗರದಲ್ಲಿ ವಾಸವಾಗಿದ್ದ ಸಂದ್ಯಾ ಗರುಡಾಚಾರ್ಯ ಪಾಳ್ಯದ ಸೆಂಟ್ ಆನ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.‌ ಇಂದು ಮಧ್ಯಾಹ್ನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪಲಿತಾಂಶ ಬಂದಿದ್ದು ಸಂಧ್ಯಾ ಮೊಬೈಲ್ ಗೂ ಮೆಸೇಜ್ ಬಂದಿದೆ.

ಆದರೆ, ಪರೀಕ್ಷೆಯಲ್ಲಿ ಆಕೆ ನಪಾಸಾಗಿದ್ದಾಳೆ. ನಂತರ ವೆಬ್‌ಸೈಟಿಗೂ ಹೋಗಿ ಆಕೆ ಚೆಕ್ ಮಾಡಿದ್ದಾಳೆ. ಈವೇಳೆ ಗಣಿತ ಹಾಗೂ ಇಂಗ್ಲೀಷ್ ವಿಷಯಗಳೆರಡರಲ್ಲೂ ಫೇಲ್ ಆಗಿರುವುದು ತಿಳಿದುಬಂದಿದೆ. ಅನುತ್ತೀರ್ಣ ಆಗಿರೋ ವಿಚಾರ ಗೊತ್ತಾಗಿದ್ದೇ ಮನೆಯವರು ಮೊದಲಿಗೆ ಒಂದೆರಡು ಮಾತು ಹೇಳಿದ್ರೂ ನಂತ್ರ ಅವರು ಸಂದ್ಯಾಗೆ ಧೈರ್ಯವನ್ನು ತುಂಬಿದ್ದಾರೆ. ಮರು ಪರೀಕ್ಷೆ ಇದೆ ಅಲ್ಲಿ ಪಾಸ್ ಮಾಡಿಕೋ ಆಗಿದ್ದು ಆಗ್ಲಿ ಅಂತ ಧೈರ್ಯದ ಮಾತುಗಳನ್ನು ಹೇಳಿದ್ದಾರೆ.

ಇದನ್ನೂ ಓದಿ : ಕೆಪಿಎಸ್‌ಸಿ ಕರ್ಮಕಾಂಡ; ಲಿಖಿತ ಪರೀಕ್ಷೆಗೂ ಮುನ್ನವೇ ವೈದ್ಯಕೀಯ ಪರೀಕ್ಷೆ

ಆದರೆ, ಫೇಲ್ ಆಯ್ತಲ್ಲ ಅಂತೇಳಿ ತುಂಬಾನೇ ಬೇಜಾರು ಮಾಡಿಕೊಂಡ ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ಬಾಗಿಲು ಬಡಿದಾಗ ತೆಗೆಯದೇ ಇದ್ದಾಗ ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ದೇಹ ಕಂಡು ಬಂದಿದೆ. ಕೂಡಲೇ ಮಹದೇವಪುರ ಪೊಲೀಸರಿಗೆ ವಿಚಾರ ತಿಳಿಸಿದ್ದು ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

ಇನ್ನು ಮೃತ ವಿದ್ಯಾರ್ಥಿನಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನೆ ಮಾಡಿದ್ದು ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನು ಘಟನೆ ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಮನೆಯವರಿಂದಲೂ ಹೇಳಿಕೆ ಪಡೆದಿದ್ದಾರೆ.
Published by: MAshok Kumar
First published: August 10, 2020, 10:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories