HOME » NEWS » State » SSLC EXAMS IN KARNATAKA CONDUCTED SUCCESSFULLY SAYS MINISTER SURESH KUMAR SNVS

SSLC ಪರೀಕ್ಷೆಗೆ ನಾಡಹಬ್ಬದ ಸಂಭ್ರಮ; ಆಗಸ್ಟ್ ಮೊದಲ ವಾರ ಫಲಿತಾಂಶ: ಸಚಿವ ಸುರೇಶ್ ಕುಮಾರ್

SSLC and PUC results - ದ್ವಿತೀಯ ಪಿಯುಸಿಯ ಫಲಿತಾಂಶ ಜುಲೈ ಮೂರನೇ ವಾರ ಪ್ರಕಟವಾಗುವ ಸಾಧ್ಯತೆ ಇದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಂಶ ಆಗಸ್ಟ್ ತಿಂಗಳ ಮೊದಲ ವಾರದಂದು ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ತಿಳಿಸಿದ್ಧಾರೆ.

news18-kannada
Updated:July 3, 2020, 5:43 PM IST
SSLC ಪರೀಕ್ಷೆಗೆ ನಾಡಹಬ್ಬದ ಸಂಭ್ರಮ; ಆಗಸ್ಟ್ ಮೊದಲ ವಾರ ಫಲಿತಾಂಶ: ಸಚಿವ ಸುರೇಶ್ ಕುಮಾರ್
ಶಾಲಾ ಮಕ್ಕಳೊಂದಿಗೆ ಸಚಿವ ಸುರೇಶ್ ಕುಮಾರ್
  • Share this:
ಬೆಂಗಳೂರು(ಜುಲೈ 02): ಕೊರೋನಾ ಸೋಂಕಿನ ಅಪಾಯದ ಮಧ್ಯೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಇವತ್ತು ಮುಕ್ತಾಯಗೊಂಡಿವೆ. ಈ ವರ್ಷ ಸರಾಸರಿಯಾಗಿ ವಿದ್ಯಾರ್ಥಿಗಳ ಹಾಜರಾತಿ ಬರೋಬ್ಬರಿ ಶೇ. 98.06ರಷ್ಟಿದೆ. ಕಳೆದ ವರ್ಷ ಶೇ. 98.76ರಷ್ಟು ಹಾಜರಾತಿ ಇತ್ತು. ಈ ವರ್ಷ ರೋಗ ಭೀತಿಯ ಮಧ್ಯೆಯೂ ವಿದ್ಯಾರ್ಥಿಗಳು ಉತ್ಸಾಹ ಕಳೆದುಕೊಳ್ಳದೆ ಪರೀಕ್ಷೆ ಬರೆದಿರುವುದು ಸ್ಪಷ್ಟವಾಗಿದೆ. ಇವತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ನಾಡಹಬ್ಬದಂತೆ ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಿತು ಎಂದು ಬಣ್ಣಿಸಿದ್ದಾರೆ. ಪರೀಕ್ಷೆ ಬರೆದ ಮಕ್ಕಳು, ಪರೀಕ್ಷೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಅಧಿಕಾರಿಗಳು, ಸಹಾಯಕ್ಕೆ ನಿಂತ ವಕೀಲರು, ಡ್ರೈವರ್​ಗಳು ಮುಂತಾದವರಿಗೆ ಸಚಿವರು ಧನ್ಯವಾದ ಅರ್ಪಿಸಿದ್ದಾರೆ.

ಜೂನ್ 18ರಂದು ಪಿಯು ಪರೀಕ್ಷೆ ಮಾಡಿದೆವು. ಅಲ್ಲಿ ಕೆಲವು ಕೊರತೆ ಕಂಡವು ಆ ಪರೀಕ್ಷೆಯ ವೇಳೆ ಸಾಮಾಜಿಕ ಅಂತರ ಸರಿಯಾಗಿ ಪಾಲನೆಯಾಗದಿದ್ದನ್ನ ಗಮನಿಸಿದೆವು. ಅದು ಎಸ್ಸೆಸ್ಸೆಲ್ಸಿ ಪರೀಕ್ಷೆ ಆಯೋಜನೆಯಲ್ಲಿ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಾಧ್ಯವಾಯಿತು. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಸಾರಿಗೆ, ಕಂದಾಯ ಇಲಾಖೆಗಳು ಸಹಕಾರ ನೀಡಿವೆ. ಏನಾದರೂ ಸಮಸ್ಯೆ ಮತ್ತು ಅನುಮಾನ ಬಂದರೆ ಕೋವಿಡ್ ತಜ್ಞರಿಗೆ ಮಾಹಿತಿ ನೀಡುತ್ತಿದ್ದೆವು. ಅವರಿಂದ ಸಾಕಷ್ಟು ಸಲಹೆ ಪಡೆದುಕೊಂಡು ಪರೀಕ್ಷೆ ನಡೆಸಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದರು.

 ಇದನ್ನೂ ಓದಿ: ತಲಕಾವೇರಿ ಮಾದರಿಯಲ್ಲಿ ಶರಾವತಿ ಉಗಮಸ್ಥಳ ಅಂಬುತೀರ್ಥ ಅಭಿವೃದ್ಧಿಗೆ ಚಾಲನೆ

ಫಲಿತಾಂಶ ದಿನಾಂಕ:

ಮೂರು ವಾರಗಳ ಹಿಂದೆಯೇ ಪರೀಕ್ಷೆ ಮುಕ್ತಾಯವಾಗಿರುವ ದ್ವಿತೀಯ ಪಿಯುಸಿಯ ಫಲಿತಾಂಶ ಜುಲೈ ಮೂರನೇ ವಾರ ಪ್ರಕಟವಾಗುವ ಸಾಧ್ಯತೆ ಇದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಂಶ ಆಗಸ್ಟ್ ತಿಂಗಳ ಮೊದಲ ವಾರದಂದು ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ಅದರ ಮೌಲ್ಯ ಮಾಪನ ಜುಲೈ 13ರಂದು ಪ್ರಾರಂಭವಾಗಿ ಜುಲೈ 30ಕ್ಕೆ ಅಂತ್ಯವಾಗಬಹುದು ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.

ಮೌಲ್ಯಮಾಪನ ಕಾರ್ಯಕ್ಕೂ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ. ಅದಕ್ಕಾಗಿಯೇ ಪ್ರತ್ಯೇಕ ಮಾರ್ಗಸೂಚಿ ನೀಡಲಾಗಿದೆ. ಮೌಲ್ಯಮಾಪಕರು ಯಾವುದೇ ಭೀತಿ ಇಲ್ಲದೇ ಕೆಲಸ ಮಾಡಬಹುದು. 55 ವರ್ಷ ಮೇಲ್ಪಟ್ಟವರಿಗೆ ಮೌಲ್ಯಮಾಪನ ಕಾರ್ಯದಿಂದ ವಿನಾಯಿತಿ ನೀಡಲಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆ ಇತ್ಯಾದಿ ಬೇರೆ ಆರೋಗ್ಯ ಸಮಸ್ಯೆ ಇದ್ದವರೂ ಕೂಡ ಈ ಕೆಲಸಕ್ಕೆ ಬರಬೇಕಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹೇಳಿದರು.

ಇದನ್ನೂ ಓದಿ: ಕೊರೋನಾ ರೋಗಲಕ್ಷಣ ಇಲ್ಲದವರಿಗೆ ಮನೆಯಲ್ಲೇ ಚಿಕಿತ್ಸೆ - ಸರ್ಕಾರದ ಈ ನಿರ್ಧಾರದ ಹಿಂದಿನ ಉದ್ದೇಶವೇನು?

ವಿಧಾನಸೌಧದಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ ಸುರೇಶ್ ಕುಮಾರ್ ಅವರು ಮಾತನಾಡುವ ಮುನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆ ಆಯೋಜನೆ ಕುರಿತ ಒಂದು ಸಾಕ್ಷ್ಯ ಚಿತ್ರವನ್ನೂ ಬಿಡುಗಡೆ ಮಾಡಲಾಯಿತು. ಅದರಲ್ಲಿ ಪರೀಕ್ಷೆ ಆಯೋಜನೆಗೆ ನಿರ್ಧಾರ ತೆಗೆದುಕೊಂಡಿದ್ದರಿಂದ ಹಿಡಿದು ಸಿದ್ಧತೆ, ಸವಾಲು ಇತ್ಯಾದಿಗಳ ವಿವರ ಇದೆ.

First published: July 3, 2020, 5:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories