SSLC ಪೂರ್ವ ಸಿದ್ಧತಾ ಪರೀಕ್ಷೆ; ಸೋಮವಾರ ನಡೆಯಬೇಕಿದ್ದ ವಿಜ್ಞಾನ ಪ್ರಶ್ನೆ ಪತ್ರಿಕೆ ಇಂದೇ ಸೋರಿಕೆ?

ಪರೀಕ್ಷಾ ಮಂಡಳಿಯ ಬೇಜವಾಬ್ದಾರಿಯಿಂದಲೇ ಪತ್ರಿಕೆ ಲೀಕ್ ಆಯ್ತಾ? ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರುಗಳು ಈ ಕೂಡಲೇ ಈ ಘಟನೆಗೆ ಸ್ಪಷ್ಟನೆ ನೀಡಬೇಕು ಎಂಬ ಒತ್ತಾಯಗಳೂ ರಾಜ್ಯದೆಲ್ಲೆಡೆ ಕೇಳಿ ಬರುತ್ತಿದೆ.

news18-kannada
Updated:February 22, 2020, 5:16 PM IST
SSLC ಪೂರ್ವ ಸಿದ್ಧತಾ ಪರೀಕ್ಷೆ; ಸೋಮವಾರ ನಡೆಯಬೇಕಿದ್ದ ವಿಜ್ಞಾನ ಪ್ರಶ್ನೆ ಪತ್ರಿಕೆ ಇಂದೇ ಸೋರಿಕೆ?
ಸಾಂದರ್ಭಿಕ ಚಿತ್ರ.
  • Share this:
ವಿಜಯಪುರ (ಫೆಬ್ರವರಿ 22); ಸೋಮವಾರ ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದ್ದು, ವಿಜಯಪುರದಲ್ಲಿ ಪರೀಕ್ಷೆಯ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿ ಬೆಂಗಳೂರು ನಡೆಸುವ ಪರೀಕ್ಷೆಗೆ ರಾಜ್ಯ ಮಟ್ಟದಲ್ಲಿ ಒಂದೇ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಲಾಗುತ್ತದೆ. ಈ ಪೈಕಿ ವಿಜ್ಞಾನ ಪ್ರಶ್ನೆ ಪತ್ರಿಕೆ ಸಂಪೂರ್ಣವಾಗಿ ಸೋರಿಕೆಯಾಗಿದೆ. 80 ಅಂಕಗಳಿರುವ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಲೋ ಅಪ್ಲಿಕೇಶನ್​ನಲ್ಲಿ ಈ ಪ್ರಶ್ನೆ ಪತ್ರಿಕೆ ಎಗ್ಗಿಲ್ಲದೆ ಹರಿದಾಡುತ್ತಿದೆ.

ಈ ಪರೀಕ್ಷೆ ಫೆ.24 ರಂದು ಬೆಳಗ್ಗೆ 9.30ಕ್ಕೆ ನಡೆಯಬೇಕಿತ್ತು. ಆದರೆ,  ಪ್ರಶ್ನೆ ಪತ್ರಿಕೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕಾರಣ ಪರೀಕ್ಷೆ ನಡೆಯುತ್ತಾ ಎಂಬುದೇ ಇದೀಗ ಅನುಮಾನವಾಗಿದೆ. ಅಲ್ಲದೆ, ಈಗಾಗಲೇ ಬಹುತೇಕ ಜಿಲ್ಲೆಗೆ ಪ್ರಶ್ನೆ ಪತ್ರಿಕೆಯನ್ನು ರವಾನಿಸಲಾಗಿದೆ. ಎಲ್ಲೆಡೆ ಬಿಗಿ ಭದ್ರತೆಯಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಇಡಲಾಗಿರುತ್ತದೆ.

ಆದರೆ, ಇಷ್ಟೊಂದು ಬಿಗಿ ಭದ್ರತೆಯ ನಡುವೆಯೂ ಮಹತ್ವದ ಎಸ್ಎಸ್ಎಲ್​ಸಿ ಪರೀಕ್ಷೆಯ ಪಶ್ನೆ ಪತ್ರಿಕೆ ಹೇಗೆ ಲೀಕ್ ಆಯ್ತು? ಎಂಬುದು ಬಹುದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಅಲ್ಲದೆ, ಪರೀಕ್ಷಾ ಮಂಡಳಿಯ ಬೇಜವಾಬ್ದಾರಿಯಿಂದಲೇ ಪತ್ರಿಕೆ ಲೀಕ್ ಆಯ್ತಾ? ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರುಗಳು ಈ ಕೂಡಲೇ ಈ ಘಟನೆಗೆ ಸ್ಪಷ್ಟನೆ ನೀಡಬೇಕು ಎಂಬ ಒತ್ತಾಯಗಳೂ ರಾಜ್ಯದೆಲ್ಲೆಡೆ ಕೇಳಿ ಬರುತ್ತಿದೆ.

ಇದನ್ನೂ ಓದಿ : ಮಡಿವಂತರಂತೆ ಮಾತನಾಡುವವರು ವಿದೇಶಕ್ಕೆ ಹೋಗಿ ಕ್ಯಾಸಿನೊದಲ್ಲಿ ದುಡ್ಡು ಸುರಿಯುತ್ತಾರೆ: ಸಿಟಿ ರವಿ
First published:February 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading